ಮಂಡ್ಯ: ಹೆರಿಗೆಗೆ ಬಂದಿದ್ದ ವಾಣಿಜ್ಯ ಶಾಸ್ತ್ರದ ಉಪನ್ಯಾಸಕಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಕೆಲ ಗಂಟೆಗಳಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಜರುಗಿದೆ.
ಕೊರೊನಾ ಸೋಂಕಿತರಾಗಿದ್ದ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದ ಗುಣಶ್ರೀ (35) ಸಾವನ್ನಪ್ಪಿರುವ ದುರ್ದೈವಿ. ಅವರು ಮಳವಳ್ಳಿ ತಾಲೂಕಿನ ಬೊಮ್ಮನದೊಡ್ಡಿ ಗ್ರಾಮದವರು.
ಮಂಗಳವಾರ ರಾತ್ರಿ ಗುಣಶ್ರೀ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆದರೆ ಮಗು ಹುಟ್ಟಿದ ಕೆಲ ಗಂಟೆಯಲ್ಲೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.
ಗುಣಶ್ರೀ ಅವರು ಮಳವಳ್ಳಿಯ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ವರ್ಷದ ಹಿಂದೆ ಮದ್ದೂರು ತಾಲೂಕಿನ ಅರೆತಿಪ್ಪೂರಿನ ಮನೋಹರಗೌಡ ಎಂಬವರೊಂದಿಗೆ ಮದುವೆಯಾಗಿದ್ದರು.
ನಾಲ್ಕು ವರ್ಷದಿಂದ ಇವರಿಗೆ ಮಕ್ಕಳಾಗಿರಲಿಲ್ಲ. ಇದೀಗ ಮಗುವಿನ ನೀರಿಕ್ಷೆಯಲ್ಲಿ ಇದ್ದ ಕುಟುಂಬ ಗುಣಶ್ರೀ ಅವರ ಸಾವಿನಿಂದ ದುಃಖತಪ್ತವಾಗಿದೆ. ಇತ್ತ ತಾಯಿಯನ್ನು ಕಳೆದುಕೊಂಡಿರುವ ಒಂದು ದಿನದ ಹಸುಗೂಸು ಅಮ್ಮನ ಪ್ರೀತಿಯಿಂದ ವಂಚಿತವಾಗಿದೆ.
Click this button or press Ctrl+G to toggle between Kannada and English