ನೀಟ್ ಪಿ.ಜಿ ಪರೀಕ್ಷೆ ಮುಂದೂಡದಿರಲು ಡಾ. ವಿನೋದ ಕುಲಕರ್ಣಿ ಅವರಿಂದ ಪಿಐಎಲ್

4:53 PM, Tuesday, May 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

neetಹುಬ್ಬಳ್ಳಿ : ಸರಕಾರದ ಆದೇಶದ ಪ್ರಕಾರ ಸ್ನಾತಕೋತ್ತರ ನೀಟ್ ಪರೀಕ್ಷೆಯನ್ನು ನಾಲ್ಕು ತಿಂಗಳುಗಳವರೆಗೆ ಮುಂದೂಡಲಾಗಿದೆ. ಈ ಪರೀಕ್ಷೆಯನ್ನು ಅಗಸ್ಟ್-2021ರ ಒಳಗೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಇದರ ವಿರುದ್ಧ ಖ್ಯಾತ ಮನೋವೈದ್ಯ, ಕಾನೂನು ಸಲಹೆಗಾರ ಹಾಗೂ ಸೋಶಿಯಲ್ ಆ್ಯಕ್ಟೀವಿಸ್ಟ್ (ಸಾಮಾಜಿಕ ಕಾರ್ಯಕರ್ತ) ಡಾ. ವಿನೋದ ಜಿ. ಕುಲಕರ್ಣಿ ಬೆಂಗಳೂರಿನ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಪರೀಕ್ಷೆ ಮುಂದೂಡುವದರಿಂದ ಪರೀಕ್ಷಾರ್ಥಿಗಳ ಮನಃಸ್ಥಿತಿ ಹದಗೆಟ್ಟಿದೆ ಹಾಗೂ ಅವರಲ್ಲಿ ಆತಂಕ, ತಳಮಳ, ಖಿನ್ನತೆ ಹಾಗೂ ಆತ್ಮಹತ್ಯೆಯ ವಿಚಾರಗಳು ಉದ್ಭವಿಸಿವೆ ಎಂದು ಡಾ. ಕುಲಕರ್ಣಿ ತಮ್ಮ ಅರ್ಜಿಯಲ್ಲಿ ಮಂಡಿಸಿದ್ದಾರೆ. ಕೂಡಲೇ ನೀಟ್ ಪರೀಕ್ಷೆಯನ್ನು ಜರುಗಿಸಿದರೆ, ವಿದ್ಯಾರ್ಥಿಗಳು ನಿಶ್ಚಿಂತರಾಗಿ, ಕೋವಿಡ್ ಸೇವೆಯಲ್ಲಿ ತೊಡಗಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ. ಹಠಾತ್ ಪರೀಕ್ಷೆಯ ಮುಂದೂಡುವಿಕೆ ಭಾರತೀಯ ಸಂವಿಧಾನದ ಅನುಚ್ಛೇದ-14 ಹಾಗೂ 21 ರ ಉಲ್ಲಂಘನೆ ಆಗುತ್ತದೆಂದು ಹೇಳಿದ್ದಾರೆ. ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ, ಹಾಗೂ ಪ್ರಧಾನ ಮಂತ್ರಿಯ ಮುಖ್ಯ ಕಾರ್ಯದರ್ಶಿ ಅವರನ್ನು ಪ್ರತಿವಾದಿಗಳಾಗಿ ಮಾಡಿದ್ದಾರೆ.

ಇತ್ತೀಚಿಗೆ ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಶರ್ಮಾರವರು ಡಾ. ಕುಲಕರ್ಣಿ ಅವರ ವಾದವನ್ನು ಆಲಿಸಿ, ಡಾ.ಸಾಬ್, ವಿದ್ಯಾರ್ಥಿಗಳಿಗೋಸ್ಕರ ಇರುವ ನಿಮ್ಮ ಕಾಳಜಿಯನ್ನು ನಾವು ಕೊಂಡಾಡುತ್ತೇವೆ ಎಂದು ಉಚ್ಚರಿಸಿದರು. ಪ್ರತಿವಾದಿಗಳು ಸಮಯ ಕೇಳಿದ್ದಕ್ಕಾಗಿ ನ್ಯಾಯಾಲಯ ವಿಚಾರಣೆಯನ್ನು ದಿನಾಂಕ:27-05-2021 ಕ್ಕೆ ಮುಂದೂಡಿದೆ ಡಾ.ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English