ಧಾರವಾಡ: ಸಂಪೂರ್ಣ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ- ಡಿಸಿ

9:20 PM, Friday, May 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

Nithish Pateelಧಾರವಾಡ: ಧಾರವಾಡ ಜಿಲ್ಲೆಯಲ್ಲಿ ನಾಳೆ (ಮೇ 22ರ) ಬೆಳಿಗ್ಗೆ 6 ಗಂಟೆಯಿಂದ ಮೇ 24ರ ಬೆಳಿಗ್ಗೆ 6 ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದ್ದು, ಸಾರ್ವಜನಿಕರು ಸಹಕಾರ ನೀಡಿ, ಕೋವಿಡ್ ತಡೆಗಟ್ಟುವುದಕ್ಕಾಗಿ ಲಾಕ್‌ಡೌನ್ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿನಂತಿಸಿದರು.

ಅವರು ಇಂದು ಸಂಜೆ ಧಾರವಾಡ ಮಾಧ್ಯಮ ಪ್ರತಿನಿಧಿಗಳೊಂದಿಗೆ ವರ್ಚವಲ್ ಆನ್‍ಲೈನ್ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಲಾಕ್‌ಡೌನ್ ಅವಧಿಯ ಎರಡು ದಿನ ಬೆಳಿಗ್ಗೆ 6ರಿಂದ 8 ಗಂಟೆಯವರೆಗೆ ನಾಗರಿಕರು ತಮ್ಮ ಮನೆಗೆ ಹತ್ತಿರವಿರುವ ವ್ಯಾಪಾರಿಗಳಿಂದ ಹಾಲು, ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಆಸ್ಪತ್ರೆ, ಔಷಧ ಅಂಗಡಿ ಎಂದಿನಂತೆ ತೆರೆದಿರುತ್ತವೆ. ಸರಕುವಾಹನ, ಸರ್ಕಾರಿ ವಾಹನ ಹಾಗೂ ಕೋವಿಡ್ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆಹಾರ ಸಂಸ್ಕರಣಾ ಘಟಕಗಳು, ಪೇರಿಸೇಬಲ್ ಸರಕು ಮತ್ತು ಕೆಲವು ನಿರ್ಧಿಷ್ಟ ಕೈಗಾರಿಕೆಗಳಿಗೆ ಮಾತ್ರ ಅವಕಾಶವಿದ್ದು, ಉಳಿದಂತೆ ಎಲ್ಲ ಕೈಗಾರಿಕೆ, ಕಟ್ಟಡ ನಿರ್ಮಾಣ, ಕಿರಾಣಿ ಅಂಗಡಿ, ಹೋಟೆಲ್ ಸೇರಿದಂತೆ ಎಲ್ಲವುಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಕೃಷಿ ಚಟುವಟಿಕೆಗೆ ಪೂರಕವಾದ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರು ಬೆಳಿಗ್ಗೆ ಅನುಮತಿಸಿರುವ ಅವಧಿಯಲ್ಲಿ ತಮ್ಮ ಗ್ರಾಮ ಅಥವಾ ಸಮೀಪದ ಹೋಬಳಿ, ತಾಲೂಕುಗಳಿಂದ ಖರೀದಿಸಬೇಕು. ಸಮಯ ಮೀರಿ ಅನಾವಶ್ಯಕವಾಗಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರ ತೆರೆಯಲು ಅನುಮತಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರಿಗೆ ಅನುಗುಣವಾಗಿ ಕೋವಿಡ್ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಧಾರವಾಡದ ಬಿ.ಡಿ.ಜತ್ತಿ, ಸಿ.ಬಿ.ಗುತ್ತಲ್, ಕವಿವಿ ಆವರಣದ ವಿದ್ಯಾರ್ಥಿನಿಯರ ವಸತಿ ನಿಲಯ, ಹುಬ್ಬಳ್ಳಿಯ ದೇಶಪಾಂಡೆ ಪೌಂಡೇಶನ್, ಸಂಜೀವಿನಿ ಆಯುರ್ವೆದ ಮಹಾ ವಿದ್ಯಾಲಯ ಹಾಗೂ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು ಆರಂಭಿಸಿರುವ ಕಾಳಜಿ ಕೇಂದ್ರಗಳು ಮತ್ತು ಪ್ರತಿ ತಾಲೂಕಾ ಕೇಂದ್ರ ಸ್ಥಾನದಲ್ಲಿ 100 ಬೆಡ್‍ಗಳ ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಆದರೆ ಬಹುತೇಕರು ಹೋಮ್ ಐಸೋಲೆಷನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮತ್ತು ಅಗತ್ಯವಿದ್ದರೆ ಪ್ರತಿ ಗ್ರಾಮ ಮಟ್ಟದಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಲು ಗ್ರಾಮಮಟ್ಟದ ಕೋವಿಡ್ ಕಾರ್ಯಪಡೆಗಳಿಗೆ ಸೂಚಿಸಲಾಗಿದೆ. ಅಲ್ಲಿ ಅಗತ್ಯವಿರುವ ಔಷದಿ, ಆಹಾರ ಮತ್ತು ಇತರೆ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಮಾತನಾಡಿದರು.

