ನವದೆಹಲಿ : ಪುಣೆ ಮೂಲದ ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್ ಲಿಮಿಟೆಡ್ ಕೋವಿಡ್-19 ಪರೀಕ್ಷೆಯನ್ನು ಮನೆಯಲ್ಲಿಯೇ ನಡೆಸುವ ಕ್ಷಿಪ್ರ ಆಂಟಿಜೆನ್ ಪರೀಕ್ಷೆ (ಆರ್‌ಎಟಿ) ಮಾಡುವ ಕಿಟ್ ತಯಾರಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಗುರುವಾರ ಈ ಕಿಟ್ ಗೆ ಅನುಮೋದನೆ ನೀಡಿದೆ.
ಕೋವಿಸೆಲ್ಫ್ ಟಿಎಂ (ಪ್ಯಾಥೊಕ್ಯಾಚ್) ಕೋವಿಡ್-19 ಒಟಿಸಿ ಆಂಟಿಜೆನ್ ಎಲ್ಎಫ್ ಸಾಧನ ಎಂದೂ ಕರೆಯಲ್ಪಡುವ ಸ್ವಯಂ-ಪರೀಕ್ಷೆಯ ಕೋವಿಸೆಲ್ಫ್ ಕಿಟ್ ಇದಾಗಿದೆ.
ಆರ್‌ಎಟಿಗಳನ್ನು ಹೇಗೆ ಮತ್ತು ಯಾರು ಬಳಸಬಹುದು ಎಂಬುದರ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದ ಐಸಿಎಂಆರ್, ರೋಗಲಕ್ಷಣಗಳುಳ್ಳ ವ್ಯಕ್ತಿಗಳಲ್ಲಿ ಮತ್ತು ಪ್ರಯೋಗಾಲಯ-ದೃಢಪಡಿಸಿದ ಪಾಸಿಟಿವ್ ಪ್ರಕರಣಗಳ ತಕ್ಷಣದ ಸಂಪರ್ಕಗಳಲ್ಲಿ ಮಾತ್ರ ಮನೆ ಪರೀಕ್ಷೆಯನ್ನು ಸೂಚಿಸಲಾಗುತ್ತದೆ ಎಂದಿದೆ.
ಈ ಕೋವಿಡ್ ಟೆಸ್ಟ್ ಕಿಟ್ ಗೆ ಕಂಪನಿ 250 ರೂ. ಬೆಲೆ ನಿಗದಪಡಿಸಿದ್ದ, ಕೆಲವೇ ದಿನಗಳಲ್ಲಿ ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಲಭ್ಯವಾಗಲಿದೆ
Click this button or press Ctrl+G to toggle between Kannada and English