ಕೊತ್ತಂಬರಿ ಸೊಪ್ಪು ಚರ್ಮದ ಶೀಲೀಂದ್ರ ಸೋಂಕು ನಿವಾರಕ ಶಕ್ತಿ ಹೊಂದಿದೆ

1:04 PM, Tuesday, May 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Kottambariಕೊತ್ತಂಬರಿ ಬೀಜಗಳಲ್ಲಿ ಹಾಗೂ ಪುಡಿಯಲ್ಲಿ ಅಧಿಕ ಪೋಷಕಾಂಶಗಳಿರುತ್ತವೆ. ಕೊತ್ತಂಬರಿ ಬೀಜ ಹಾಗೂ ಪುಡಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನಮ್ಮ ದೇಹದಲ್ಲಿ ಸಂಗ್ರಹವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ಆರೋಗ್ಯ ರಕ್ಷಣೆ ಮಾಡುತ್ತದೆ.

ಕೊತ್ತಂಬರಿ ಸೊಪ್ಪು ಚರ್ಮದ ಸೋಂಕು ನಿವಾರಕವಾಗಿ ಕೆಲಸ ಮಾಡುತ್ತೆ. ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನೂ ಹೊಂದಿದೆ. ಜೊತೆಗೆ ಚರ್ಮದ ಮೇಲಿನ ಶೀಲೀಂದ್ರ ಸೋಂಕುಗಳನ್ನೂ ಸಹ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ.

ದಿನಂಪ್ರತಿ 1 ಲೋಟ ತಯಾರಿಸಿದ ಕೊತ್ತಂಬರಿ ಪಾನಿಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಮೂತ್ರ ವಿಸರ್ಜನೆ ವೇಳೆ ದೇಹದಲ್ಲಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸಂಗ್ರಹವಾಗಿರುವ ಅಶುದ್ಧ ಹೊರಹೋಗುತ್ತವೆ.

ಕೊತ್ತಂಬರಿ ಸೊಪ್ಪನ್ನು ಜಗಿಯುತ್ತಿದ್ದರೆ ದಂತ ಸಮಸ್ಯೆ ನಿವಾರಣೆಯಾಗುತ್ತದೆ. ವಸಡುಗಳು ಊದಿಕೊಂಡು ಹಲ್ಲು ನೋವು ಉಂಟಾದಾಗ, ಹತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ ದಿನಕ್ಕೆ ನಾಲ್ಕೈದು ಬಾರಿ ಇಟ್ಟುಕೊಳ್ಳುತ್ತಿದ್ದರೆ. ಹಲ್ಲು ನೋವು ವಸಡಿನ ಸಮಸ್ಯೆ ನಿವಾರಣೆಯಾಗುತ್ತದೆ.

ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವು 1 ಸಲ ಸೇವಿಸಿದರೆ ಎದೆ ನೋವು ಕಡಿಮೆಯಾಗುತ್ತದೆ. ಕೊತ್ತಂಬರಿ ಜೀವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆ ಹಾಕಿ, ಬಳಿಕ ಚೆನ್ನಾಗಿ ಕಿವುಚಿ ಸೋಸಬೇಕು. ಈ ಕಷಾಯಕ್ಕೆ ಹಾಲು , ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.

ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುವುದರಿಂದ ತ್ವಚೆಯ ಕಾಂತಿಯನ್ನು ವೃದ್ಧಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಹಾಗಾಗಿ ನೀವು ಮಾಡಬೇಕಾದದು ಇಷ್ಟೇ 4 ಟೇಬಲ್ ಚಮಚ ಓಟ್‌ಮೀಲ್, 2 ಟೇಬಲ್ ಚಮಚ ಹಾಲು, 2 ಟೀ ಚಮಚ ಸೌತೆಕಾಯಿ ರಸವನ್ನುಚೆನ್ನಾಗಿ ಬೆರೆಸಿಕೊಂಡು, ಇದಕ್ಕೆ ಜಜ್ಜಿರುವ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಸಹ ಹಾಕಿ ಚೆನ್ನಾಗಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ, ಮುಖದ ಮೇಲೆ ಲೇಪಿಸಿಕೊಂಡು 15 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದರೆ  ಮುಖದಲ್ಲಿ ಹೊಳಪು ಮೂಡುತ್ತದೆ.

