ಯುವಕರ ಚಿಕನ್ ಟಿಕ್ಕಾ ಪಾರ್ಟಿಗೆ ರೈಡ್ ಮಾಡಿ, ಚಿಕನ್ ತಿಂದ ಪೊಲೀಸರು

9:47 PM, Monday, May 24th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

kasaragod Chicken Partyಕಾಸರಗೋಡು  : ಯುವಕರ ಗುಂಪೊಂದು ಗುಂಪೊಂದು  ಮೇ 23 ರ ಭಾನುವಾರ ನಗರದಲ್ಲಿ ದಲ್ಲಿ ಚಿಕನ್ ಟಿಕ್ಕಾ ಪಾರ್ಟಿ ಆಯೋಜಿಸಿತ್ತು. ಲಾಕ್‌ಡೌನ್ ನಿರ್ಬಂಧಗಳನ್ನು ಕಡೆಗಣಿಸಿ ಪಾರ್ಟಿ ಮಾಡಿದ್ದರಿಂದ ಪೊಲೀಸರು ರೇಡ್ ಮಾಡಿದ್ದರು,

ಪೊಲೀಸರನ್ನು ಕಂಡು ಯುವಕರ ಗುಂಪು ಟಿಕ್ಕಾ ಮತ್ತು ದ್ವಿಚಕ್ರ ವಾಹನಗಳನ್ನು ಬಿಟ್ಟು ಪರಾರಿಯಾದರು.

ಯುವಕರ ಗುಂಪು ಪರಾರಿಯಾದ ತಕ್ಷಣ ಪೊಲೀಸರು  ಬಿಸಿ ಬಿಸಿಯಾಗಿದ್ದ ಚಿಕನ್ ಟಿಕ್ಕಾಗಳನ್ನು ತಿಂದು ಮುಗಿಸಿ  ನಂತರ ದ್ವಿಚಕ್ರ ವಾಹನವನ್ನು ಮಿನಿ ಟ್ರಕ್‌ನಲ್ಲಿ ಲೋಡ್ ಮಾಡುವ ಮೂಲಕ ಪೊಲೀಸ್ ಠಾಣೆಗೆ ಕೊಂಡು ಹೋದ ಘಟನೆ ನಡೆದಿದೆ.

ಕೇರಳದಲ್ಲಿ ಮೇ 8 ರಿಂದ ವಾರಾಂತ್ಯದ ಕರ್ಫ್ಯೂ ಮತ್ತು ದೈನಂದಿನ ಲಾಕ್‌ಡೌನ್ ಸಹ ಜಾರಿಯಲ್ಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English