ಹುಬ್ಬಳ್ಳಿ: ಬಹುಭಾಷ ನಟ ಸೋನು ಸೂದ್ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಸಹಾಯ ಮಾಡಿದ್ದಾರೆ. ಸದ್ಯ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಸೋನು ಸೂದ್ ತಮ್ಮ ಆಕ್ಸಿಜನ್ ಸೆಂಟರ್ ವಿಸ್ತರಣೆ ಮಾಡಿದ್ದಾರೆ. ರಾಜ್ಯ ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಆಸಕ್ತಿ ಹಿನ್ನೆಲೆ ಸೋನು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಾಣವಾಯು ಒದಗಿಸೋಕೆ ಮುಂದಾಗಿದ್ದಾರೆ. ಅದಕ್ಕಾಗೇ ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆ ಆವರಣದಲ್ಲಿ ಆಕ್ಸಿಜನ್ ಸೆಂಟರ್ ಓಪನ್ ಮಾಡಿದ್ದಾರೆ.
ಬೆಂಗಳೂರಿನ ಸ್ವ್ಯಾಗ್ ಸಂಸ್ಥೆಯ ಸಹಯೋಗದೊಂದಿಗೆ ಸದ್ಯ ಈ ಸೆಂಟರ್ ಓಪನ್ ಆಗಿದ್ದು, ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳ ಜನರಿಗೆ ಇದರ ನೆರವು ಸಿಗಲಿದೆ ಎನ್ನಲಾಗಿದೆ. ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದಿಯೋ ಅವರು ಒಂದು ಪೋನ್ ಕಾಲ್ ಮಾಡಿದರೆ ಸಾಕು ಆಕ್ಸಿಜನ್ ಒದಗಿಸೋ ಕೆಲಸ ರೈಲ್ವೆ ಪೊಲೀಸರು ಹಾಗೂ ಸಂಸ್ಥೆ ಮಾಡಲಿದೆ.
ಮೊದಲ ಹಂತವಾಗಿ 25 ಜಂಬೋ ಸಿಲೆಂಡಿರ್‌ಗಳನ್ನು ನೀಡಿತೋ ಸೋನು ಸೂದ್ ಅವಶ್ಯಕತೆ ಎಷ್ಟು ಬರುತ್ತದೆಯೋ ಅಷ್ಟು ಆಕ್ಸಿಜನ್ ಪೂರೈಸಲು ಸಿದ್ಧ ಎನ್ನುತ್ತಿದ್ದಾರೆ. ಇನ್ನು ರೈಲ್ವೆ ಪೊಲೀಸರು ಕೂಡಾ ಸೋನು ಸೂದ್ ಚಾರಿಟಿ ಪೌಂಡೇಶನ್‌ಗೆ ಸಾಥ್ ನೀಡಿದ್ದು, ಅವರೇ ಖುದ್ದು ಮುಂದೆ ನಿಂತು ಇನ್ಮೇಲೆ ಯಾರಿಗೆ ಆಕ್ಸಿಜನ್ ಅವಶ್ಯಕತೆ ಇದೆಯೋ ಅಂತಹವರು ಇಲ್ಲಿಗೆ ಬರಬಹುದು ಪೊಲೀಸರ ನೆರವಿನೊಂದಿಗೆ ಆಕ್ಸಿಜನ್ ಪೂರೈಕೆ ಆಗಲಿದೆ.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English