ರಾಜ್ಯದ ಅರ್ಚಕರಿಗೆ 3 ತಿಂಗಳುಗಳ ಮುಂಗಡ ಭತ್ಯೆ ಮತ್ತು ದಿನಸಿ ಕಿಟ್‌ಗಳ ಘೋಷಣೆ

9:47 PM, Thursday, May 20th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

purohithಬೆಂಗಳೂರು:  ರಾಜ್ಯ ಸರ್ಕಾರ  ರಾಜ್ಯದಲ್ಲಿನ  27000 ದೇವಾಲಯಗಳ ಅರ್ಚಕರಿಗೆ 3 ತಿಂಗಳುಗಳ ಮುಂಗಡ ಭತ್ಯೆ (ತಸ್ತಿಕ್) ಬಿಡುಗಡೆ ಮಾಡಿ ಆದೇಶಿಸಿದೆ. ಅಲ್ಲದೆ ‘ಸಿ’ ದರ್ಜೆ ದೇವಾಲಯಗಳ ಸಿಬ್ಬಂದಿಗಳಿಗೆ ದಿನಸಿ ಕಿಟ್‌ಗಳ ನೀಡುವಂತೆ ಆದೇಶ ಹೋರಡಿಸಲಾಗಿದೆ.

ಅದರಂತೆ ರಾಜ್ಯದಲ್ಲಿನ 50 ಸಾವಿರ ಅರ್ಚಕರಿಗೆ ಫುಡ್ ಕಿಟ್ ವಿತರಿಸಲು ಮುಜರಾಯಿ ಇಲಾಖೆ ತೀರ್ಮಾನಿಸಿದ್ದು ಸರ್ಕಾರದಿಂದ ಒಟ್ಟು ನಾಲ್ಕೂವರೆ  ಕೋಟಿ ಹಣ ಬಿಡುಗಡೆಯಾಗದೆ ಎಂದು  ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಬಡ ಅರ್ಚಕರು ಪುರೋಹಿತರು ಮತ್ತು ಅಡುಗೆ ಕೆಲಸದವರಿಗೆ, ಮುಜರಾಯಿ ಇಲಾಖೆಯ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಧನಸಹಾಯ, ದಿನಸಿ ಕಿಟ್ ಗಳನ್ನು ಒದಗಿಸುವ  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ಅಧ್ಯಕ್ಷರಾದ ಹೆಚ್.ಎಸ್. ಸಚ್ಚಿದಾನಂದಮೂರ್ತಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಜರಾಯಿ ಖಾತೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ರವರನ್ನು ಬೇಟಿ ಮಾಡಿ ಮನವಿ ಪತ್ರ ನೀಡಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English