ಪತ್ರಿಕಾಗೋಷ್ಠಿ ಪೂರ್ವದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಬುರಾಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರು ಜಿಲ್ಲೆಯ ಸಾರ್ವಜನಿಕರೊಂದಿಗೆ ವರ್ಚವಲ್ ಸಭೆ ಜರುಗಿಸಿ ಲಾಕ್‍ಡೌನ್ ಮಾಹಿತಿಯನ್ನು ನೀಡಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಬೆಂಗಳೂರು : ಕೋವಿಡ್ ಸೋಂಕಿತರು ಅತೀಯಾದ ಸ್ಟಿರಾಯ್ಡ್ ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಬ್ಲಾಕ್ ಫಂಗಸ್ ಗೆ ತುತ್ತಾಗುವುದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಇದರ ಬಳಕೆಗೆ ಸೂಕ್ತ ಕಡಿವಾಣ ಹಾಕಬೇಕಿದೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ಇಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಡ್ರಗ್ಸ್ ಲಾಜಿಸ್ಟಿಕ್ಸ್ ಸೊಸೈಟಿಯಧಿಕಾರಿಗಳ ಜೊತೆಗೆ ಸಚಿವ ಆರ್ ಅಶೋಕ ಅವರು ಕೋವಿಡ್ ಔಷಧಿ ಲಭ್ಯತೆ ಕುರಿತಂತೆ ಪರಾಮರ್ಶೆ ಸಭೆ ನಡೆಸಿದರು. ಈ ವೇಳೆ ಸ್ಟಿರಾಯ್ಡ್ ಬಳಕೆಯ ಕುರಿತಂತೆ ಸೂಕ್ತ ಮಾರ್ಗಸೂಚಿಯನ್ನ ಹೊರಡಿಸಬೇಕಿದೆ. ಇಂದು ಹೋಮ್ ಐಸೋಲೇಷನ್ ಕಿಟ್ ನಲ್ಲಿಯೂ ಕೂಡಾ ಸ್ಟಿರಾಯ್ಡ್ ಮಾತ್ರೆಗಳನ್ನ ಇಟ್ಟು ಕೊಡಲಾಗುತ್ತಿದೆ. ಇದರ ಬಳಕೆಯನ್ನ ಆಸ್ಪತ್ರೆಗಳಲ್ಲಿ ಅದು ವೈದ್ಯರ ಸೂಚನೆಯ ಮೇರೆಗೆ ಮಾತ್ರ ಬಳಸುವಂತೆ ಸೂಚಿಸಬೇಕು. ಹಾಗೆಯೇ ವಿಶ್ವಾರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನ ಅನುಸರಿಸುವುದರ ಜೊತೆಗೆ ಕೆಲ ನಿಭರ್ಂಧನೆಗಳನ್ನು ಹಾಕಬೇಕಿದೆ, ಎಂದರು.

