ಪಿಎಮ್ ಕೇರ್ ಫಂಡ್‌ದಿಂದ ರಾಜ್ಯಕ್ಕೆ ಬಂದಿರುವ ವೆಂಟಿಲೇಟರಗಳನ್ನುಕೂಡಲೇ ಉಪಯೋಗಿಸಿ

12:28 PM, Wednesday, May 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

ventilatorಮಂಗಳೂರು : ವೆಂಟಿಲೇಟರ್ ಗಳ ಸೌಲಭ್ಯ ಸಿಗುವುದಕ್ಕೆ ಆಗುತ್ತಿರುವ ತೊಂದರೆ ಯ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಸಹಾಯ ಸಮಿತಿಯ ವತಿಯಿಂದ ಇಮೇಲ್ ಮೂಲಕ ಮನವಿ ಸಲ್ಲಿಸಲಾಯಿತು.

ಇಂದು ಇಡೀ ರಾಜ್ಯ ಕೊರೋನಾ 2ನೇ ಅಲೆಗೆ ತತ್ತರಿಸಿ ಜಿಲ್ಲೆ, ತಾಲೂಕು ಸ್ಥರದ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ, ವೆಂಟಿಲೇಟರ ಸಿಗದೇ ಕೊರೋನಾ ರೋಗಿಗಳ ಮೃತ್ಯು ಪ್ರಮಾಣವು ಹೆಚ್ಚಾಗುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಕ್ಕೆ ೮ ತಿಂಗಳ ಮೊದಲೇ ಪಿಎಮ್ ಕೇರ್ ಫಂಡ್‌ದಿಂದ ೨೮೦೦ ವೆಂಟಿಲೇಟರ್‌ಗಳು ಬಂದಿದ್ದು, ಇದುವರೆಗೆ ಕೇವಲ ೧೫೦ ವೆಂಟಿಲೇಟರ್‌ಗಳನ್ನು ಮಾತ್ರ ಉಪಯೋಗಿಸಲಾಗಿದೆ. ಜಿಲ್ಲೆ ಮತ್ತು ತಾಲೂಕುಗಳಲ್ಲಿ ವೆಂಟಿಲೇಟರ್‌ಗಳ ಬಳಕೆ ಮಾಡಲು ನುರಿತ ವೈದ್ಯರ ಅಥವಾ ತಾಂತ್ರಿಕ ಸಿಬ್ಬಂದಿಗಳ ಕೊರತೆಯಿಂದ ವೆಂಟಿಲೇಟರ್‌ಗಳ ಉಪಯೋಗ ಮಾಡುತ್ತಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಗೆ ಪಿಎಮ್ ಕೇರ್ ಫಂಡ್ ದಿಂದ ಎಲ್ಲಾ ತಾಲೂಕು ಆಸ್ಪತ್ರೆಗಳು ಸೇರಿ ೧೦೦ ವೆಂಟಿಲೇಟರ್‌ಗಳು ಬಂದಿದೆ. ಆದರೆ ಅದರ ಸೌಲಭ್ಯ ಸಿಗುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನ್ಲೈನ್ ಆಂದೋಲನ ಮಾಡಬೇಕಾಯಿತು. ಇದು ಅತ್ಯಂತ ದುರ್ದೈವ . ಜಿಲ್ಲಾಧಿಕಾರಿಗಳು ವಿಪತ್ತು ನಿರ್ವಹಣಾ ಕಾಯಿದೆಯ ವಿಶೇಷ ಅಧಿಕಾರವನ್ನು ಬಳಿಸಿ ಮುಂದೆ ನೀಡಿದ ಅಂಶಗಳ ಬಗ್ಗೆ ಗಂಭೀರವಾಗಿ ವಿಚಾರ ಮಾಡಿ, ಕೃತಿ ಮಾಡಲು ಆರೋಗ್ಯ ಸಹಾಯ ಸಮಿತಿಯು ಮುಂದಿನ ಬೇಡಿಕೆಯನ್ನು ಇಡುತ್ತಿದೆ.

1. ಯಾವ ತಾಲೂಕುಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ವೆಂಟಿಲೇಟರ್ ಉಪಯೋಗವಾಗುತ್ತಿಲ್ಲ, ಅಲ್ಲಿ ವೆಂಟಿಲೇಟರ್‌ಗಳನ್ನು ಸರಬುರಾಜು ಮಾಡಿದ ಕಂಪನಿಯಿಂದ ಅಲ್ಲಿನ ಆಸ್ಪತ್ರೆಯ ಸಿಬ್ಬದಿಗಳಿಗೆ ವೆಂಟಿಲೇಟರ್ ಉಪಯೋಗದ ಸೂಕ್ತ ತರಬೇತಿಯನ್ನು ಕೂಡಲೇ ನೀಡಬೇಕು.

2. ಯಾವ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಅಳವಡಿಸಲು ಅಗತ್ಯವಿರುವ ಬೆಡ್, ಎಲೆಕ್ಟ್ರಿಸಿಟಿ ಸೌಲಭ್ಯ ಉಪಲಬ್ದ ಇದೆ. ಅಲ್ಲಿ ಕೂಡಲೇ ವೆಂಟಿಲೇಟರ್ ಸೆಟ್ ಆಪ್ ಮಾಡಿ, ಅಲ್ಲಿ ನುರಿತ ಸಿಬ್ಬಂದಿಯ ನೇಮಕ ಮಾಡಬೇಕು.

3. ಯಾವ ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಉಪಯೋಗ ಮಾಡುವ ವ್ಯವಸ್ಥೆ ಇಲ್ಲ. ಅಲ್ಲಿನ ವೆಂಟಿಲೇಟರನ್ನು ಪಬ್ಲಿಕ್ ಪ್ರೈವೆಟ್ ಪಾರ್ಟನರ‍್ಶಿಪ್ ಯೋಜನೆಯ ಅಡಿಯಲ್ಲಿ ವೆಂಟಿಲೇಟರ್ ಸೆಟ್‌ಅಪ್, ಬೆಡ್, ನುರಿತ ಸಿಬ್ಬಂದಿಗಳು ಇರುವ ಖಾಸಗಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳನ್ನು ಅಳವಡಿಸಿ, ಸರ್ಕಾರ ನಿರ್ಧರಿಸಿದ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಬೇಕು.
4. ಇದರ ಜೊತೆಗೆ ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಉಪಯೋಗ ಮಾಡದೇ ಇರುವ ವೆಂಟಿಲೇಟರ್‌ಗಳ ಆಡಿಟ್ ಮಾಡಿ ಮತ್ತು ಅದರ ಯೋಗ್ಯ ರೀತಿಯ ಉಪಯೋಗದ ನಿಯೋಜನೆ ಮಾಡಬೇಕು.

ಇತಿ ತಮ್ಮ ವಿಶ್ವಾಸಿ,
ಚಂದ್ರ ಮೊಗೇರ
ಸಮನ್ವಯಕರು, ಆರೋಗ್ಯ ಸಹಾಯ ಸಮಿತಿ, ದಕ್ಷಿಣ ಕನ್ನಡ
7204082652

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English