ಲಾಕ್ ಡೌನ್ ಜೂಜಾಟ : ಹನ್ನೊಂದು ಮಂದಿಯ ಬಂಧನ, 1,76,800/- ರೂ ಮೌಲ್ಯದ ಸೊತ್ತು ವಶ

11:42 PM, Friday, May 21st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Andar Baharಮಂಗಳೂರು : ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಪದವು ಗ್ರಾಮದ ಬಿಕರ್ನಕಟ್ಟೆಯ ಬಾಡಿಗೆ ಮನೆಯೊಂದರಲ್ಲಿ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ, ಸಾಮಾಜಿಕ ಅಂತರವನ್ನು ಪಾಲಿಸದೇ ಮಾಸ್ಕ್ ಧರಿಸದೇ ಅಕ್ರಮ ಜೂಜಾಟವಾದ ಆಂದರ್- ಬಾಹರ್ ಆಟವನ್ನು ಆಡುತ್ತಿದ್ದ ಹನ್ನೊಂದು ಮಂದಿಯನ್ನು ಮಂಗಳೂರು ಸಿಸಿಬಿ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್ಐಯವರಾದ  ರಾಜೇಂದ್ರ. ಬಿ, ಪ್ರದೀಪ ಟಿಆರ್ ಮತ್ತು ಸಿಬ್ಬಂದಿಗಳು ಮೇ 21 ಶುಕ್ರವಾರ ಬಂಧಿಸಿದ್ದಾರೆ.

1) ರಾಜೇಂದ್ರ ಹಲ್ದಾರ್(41), ವಾಸ:, ಆದಿಲಬಾದ್, ತೆಲಂಗಾಣ, ಹಾಲಿ ವಾಸ ಪದವು ಕುಲಶೇಖರ, ಮಂಗಳೂರು 2) ಕನಕಪ್ಪ ಕೋಟಿ(40), ಹಾಲಿ ವಾಸ:  ಶಿವಭಾಗ್ ಪೆಟ್ರೋಲ್ ಪಂಪ್ ಬಳಿ, ಕದ್ರಿ, ಮಂಗಳೂರು 3) ರಾಘವೇಂದ್ರ(24) ವಾಸ: ಬಿಜೈ ನ್ಯೂರೋಡ್, ಬಿಜೈ, ಮಂಗಳೂರು 4) ಉಮೇಶ ರಾಮಪ್ಪ ಚೌಡಪ್ಪ,(24), ಹಾಲಿ ವಾಸ: ಶ್ರೀ ಅನಂತ ಕೃಪಾ ಆಪಾರ್ಟ್ ಮೆಂಟ್, ಭಾರತಿ ನಗರ, ಬಿಜೈ, ಮಂಗಳೂರು. 5) ಲಕ್ಷ್ಮಪ್ಪ,(37), ವಾಸ: ಲಿಂಗಪುರ ಕೆಲವಾಡಿ, ಬಾದಮಿ, ಬಾಗಲಕೋಟೆ, 6) ರೋಹನ್ ಎಲ್@ ರಂಗಪ್ಪ(24), ವಾಸ:   ಮರೋಳಿ ತಾತವು ಮನೆ, ಕುಲಶೇಖರ, ಮಂಗಳೂರು 7)  ಲಕ್ಕಪ್ಪ,(26), ವಾಸ: ಮುದೆನೂರು ಮನೆ & ಗ್ರಾಮ, ರಾಮದುರ್ಗ, ಬೆಳಗಾವಿ 8) ಹನುಮಪ್ಪ ವಾಲಿಕಾರ್(26), ಹಾಲಿ ವಾಸ ಬಾರೆಬೈಲು, ಮಂಗಳೂರು. 9) ಬಾಸ್ಕರ, ಪ್ರಾಯ(54) ವಾಸ: ಬಿರಬ್ಬಿ ಮನೆ ಹೂವಿನಹಡಗಲಿ, ಬಳ್ಳಾರಿ 10) ಚಿದಾನಂದ,(25), ವಾಸ:  , ಎಸ್ ಸಿ ಎಸ್ ಆಸ್ಪತ್ರೆ ಬಳಿ, ಬೆಂದೂರು, ಮಂಗಳೂರು 11) ಶಿವಲಿಂಗಪ್ಪ(30), ವಾಸ: ಕೋಡಿಕಲ್ 1 ನೇ ಕ್ರಾಸ್, ಮಂಗಳೂರು. ಎಂಬವರನ್ನು ದಸ್ತಗಿರಿ ಮಾಡಲಾಗಿದೆ.

ಬಂಧಿತರಿಂದ ಅಂದರ್ – ಬಾಹರ್ ಜೂಜಾಟಕ್ಕೆ ಬಳಸಿದ ರೂ.90.000/- ನಗದು, ಮೊಬೈಲ್ ಫೋನುಗಳು-10, ಇಸ್ಪೀಟ್ ಕಾರ್ಡ್ ಗಳು, ಹೀಗೆ ಒಟ್ಟು 1,76,800/- ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು,  ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English