ಲಾಕ್‌ ಡೌನ್‌ನಿಂದ ಸಂಕಷ್ಟಕ್ಕೀಡಾದ ಧ್ವನಿಬೆಳಕು, ಫೋಟೋಗ್ರಾಫರ್ಸ್, ಕ್ಯಾಟರಿಂಗ್, ಶಾಮಿಯಾನ ಉದ್ಯೋಗಿಗಳು

6:35 PM, Saturday, May 22nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Sounds lightsಮಂಗಳೂರು : ನಮಗೆ ಕಳೆದ ಬಾರಿಯೂ ಲಾಕ್‌ಡೌನ್ ಸಂದರ್ಭವೂ ವ್ಯಾಪಾರವಿಲ್ಲ, ಈ ಬಾರಿಯೂ ವ್ಯಾಪಾರದ ಅವಧಿಯಲ್ಲಿಯೇ ಲಾಕ್ ಡೌನ್ ಮಾಡಲಾಗಿದೆ.  ನಮ್ಮ ಸಂಸ್ಥೆಗಳಲ್ಲಿ ದುಡಿಯುವ ಸಾವಿರಾರು ಸಂಖ್ಯೆಯ ಸಿಬ್ಬಂದಿಯಿದ್ದಾರೆ. ಅವರ ಕುಟುಂಬವಿದೆ. ನಮಗೆ ಯಾವುದೇ ಪರ್ಯಾಯ ಉದ್ಯೋಗವಿಲ್ಲ ನಮಗೆ ಯಾವುದೇ ರೀತಿಯ ಪರಿಹಾರ ನೀಡಿಲ್ಲ ಎಂದು  ದ.ಕ. ಜಿಲ್ಲಾ ಧ್ವನಿಬೆಳಕು, ಫೋಟೋಗ್ರಾಫರ್ಸ್, ಕ್ಯಾಟರಿಂಗ್, ಶಾಮಿಯಾನ ಮಾಲಕರ ಸಂಘಗಳ ಮುಖ್ಯಸ್ಥರು ಹೇಳಿದ್ದಾರೆ.

ಈ ಸಂಘಟನೆಗಳ ಮುಖ್ಯಸ್ಥರು ತಮಗೂ ಸರಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ತ್ರಿಕಾಗೋಷ್ಠಿ ನಡೆಸಿ ವಿವಿರ ನೀಡಿದ ಮಾಲಕರು  ನಮಗೆ ವ್ಯವಹಾರ ಸೀಸನ್ ಇರುವುದೇ ಮುಖ್ಯವಾಗಿ ಜನವರಿಯಿಂದ ಮೇ ಅವಧಿಯಲ್ಲಿ. ಇದೇ ಅವಧಿಯಲ್ಲಿ ಕಳೆದ ವರ್ಷವೂ ಲಾಕ್‌ ಡೌನ್‌ನಿಂದ ನಮ್ಮ ಕುಟುಂಬಗಳು ಸಂಕಷ್ಟಕ್ಕೀಡಾಗಿತ್ತು. ನಮ್ಮ ಜತೆ ನಮ್ಮನ್ನೇ ಆಶ್ರಯಿಸಿಕೊಂಡಿರುವ ನಮ್ಮ ಸಿಬ್ಬಂದಿ ಹಾಗೂ ಅವರ ಕುಟುಂಬದವರೂ ತೊಂದರೆಗೀಡಾಗಿದ್ದಾರೆ. ಈ ಬಾರಿ ಮತ್ತಷ್ಟು ಸಂಕಷ್ಟದ ದಿನಗಳನ್ನು ನಾವು ಹಾಗೂ ನಮ್ಮವರು ಎದುರಿಸುತ್ತಿದ್ದಾರೆ ಎಂದು ಧ್ವನಿಬೆಳಕು ಮಾಲಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಹೇಳಿದರು.

ಕಳೆದ ವರ್ಷ ನಮಗೆ ಸರಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ. ಈ ಬಾರಿಯಾದರೂ ಸರಕಾರದ ಪ್ಯಾಕೇಜ್‌ನಲ್ಲಿ ನಮಗೂ ಒಂದಿಷ್ಟು ಪರಿಹಾರ ಸಿಗುವ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ ಎಂದು ಹೇಳಿದರು.

