ಉತ್ತರ ಪ್ರದೇಶದಲ್ಲಿ100 ವರ್ಷಗಳ ಹಳೆಯ ಅಕ್ರಮ ಮಸೀದಿಯನ್ನು ನೆಲ ಸಮ ಮಾಡಿದ ಯೋಗಿ ಸರ್ಕಾರ

10:47 PM, Saturday, May 22nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Barabankiಉತ್ತರ ಪ್ರದೇಶ : ಇಲ್ಲಿನ ಬರಾಬಂಕಿ ಜಿಲ್ಲೆಯ ರಾಮಸ್ನೆಹಿಘಾಟ್ ತಹಸಿಲ್ ನಲ್ಲಿ ನಿರ್ಮಿಸಲಾದ 100 ವರ್ಷಗಳ ಹಳೆಯ ಮ ಸೀದಿಯನ್ನು ಯೋಗಿ ಸರ್ಕಾರ ನೆಲ ಸಮ ಮಾಡಿದೆ. ಈ ಸುದ್ದಿ ಸ್ವಲ್ಪ ಸಮಯದ ನಂತರ ರಾಜ್ಯದಲ್ಲಿ ಹರಡಿತು. ಒಂದೆಡೆ ಮು ಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಲಾಗಿದೆ. ಮತ್ತೊಂದೆಡೆ, ಮಸೀದಿಯನ್ನು ನ್ಯಾಯಸಮ್ಮತವಾಗಿ ನಿರ್ಮಿಸಲಾಗಿದೆ ಎಂದು ಆಡಳಿತ ಹೇಳಿದೆ.

100 ವರ್ಷಗಳಷ್ಟು ಹಳೆಯದಾದ ಮ ಸೀದಿಯನ್ನು ನೆಲ ಸ ಮ ಮಾಡಲಾಗಿರುವ ಈ ಘಟನೆಯ ಬಗ್ಗೆ ಮು ಸ್ಲಿಂ ಧಾರ್ಮಿಕ ಮುಖಂಡ ಮೊಹಮ್ಮದ್ ಸಬೀರ್ ಅಲಿ ಹೇಳಿಕೆ ಹೊರಬಂದಿದೆ. ಅದೇ ಸಮಯದಲ್ಲಿ, ತಹಸಿಲ್ ಅಡಿಯಲ್ಲಿರುವ ಈ ಮ ಸೀದಿಯನ್ನು ಯಾವುದೇ ಕಾನೂನು ಸಮಸ್ಯೆಗಳಿಲ್ಲದಿದ್ದರೂ ಬೃಹತ್ ಪೊ ಲೀಸ್ ಪಡೆ ಯ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ ಎಂದು ಹೇಳಿದರು. ಈ ಮ ಸೀದಿ 100 ವರ್ಷ ಹಳೆಯದಾಗಿದ್ದು, ಇದನ್ನು ಉತ್ತರ ಪ್ರದೇಶ ಸುನ್ನಿ ಕೇಂದ್ರ ವಕ್ಫ್ ಮಂಡಳಿಯಿಂದ ಮಾನ್ಯತೆ ಸಿಕ್ಕಿತ್ತು. ಈ ಜಾಗದೊಂದಿಗೆ ಯಾವುದೇ ರೀತಿಯ ಕಾನೂನು ವಿವಾ ದಗಳಿಲ್ಲ. ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತ ಸಂಬಂಧಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಮ ಸೀದಿ ಪುನರ್ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾತನಾಡುತ್ತ ಮಾರ್ಚ್‌ನಲ್ಲಿ ಉಪ ಜಿಲ್ಲಾಧಿಕಾರಿಯವರು ಮಸೀದಿಗೆ ಸಂಬಂಧಿಸಿದ ದಾಖಲಾತಿಗಳನ್ನ ಮಸೀದಿ ಕಮಿಟಿಗೆ ಕೇಳಿದ್ದರು ಎಂದು ಹೇಳಿದ್ದಾರೆ. ಅದೇ ಮ ಸೀದಿ ಕಮಿಟಿಯು ಉಪ‌ಜಿಲ್ಲಾಧಿಕಾರಿ ಕೇಳಿದ್ದ ದಾಖಲೆಗಳ ಕುರಿತಾಗಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ನ್ಯಾಯಾಲಯವು 15 ದಿನಗಳಲ್ಲಿ ಕಮಿಟಿಯಿಂದ ಉತ್ತರವನ್ನು ಕೋರಿದೆ.

