ಮಂಗಳೂರು : ಉಳ್ಳಾಲ ಕೋಟೆಪುರ ದ ವ್ಯಕ್ತಿಯೊಬ್ಬರಿಗೆ ಸೇರಿದ ಮೀನುಗಾರಿಕಾ ದೋಣಿಯೊಂದು ಉಳ್ಳಾಲದ ಕೊಡಿ ಎಂಬಲ್ಲಿ ಅಪಘಾತಕ್ಕೀಡಾಗಿದ್ದು, ದೋಣಿಯಲ್ಲಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ.
ಬೊಟ್ ಶನಿವಾರ ತಡರಾತ್ರಿ ಮಂಗಳೂರಿನ ಧಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟಿದ್ದು ಮೇ 23ರ ರವಿವಾರ ಮುಂಜಾನೆ ಇಲ್ಲಿನ ಕೋಡಿಯಲ್ಲಿ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದೆ.
ಉಳ್ಳಾಲ ಮೂಲದ ಅಶ್ರಫ್ ಅವರಿಗೆ ಸೇರಿದ್ದ ಅಜಾನ್ ಎಂಬ ಮೀನುಗಾರಿಕಾ ದೋಣಿ ರವಿವಾರ ಮುಂಜಾನೆ 1.30ರ ವೇಳೆಗೆ ದಡದಿಂದ ಹೊರಟಿತ್ತು.
ಕನ್ಯಾಕುಮಾರಿಯ ಐವರು ಮೀನುಗಾರರು ಮದ್ಯದ ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ದೋಣಿ ನಡೆಸಲು ಸಹೋದ್ಯೋಗಿಯೊಬ್ಬರಿಗೆ ಅವಕಾಶ ನೀಡಿದ್ದರಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ವೇಳೆ ಮೀನುಗಾರಿಕಾ ದೋಣಿ ಅಪಘಾತಕ್ಕೀಡಾಗಿದ್ದು, ಹತ್ತು ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Click this button or press Ctrl+G to toggle between Kannada and English