ಅಂತ್ಯಕ್ರಿಯೆ ಪ್ರಕ್ರಿಯೆಗೆ ಹೊಸ ಆನ್ಲೈನ್ ವ್ಯವಸ್ಥೆ ಜಾರಿ

8:11 PM, Tuesday, May 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

BBMPಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ವಲಯಗಳಲ್ಲಿ ಕೋವಿಡ್ – 19 ಸಾಂಕ್ರಾಮಿಕ ರೋಗ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ ಪ್ರಕರಣಗಳಲ್ಲಿ ಚಿತಾಗಾರ / ಸ್ಮಶಾನಗಳಲ್ಲಿ ಅಂತ್ಯಕ್ರಿಯೆಯನ್ನು ನಡೆಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಲಯ ಕಚೇರಿಗಳ ಆರೋಗ್ಯ ನಿರೀಕ್ಷಕರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಮರಣ ಹೊಂದಿದ ವ್ಯಕ್ತಿಗಳ ಪಾರ್ಥಿವ ಶರೀರವನ್ನು ಚಿತಾಗಾರ / ಸ್ಮಶಾನಕ್ಕೆ ಕಳುಹಿಸುತ್ತಿರುವ ಪ್ರಸ್ತುತ ಪದ್ದತಿಯನ್ನು ಕೈಬಿಡಲಾಗಿದ್ದು, ಈಗಿರುವ ವ್ಯವಸ್ಥೆಯಲ್ಲಿನ ತೊಡಕುಗಳು ಮತ್ತು ಗೊಂದಲಗಳನ್ನು ನಿವಾರಿಸಲು ಹೊಸದಾಗಿ ಆನ್ಲೈನ್ ಹಂಚಿಕೆ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರವು ಆದೇಶಿಸಿದೆ.

ಈ ಹೊಸ ವ್ಯವಸ್ಥೆಯಲ್ಲಿ, ಆಸ್ಪತ್ರೆ ಅಥವಾ ಮನೆಗಳಲ್ಲಿ ಸಾವು ಸಂಭವಿಸಿದಾಗ ಇದರ ಬಗ್ಗೆ ಅರಿವನ್ನು ಹೊಂದಿರುವಂತಹ ಸಂಬಂಧಿತ ವ್ಯಕ್ತಿಯು, ಬಿ.ಬಿ.ಎಂ.ಪಿ ವ್ಯಾಪ್ತಿಯೊಳಗೆ ಸಾವುಗಳ ಬಗ್ಗೆ ಮಾಹಿತಿಯನ್ನು ಸ್ವೀಕರಿಸಲು ಮೀಸಲೀರುವ 24×7 ಸಹಾಯವಾಣಿ ಸಂಖ್ಯೆ 8495998495 ಗೆ ಕರೆ ಮಾಡಿ ಮೃತ ವ್ಯಕ್ತಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆಗಾಗಿ ನಿಗದಿತ ದಿನ, ಸಮಯ ಮತ್ತು ಸ್ಮಶಾನ / ಚಿತಗಾರದ ಬಗ್ಗೆ ಬೇಡಿಕೆ ಸಲ್ಲಿಸಿ, ಸಹಾಯವಾಣಿಯ ಕೇಂದ್ರಕ್ಕೆ ಅಗತ್ಯ ಮಾಹಿತಿಯನ್ನು ನೀಡಬೇಕಾಗುತ್ತದೆ.

