ಮೈಸೂರು: ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ ಎಂದು ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಮಗ ಹೇಳಿರುವ ಘಟನೆ ಮೈಸೂರಿನ ಹೆಬ್ಬಾಳದಲ್ಲಿ ನಡೆದಿದೆ.
ತಂದೆಯ ಶವ ಕೂಡ ನೋಡಲು ಬಾರದ ಮಗ, ತಂದೆ ಶವ ಬೇಡ, ಹಣ ಬೇಕು ಎಂದು ಆತನಿಗೆ ಕರೆ ಮಾಡಿ ವಿಷಯ ತಿಳಿಸಿದವರಿಗೆ ಹೇಳಿದ್ದಾನೆ,
ತಂದೆ ಮನೆಯಲ್ಲಿ ಇಟ್ಟಿರುವ ಹಣವನ್ನು ನಾನು ಇರುವ ಸ್ಥಳಕ್ಕೆ ತಂದು ಕೊಡಿ. ತಂದೆಯ ಶವ ನೀವೇ ಸುಟ್ಟು ಹಾಕಿ, ನೀವು ಮಾಡಿರುವ ಖರ್ಚನ್ನು ಅದೇ ಹಣದಲ್ಲಿ ಕೊಡುತ್ತೇನೆ ಎಂದು ಮೃತರ ಮಗ ಹೇಳಿದ್ದಾನೆ.
ವೃದ್ಧರೊಬ್ಬರು ಮೈಸೂರಿನ ಹೆಬ್ಬಾಳದ ಸೂರ್ಯ ಬೇಕರಿ ಬಳಿಯ ಮನೆಯೊಂದರಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ತಂದೆ ಮೃತಪಟ್ಟಿರೋ ಬಗ್ಗೆ ಅವರಿಂದ ದೂರ ಇದ್ದ ಅವರ ಮಗನಿಗೆ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್ ಫೋನ್ ಮಾಡಿ ವಿಷಯ ಮುಟ್ಟಿಸಿದ್ದಾರೆ. ಆಗ ಮಗ, ತಂದೆಯ ಅಂತ್ಯಕ್ರಿಯೆ ನೀವೆ ಮುಗಿಸಿ. ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ ಹಾಗೂ ಇನ್ನಿತರೆ ದಾಖಲೆಗಳನ್ನು ತಂದು ಕೊಡಿ. ನಾನು ಮೈಸೂರಿನ ಕುವೆಂಪು ನಗರದ ಶಾಂತಿ ಸಾಗರ್ ಕಾಂಪ್ಲೆಕ್ಸ್ ಬಳಿ ಇದ್ದೇನೆ. ಅಲ್ಲಿಗೆ ಹಣ , ದಾಖಲೆ ಎಲ್ಲಾ ತಂದು ಕೊಟ್ಟು ಬಿಡಿ ಎಂದ ಹೇಳಿದ್ದಾನೆ.
Click this button or press Ctrl+G to toggle between Kannada and English