ಇದರ ಹೊರತಾಗಿಯೂ, ಯಾವುದೇ ಮಾಹಿತಿ ನೀಡದೆ ಸರ್ಕಾರವು ಏಕಪಕ್ಷೀಯವಾಗಿ ಮಸೀದಿಯನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದೆ, ಇದು ಸೂಕ್ತವಲ್ಲ. ಈ ಕಾರ್ಯಾಚರಣೆ ನಡೆಸಿದ ಮಾಡಿದ ಅಧಿಕಾರಿಗಳನ್ನು ತೆಗೆದುಹಾಕಬೇಕೆಂದು ನಾವು ಒತ್ತಾಯಿಸುತ್ತೇವೆ. ಅದೇ ಸಮಯದಲ್ಲಿ, ಅಲ್ಲಿಂದ ಮ ಸೀದಿಯ ಅವಶೇಷಗಳನ್ನು ತೆಗೆದುಹಾಕುವ ಕೆಲಸವನ್ನು ನಿಲ್ಲಿಸಲಾಗಿದೆ ಮತ್ತು ಅದನ್ನು ಪುನರ್ನಿರ್ಮಿಸಲು ಒತ್ತಾಯಿಸಲಾಗಿದೆ. ಮ ಸೀದಿಯ ಭೂಮಿ ಬೇರೆಯವರಿಗೆ ಹೋಗಬಾರದು ಮತ್ತು ಅಲ್ಲಿ ಮತ್ತೆ ಮ ಸೀದಿಯನ್ನು ನಿರ್ಮಿಸಬೇಕು. ಇವು ಮು ಸ್ಲಿ ಮ ರ ಜಮೀನುಗಳು, ಅವುಗಳನ್ನು ಹಿಂದಿರುಗಿಸಬೇಕು ಎಂದಿದ್ದಾರೆ.

ಜಿಲ್ಲಾಧಿಕಾರಿ ಡಾ.ಆದರ್ಶ್ ಸಿಂಗ್ ಈ ಬಗ್ಗೆ ಮಾತಮಾಡುತ್ತ ತಹಸಿಲ್ ಪರಿಸರದಲ್ಲಿರುವ ಉಪಜಿಲ್ಲಾ ಮ್ಯಾಜಿಸ್ಟ್ರೇಟ್ ನಿವಾಸದ ಎದುರು ಅ ಕ್ರ ಮ ವಾಗಿ ಇದನ್ನ ನಿರ್ಮಿಸಲಾಗಿತ್ತು ಎಂದು ಹೇಳಿದ್ದಾರೆ. ಸಂಬಂಧಪಟ್ಟ ಜನರಿಗೆ ಮಾಲೀಕತ್ವಕ್ಕಾಗಿ ನ್ಯಾಯಾಲಯವು 2021 ಮಾರ್ಚ್ 15 ರಂದು ನೋಟಿಸ್ ಕಳುಹಿಸಿತ್ತು, ಅವರಿಗೆ ವಿಚಾರಣೆಗೆ ಅವಕಾಶ ನೀಡಿತು. ಆದರೆ ಇದಾದ ನಂತರವೇ ಆ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿದ್ದ ಜನರು ಅಲ್ಲಿಂದ ಓಡಿಹೋದರು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ, ಆ ಸಂಕೀರ್ಣದಲ್ಲಿರುವ ಮ ಸೀದಿಯನ್ನು ಅಕ್ರ ಮ ವಾಗಿ ನಿರ್ಮಿಸಲಾಗಿದೆ ಎಂದು ಸಾಬೀತಾಯಿತು ಎಂದಿದ್ದಾರೆ.

ಈ ಆಧಾರದ ಮೇಲೆ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಮಸ್ನೆಹಿಘಾಟ್ ನ್ಯಾಯಾಲಯದಲ್ಲಿ ನ್ಯಾಯಾಂಗ ಪ್ರಕ್ರಿಯೆಯಡಿಯಲ್ಲಿ ಜಾರಿಗೊಳಿಸಲಾದ ಆದೇಶವನ್ನು 17 ಮೇ 2021 ರಂದು ಪಾಲಿಸಲಾಗಿದೆ ಮತ್ತು ಆ ಕಟ್ಟಡದ ಮೇ ಲೆ ಕ್ರಮ ಕೈಗೊಳ್ಳಲಾಗಿದೆ ಎಂದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English