ನಂತರದಲ್ಲಿ ರೆಮ್ಡೆಸಿವಿರ್ ಲಭ್ಯತೆ ಕುರಿತಂತೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು,”ಸಧ್ಯ ರೆಮ್ಡೆಸಿವಿರ್ ವಯಲ್ ಗಳ ಕೊರತೆ ಕಾಡುತ್ತಿಲ್ಲ. ಈ ಮೊದಲು ದಿನಕ್ಕೆ 18 ರಿಂದ 20 ಸಾವಿರ ವಯಲ್ ಗಳಿಗೆ ಬೇಡಿಕೆ ಇತ್ತು. ಈಗ ಅದು 5 ಸಾವಿರಕ್ಕೆ ಇಳಿದಿದೆ. ಖುದ್ದು ನಾನು ಕೂಡಾ ಕೆಲ ಆಸ್ಪತ್ರೆಗಳಿಗೆ ಕರೆ ಮಾಡಿ ಅವರಿಗೆ ಅಗತ್ಯವಿರುವಷ್ಟು ವಯಲ್ ಗಳು ದೊರಕುತ್ತಿರುವುದರ ಬಗ್ಗೆ ಖಚಿತ ಪಡಿಸಿಕೊಂಡಿದ್ದೇನೆ”, ಎಂದು ತಿಳಿಸಿದರು.

ಬ್ಲಾಕ್ ಫಂಗಸ್ ವಿಚಾರವಾಗಿ ನನಗೂ ಕೂಡಾ ಹಲವು ಕರೆಗಳು ಬರುತ್ತಿವೆ. ಈಗಾಗಲೇ ಚಿಕಿತ್ಸೆಯ ಕುರಿತಂತೆ ಸ್ಪಷ್ಟ ಮಾಹಿತಿಗಳನ್ನ ನೀಡಲಾಗಿದೆ. ಚಿಕಿತ್ಸೆಗೆ ಬೇಕಾದ ಔಷಧಿ ಕುರಿತಂತೆ ಈಗಾಗಲೇ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರ ಜೊತೆ ಮಾತನಾಡಿದ್ದೇನೆ. ನಾಳೆ 10 ಸಾವಿರ ವಯಲ್ ಗಳನ್ನ ಕೇಂದ್ರವು ಕಳುಹಿಸಿಕೊಡಲಿದ್ದು, ಇನ್ನೂ ಹೆಚ್ಚಿನ ಹಂಚಿಕೆ ರಾಜ್ಯಕ್ಕೆ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ”, ಎಂದರು.

ಸೋಂಕಿನಿಂದ ಸಾವನ್ನಪ್ಪಿದವರ ಅಸ್ಥಿಗಳಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,”ಚಿತಾಗಾರಗಳಲ್ಲಿ ಇನ್ನೂ 1 ಸಾವಿರಕ್ಕೂ ಅಧಿಕ ಸಾವನ್ನಪ್ಪಿದವರ ಅಸ್ಥಿಗಳನ್ನ ಸಂಬಂಧಿಗಳು ತೆಗೆದುಕೊಂಡು ಹೋಗಿಲ್ಲ. ನಾವು ಸಂಬಂಧಿಸಿದವರಿಗೆ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ಫೋನ್  ಗಳು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಸರ್ಕಾರವು ಗೌರವಯುತವಾಗಿ ಅವುಗಳ ವಿಸರ್ಜನೆಗೆ ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಿದೆ”, ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸುವ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪತ್ರದ ಕುರಿತಂತೆ ಪ್ರಶ್ನೆಗೆ ಉತ್ತರಿಸಿದ ಸಚಿವರು,”ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಿರೋಧ ಪಕ್ಷದ ನಾಯಕರಿಗೆ ಹೀಗೆ ಜಿಲ್ಲಾಧಿಖಾರಿಗಳ ಸಭೆ ನಡೆಸಲು ಅನುಮತಿ ಕೊಟ್ಟಿದ್ದರಾ? ಆ ರೀತಿ ಸಭೆ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಬೇಕಿದ್ದರೆ ಅವರು ಪತ್ರ ಮುಖೇನ ಅಗತ್ಯ ಮಾಹಿತಿ ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English