ಮೊಡವೆಗಳಿಂದ ಮುಕ್ತಿ ಹೊಂದಲು ಕೊತ್ತಂಬರಿಯಲ್ಲಿರುವ ಹಲವು ಪೋಷಕಾಂಶಗಳು ಚರ್ಮದಲ್ಲಿ ಸೋಂಕು ಉಂಟುಮಾಡುವುದನ್ನು ತಡೆಯುತ್ತದೆ. ಉತ್ತಮ ನಂಜುನಿವಾರಕವಾಗಿರುವ ಇದು ತುರಿಕೆ ತರಿಸುವ ಇಸಬು, ಒಣಚರ್ಮ, ಹಾಗೂ ಹದಿಹರೆಯದಲ್ಲಿ ಕಾಡುವ ಮೊಡವೆಗೆ ಕೂಡ ಅತ್ಯುತ್ತಮ ಮನೆಮದ್ದಾಗಿದೆ. ಈ ಪ್ಯಾಕನ್ನು ತಯಾರಿಸಿಕೊಳ್ಳಲು ಲೆಮನ್ ಗ್ರಾಸ್, ಕೊತ್ತಂಬರಿ ಮತ್ತು ಚಾಮೋಲಿನ್ ಎಣ್ಣೆಯನ್ನು ಬೆರೆಸಿಕೊಳ್ಳಿ. ಈ ಎಲ್ಲಾ ಪದಾರ್ಥಗಳನ್ನು ಒಂದು ಕಪ್ ನೀರಿನಲ್ಲಿ ಬೆರೆಸಿಕೊಂಡು ಬೇಯಿಸಿ. ನಂತರ ಅದು ತಣ್ಣಗಾಗಲು ಬಿಡಿ. ಆನಂತರ ಪದಾರ್ಥಗಳನ್ನು ಶೋಧಿಸಿಕೊಂಡು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಲೇಪಿಸಿ, ಆಮೇಲೆ ತಣ್ಣೀರಿನಿಂದ ತೊಳೆಯಿರಿ. ಇದು ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಮೌತ್ ಅಲ್ಸರ್ ಅಥವಾ ಬಾಯಿಯಲ್ಲಾಗುವ ಉಷ್ಣದ ಗುಳ್ಳೆಗಳನ್ನೂ ಕೊತ್ತಂಬರಿ ಸೊಪ್ಪು ನಿವಾರಿಸುತ್ತದೆ. ಇದರಲ್ಲಿರುವ ನಂಜುನಿರೋಧಕ ಗುಣದಿಂದಾಗಿ ಇದನ್ನು ಟೂತ್ ಪೇಸ್ಟ್ ಗಳಲ್ಲಿಯೂ ಉಪಯೋಗಿಸುತ್ತಾರೆ.

ಕೊತ್ತಂಬರಿ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಋತುಚಕ್ರ ಕ್ರಮವಾಗಿ ಆಗುತ್ತದೆ. ಅಲ್ಲದೇ ಋತುಚಕ್ರದ ಸಮಯದಲ್ಲಿ ಬರುವ ಕಿಬ್ಬೊಟ್ಟೆ ನೋವನ್ನೂ ಈ ಸೊಪ್ಪು ನಿವಾರಿಸುತ್ತದೆ.

ಕೊತ್ತಂಬರಿ ಸೊಪ್ಪು ಜೀರ್ಣಕ್ರಿಯೆಗೂ ಸಹಕಾರಿ. ಅಲ್ಲದೇ ಇದು ನಿದ್ರಾಹೀನತೆ ತಡೆಯುವುದಕ್ಕೂ ಒಳ್ಳೆಯದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English