ಮಂಗಳೂರು : ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಮಂಜನಾಡಿ ಗ್ರಾಮದಲ್ಲಿ 200 ಜನರನ್ನು ಸೇರಿಸಿ ಶಾಮಿಯಾನ ಹಾಕಿ ಸಾಮೂಹಿಕ ನಮಾಜ್‌ಗೆ ತಯಾರಿ ನಡೆಸುತ್ತಿದ್ದಾಗ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಚರ್ಚ್, ದೈವ-ದೇವಸ್ಥಾನ, ಮಸೀದಿ, ಮಂದಿರಗಳನ್ನು ಬಂದ್ ಮಾಡಲಾಗಿದೆ. ಮಸೀದಿಗಳನ್ನು ಬಂದ್ ಮಾಡಿ ಸಾಮೂಹಿಕ ನಮಾಜ್‌ನಿಂದ ದೂರ ಇರುವಂತೆ ಉನ್ನತ ಧರ್ಮಗುರುಗಳು ಸೂಚನೆ ನೀಡಿದ್ದಾರೆ.
ಆದರೆ ಮಂಜನಾಡಿ ಗ್ರಾಮದ ಮಸೀದಿಯೊಂದರ ಕಾರ್ಯದರ್ಶಿಯ ಉಸ್ತುವಾರಿಯಲ್ಲಿ ಕಳೆದ ಶುಕ್ರವಾರ ಮಧ್ಯಾಹ್ನ 200 ಜನರನ್ನು ಸೇರಿಸಿ ಸಾಮೂಹಿಕ ನಮಾಜ್‌ಗೆ ಶಾಮಿಯಾನ ಸಹಿತ ವ್ಯವಸ್ಥೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ದಾಳಿ ನಡೆಸಿದಾಗ, ನಮಾಜ್‌ಗೆ ಸೇರಿದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English