ಬ್ಲ್ಯಾಕ್ -ವೈಟ್ ಫಂಗಸ್ ಇನ್ಫೆಕ್ಷನ್‍ನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಮುಂಜಾಗೃತ ಕ್ರಮ ಕೈಗೊಂಡಿದೆ : ಡಾ. ಸುಧಾಕರ್

7:23 PM, Saturday, May 22nd, 2021
Share
1 Star2 Stars3 Stars4 Stars5 Stars
(4 rating, 1 votes)
Loading...

Sudhakar Kimsಹುಬ್ಬಳ್ಳಿ: ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಇನ್ಫೆಕ್ಷನ್‍ನ್ನು ರಾಜ್ಯದಲ್ಲಿ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಎಲ್ಲ ಮುಂಜಾಗೃತ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಹೇಳಿದ್ದರು.

ನಗರದ ಕಿಮ್ಸ್ ಆಸ್ಪತ್ರೆಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಡಾ ಕೆ ಸುಧಾಕರ್, ಸರಿಯಾದ ಬ್ಲ್ಯಾಕ್ ಫಂಗಸ್ ನಿಂದ ಸಾವಿನ ಪ್ರಮಾಣ ಜಾಸ್ತಿ ಆಗಿಲ್ಲ, ಸಾಮಾನ್ಯವಾಗಿ ಇಂತಹ ಕಾಯಿಲೆಗೆ ತುತ್ತಾದವರು ವರ್ಷದಲ್ಲಿ 10 ಜನ ಇರುತ್ತಿದ್ದರು, ಆದರೆ ಈಗ 250 ಜನ ಸೋಂಕಿತರು ರಾಜ್ಯದಲ್ಲಿ ಇದ್ದಾರೆ ಹೀಗಾಗಿ ಅವರಿಗೆಲ್ಲ ಎಷ್ಟು ಔಷಧಿ ಬೇಕೋ ಅವೆಲ್ಲವನ್ನ ಸರ್ಕಾರ ನೀಡಲಿದೆ ಎಂದರು.

ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅವರು ಶೀಘ್ರದಲ್ಲೇ ಔಷಧಿ ವಿತರಿಸುವುದಾಗಿ ಹೇಳಿದ್ದಾರೆ, ಬ್ಲ್ಯಾಕ್ ಫಂಗಸ್‍ನಿಂದ ಬಳಲುತ್ತಿರುವ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ ಇದರಲ್ಲಿ ಬ್ಲ್ಯಾಕ್, ವೈಟ್ ಅಂತೇನಿಲ್ಲ, ಅದು ಕೇವಲ ಫಂಗಸ್ ಅಷ್ಟೇ, ಕಲರ್ ಬಗ್ಗೆ ಏನಿಲ್ಲ, ಅದು ಹೇಗೆ ಬರುತ್ತೆ ಅಂತ ನಾನು ಈಗಾಗಲೇ ಮಾತನಾಡಿದ್ದೇನೆ, ಬ್ಲ್ಯಾಕ್ ಫಂಗಸ್ ಸಲುವಾಗಿ ಈಗಾಗಲೇ ತಜ್ಞರ ಸಮಿತಿಯನ್ನ ರಚನೆ ಮಾಡಿದ್ದೇವೆ ಈಗಾಗಲೇ ಅವರು ರಿಪೋರ್ಟ್ ಕೊಟ್ಟಿದ್ದಾರೆ
ಜಾಸ್ತಿ ದಿನ ಐಸಿಯು ನಲ್ಲಿದ್ದವರು, ಆಕ್ಸಿಜೆನ್ ಪಡೆದವರಲ್ಲಿ ಈ ಫಂಗಸ್ ಕಾಣಿಸಿಕೊಂಡಿದೆ ಎಂದು ಡಾ.ಸುಧಾಕರ ತಿಳಿಸಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ , ಹುಬ್ಬಳ್ಳಿ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English