ಮಾಹಿತಿ ಒದಗಿಸಿದ ಆಧಾರದಲ್ಲಿ ತಂತ್ರಾಂಶದ ಮೂಲಕ ನಿಗದಿತ ಸಮಯ ಹಾಗೂ ಚಿತಗಾರದ ಹಂಚಿಕೆಯ ಬಗ್ಗೆ ಮಾಹಿತಿಯನ್ನು ದಾಖಲಿಸಿಕೊಂಡು ಕೋರಿಕೆದಾರರಿಗೆ ಟೋಕನ್ ಸಂಖ್ಯೆ ಮತ್ತು ಹಂಚಿಕೆ ಮಾಹಿತಿಯನ್ನು ಕರೆ ಮಾಡಿದ ವ್ಯಕ್ತಿಯ ಮೊಬೈಲ್ಗೆ ಎಸ್.ಎಂ.ಎಸ್. ಮೂಲಕ ವಿವರಗಳನ್ನು ಕಳುಹಿಸಲಾಗುವುದು. ಈ ರೀತಿ ಹಂಚಿಕೆ ಮಾಡುವ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಲಾಗುವುದು. ಈ ಆನ್ಲೈನ್ ವ್ಯವಸ್ಥೆಯಿಂದ ಶವಸಂಸ್ಕಾರದ ಕುರಿತು ಗೊಂದಲ ಮತ್ತು ವಿಳಂಬಗಳಿಗೆ ಆಸ್ಪದ ಇರದಂತೆ ನಿರ್ವಹಿಸುವುದರಿಂದಾಗಿ ಚಿತಾಗಾರದ ಬಳಿ ಅನಗತ್ಯವಾಗಿ ಆಂಬ್ಯುಲೈನ್ಸ್, ಶವಸಾಗಣೆ ವಾಹನಗಳು ಸಾಲುಗಟ್ಟಿ ದೀರ್ಘ ಕಾಲದ ಕಾಯುವಿಕೆಯನ್ನು ತಪ್ಪಿಸಿದಂತಾಗುತ್ತದೆ. ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಶವಸಂಸ್ಕಾರಕ್ಕಾಗಿ ಆನ್ಲೈನ್ ಮೂಲಕ ಸಮಯಾವಕಾಶವನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ನಿಗದಿಪಡಿಸಿದ ಸಮಯದೊಳಗೆ ಪಾರ್ಥಿವ ಶರೀರದೊಂದಿಗೆ ಚಿತಗಾರದ ಬಳಿ ಬರಬೇಕಾಗುತ್ತದೆ.

ಸದರಿ ಹಂಚಿಕೆ ಪ್ರಕ್ರಿಯೆಯು ಸುಸಜ್ಜಿತ ನಿಯಂತ್ರಣ ಕೋಠಡಿಯಿಂದ ಕೇಂದ್ರಿಕೃತವಾಗಿರುವುದರಿಂದ, ಸದರಿ ವ್ಯವಸ್ಥೆಯ ಮೂಲಕ ಕನಿಷ್ಠ ಕಾಯುವಿಕೆಯೊಂದಿಗೆ ಹಂಚಿಕೆಯನ್ನು ಮಾಡಲಾಗುತ್ತದೆ. ಆದುದರಿಂದ ಮೃತ ವ್ಯಕ್ತಿಯ ಪಾರ್ಥಿವ ಶರೀರವನ್ನು ಅಂತ್ಯಸಂಸ್ಕಾರ ಮಾಡಲು ಬಯಸುವ ಯಾವುದೇ ವ್ಯಕ್ತಿಯು ಅದೇ ದಿನ ಅಥವಾ ಅವರ ಆಯ್ಕೆಯಂತೆ ಅಂತ್ಯ ಸಂಸ್ಕಾರವನ್ನು ಮಾಡಲು ಸಾಧ್ಯವಾಗುತ್ತದೆ.

ಆದುದರಿಂದ ಈ ಸೇವೆಯನ್ನು ಬಳಸಿಕೊಳ್ಳಲು ಬಿಬಿಎಂಪಿ 24×7 ಚಿತಾಗಾರ ಸೇವೆ ಸಹಾಯವಾಣಿ ಸಂಖ್ಯೆ 8495998495 ಸಂಖ್ಯೆಗೆ ಕರೆ ಮಾಡಲು ಅಧಿಕೃತ ಪ್ರಕಟಣೆ ತಿಳಿಸಿದೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English