ಮಂಗಳೂರು : ನಾಡಿನ ಸಮಾಜಮುಖಿ ವೈದ್ಯರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯರ ಮೇಲೆ ಕ್ಷುಲ್ಲಕ ಕಾರಣಕ್ಕೆ ಕೇಸ್ ದಾಖಲಿಸಿರುವುದಕ್ಕೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ. ಸೂಪರ್ ಮಾರ್ಕೆಟ್ ಒಳಗಡೆ ಮಾಸ್ಕ್ ಧರಿಸಲಿಲ್ಲ ಎಂಬ ಕಾರಣಕ್ಕೆ ನಡೆದ ವಾದ ವಿವಾದದ ಅನ್ವಯ ಈ ಕೇಸನ್ನು ದಾಖಲಾತಿಸಲಾಗಿದೆ ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದು ಇದು ಪಿತೂರಿಯ ಷಡ್ಯಂತ್ರವಿದೆ ಕೂಡಿದ್ದು ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ವೀಡೀಯೋ ದಿಂದ ತಿಳಿದು ಬರುತ್ತದೆ ಎಂದು ಸಿಪಿಐ(ಎಂ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಈ ಅವದಿಯಲ್ಲಿ ಆಡಳಿತ ಪಕ್ಷದ ನಾಯಕರುಗಳು ಹಲವಾರು ಸಭೆ ಸಮಾರಂಭಗಳಲ್ಲಿ ಮಾಸ್ಕ್ ಧರಿಸದೆ ಇದ್ದುದರ ಬಗ್ಗೆ ಪೋಲೀಸ್ ಇಲಾಖೆ ಯಾವುದೆ ಕೇಸ್ ಹಾಕದೆ ಇದ್ದು ಸರ್ಕಾರದ ವಿರುದ್ಧ ಡಾ.ಕಕ್ಕಿಲ್ಲಾಯರು ತಪ್ಪು ನೀತಿಗಳ ವಿರುದ್ದ ನಡೆಸುತ್ತಿದ್ದ ಧ್ವನಿಯನ್ನು ಅಡಗಿಸುವ ಸರ್ಕಾರದ ಛಾಳಿಯ ಭಾಗವಾಗಿ ಈ ಕೇಸ್ ಹಾಕಲಾಗಿದೆ.ಸಿಪಿಐ (ಎಂ) , ಡಾ.ಬಿ ಶ್ರೀ ನಿವಾಸ ಕಕ್ಕಿಲ್ಲಾಯರೊಂದಿಗೆ ನಿಲ್ಲುತ್ತದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English