ಮಂಗಳೂರು : ತನ್ನ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ ವ್ಯಕ್ತಿಯೊಬ್ಬ ನಾಯಿಯನ್ನು ಬೈಕಿಗೆ ಕಟ್ಟಿ 2 ಕಿ.ಮೀ. ಎಳೆದೊಯ್ದ ಅಮಾನವೀಯ ಘಟನೆ ಕೊಂಚಾಡಿಯಲ್ಲಿ ನಡೆದಿದೆ.
ಆರೋಪಿ ಈರಯ್ಯ ಬಸಪ್ಪ ಹಿರೇಮಠ್ ಗುಲ್ಬರ್ಗ ನಿವಾಸಿಯಾಗಿದ್ದು, ಕೊಂಚಾಡಿಯ ವೈದ್ಯರ ಮನೆಯಲ್ಲಿ ತೋಟದ ಕೆಲಸಕ್ಕಿದ್ದ ಎನ್ನಲಾಗಿದೆ.
ತನ್ನ ಚಪ್ಪಲಿಯನ್ನು ಕಚ್ಚಿ ಹಾಳು ಮಾಡಿದ ಕೋಪಕ್ಕೆ ನಾಯಿಯನ್ನು ಬೈಕಿಗೆ ಕಟ್ಟಿ ಕೊಂಚಾಡಿಯಿಂದ ಮೇರಿ ಹಿಲ್ ವರೆಗೆ ಸುಮಾರು 2 ಕಿ.ಮೀ.ಎಳೆದಿದ್ದಾನೆ. ನಾಯಿಯ ಕಾಲಲ್ಲಿ ರಕ್ತ ಬಂದ ಬಳಿಕ ಅಲ್ಲಿಯೇ ಬಿಟ್ಟಿದ್ದಾನೆ. ನಾಯಿ ಜೀವಂತವಾಗಿರುವ ಮಾಹಿತಿ ಇದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಕಾನೂನಿನ ಅಡಿಯಲ್ಲಿ ನಾವು ಪ್ರಕರಣ ದಾಖಲಿಸಿದ್ದೇವೆ ಎಂದು ಡಿಸಿಪಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಆರೋಪಿ ಈರಯ್ಯ ಬಸಪ್ಪ ನನ್ನ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
Click this button or press Ctrl+G to toggle between Kannada and English