ಫೋಟೋಗ್ರಾಫರ್‌ಗಳಿಗೆ ವರ್ಷದಲ್ಲಿ ಕೆಲಸ ಸಿಗುವುದೇ ಫೆಬ್ರವರಿಯಿಂದ ಮೇ ವರೆಗಿನ ನಾಲ್ಕೈದು ತಿಂಗಳು. ಕಳೆದ ವರ್ಷದಿಂದ ಲಾಕ್‌ಡೌನ್‌ನಿಂದ ನಾವು ತತ್ತರಿಸಿದ್ದೇವೆ. ತಂತ್ರಜ್ಞಾನದ ಈ ಯುಗದಲ್ಲಿ ಬಹಳಷ್ಟು ಮಂದಿ ಸಾಕಷ್ಟು ಬ್ಯಾಂಕ್ ಸಾಲ ಮಾಡಿ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡು ಕೈ ಸುಟ್ಟುಕೊಂಡಿದ್ದೇವೆ. ಆದರೆ ಸರಕಾರ ಕನಿಷ್ಠ ಪ್ಯಾಕೇಜ್‌ನಿಂದಲೂ ನಮ್ಮನ್ನು ಕೈಬಿಟ್ಟಿದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಹೇಳಿದರು.

ಮಂಗಳೂರಿನಲ್ಲಿ 120 ಮಂದಿ ನೋಂದಾಯಿತ ಸದಸ್ಯರು ಹಾಗೂ 1200 ಮಂದಿ ಖಾಯಂ ಉದ್ಯೋಗಿಳಿದ್ದಾರೆ. ಜಿಎಸ್‌ಟಿ, ಬ್ಯಾಂಕ್ ಇಎಂಐ ಇವೆಲ್ಲದರ ನಡುವೆ ವ್ಯವಹಾರ ಅತಂತ್ರದಲ್ಲಿರುವಾಗಲೇ ಈ ಲಾಕ್‌ಡೌನ್ ನಮಗೆ ಏನೂ ಇಲ್ಲದಂತೆ ಮಾಡಿದೆ ಎಂದು ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ಅನೀಸ್ ಹೇಳಿದರು.

ಶ್ಯಾಮಿಯಾನ ಸಂಘದಡಿ ಮಂಗಳೂರು ಘಟಕದಲ್ಲಿ ನೋಂದಾಯಿಸಿಕೊಂಡವರ ಸಂಖ್ಯೆ 247 ಆಗಿದ್ದು, ಇವರಡಿ 1400ಕ್ಕೂ ಅಧಿಕ ಮಂದಿ ಉದ್ಯೋಗಸ್ಥರಿದ್ದಾರೆ. ಧ್ವನಿ ಬೆಳಕು ಸಂಘದಡಿ 300 ಮಂದಿ ನೋಂದಾಯಿತ ಮಾಲಕರಿದ್ದರೆ, ನೋಂದಾವಣೆ ಆಗದವರು 600ಕ್ಕೂ ಅಧಿಕ ಮಂದಿ ಇದ್ದಾರೆ ಇವರಡಿ 3500ಕ್ಕೂ ಮಂದಿ ಕೆಲಸಕ್ಕಿದ್ದಾರೆ. ಫೋಟೋಗ್ರಾಫರ್ಸ್ ದ.ಕ. ಮತ್ತು ಉಡುಪಿ ಅಸೋಸಿಯೇಶನಡಿ 3826 ಸದಸ್ಯರಿದ್ದು, ಮಂಗಳೂರು ವಲಯದಲ್ಲಿಯೇ 450 ಮಂದಿ ಸದಸ್ಯರಿದ್ದಾರೆ.

ದ.ಕ. ಜಿಲ್ಲಾ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಹರೀಶ್ ಅಡ್ಯಾರ್, ವಲಯ ಅಧ್ಯಕ್ಷ ವೆಂಕಟ್ರಾಯ ಪೈ , ಶಾಮಿಯಾನ ಮಾಲಕರ ಸಂಘದ ಗೌರವ ಅಧ್ಯಕ್ಷ ಭಾಸ್ಕರ, ಕ್ಲೇವರ್ ಡಿಸೋಜಾ, ಧ್ವನಿ ಬೆಳಕು ಸಂಘದ ಪ್ರಮುಖರಾದ ಡಿ.ಜೆ. ಶ್ಯಾಮ್ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English