ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್‍ಗೆ ಉಚಿತ ಚಿಕಿತ್ಸೆಗೆ ಕ್ರಮ : ಕೋಟ ಶ್ರೀನಿವಾಸ ಪೂಜಾರಿ

8:41 PM, Wednesday, May 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

srinivas Poojary ಬೈಂದೂರು :   ಪ್ರತೀ ಜಿಲ್ಲೆಯಲ್ಲಿಯೂ ಬ್ಲ್ಯಾಕ್ ಫಂಗಸ್‍ಗೆ ಆಸ್ಪತ್ರೆ ವ್ಯವಸ್ಥೆಗೊಳಿಸಿ ಅಲ್ಲಿ ಉಚಿತ ಚಿಕಿತ್ಸೆಗೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಮಾಡಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬುಧವಾರ ಅವರು ಬೈಂದೂರು ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣ ಕಾರ್ಯಪಡೆಯ ಕಾರ್ಯನಿರ್ವಹಣೆಯ ಬಗ್ಗೆ ಪ್ರವಾಸ ಕೈಗೊಂಡು ಉಪ್ಪುಂದದಲ್ಲಿ ಸಭೆಯ ಬಳಿಕ ಮಾತನಾಡಿದರು.

ಕೊರೊನಾ ನಿಯಂತ್ರಣದಲ್ಲಿ ಗ್ರಾಮ ಪಂಚಾಯತ್‍ಗಳಿಗೂ ಜವಾಬ್ದಾರಿ ನೀಡಿದೆ. ಕೊರೊನಾ ಸೋಂಕಿತರನ್ನು ಕರೆತರಲು ವಾಹನ ಖರೀದಿಸಲು ಪಂಚಾಯತ್‍ಗಳಿಗೂ ಅವಕಾಶ ನೀಡಿದೆ ಎಂದರು.

ಪಂಚಾಯತ್ ಸದಸ್ಯರು ಟಾಸ್ಕ್‌‌ಫೋರ್ಸ್‌ ಸಮಿತಿ ಸದಸ್ಯರಾಗಿರುತ್ತಾರೆ. ಅವರಿಗೆ ಪ್ರಥಮ ಪ್ರಾಶಸ್ತ್ಯ ಲಸಿಕೆ ನೀಡಬೇಕು ಎನ್ನುವ ಬೇಡಿಕೆ ಇದೆ. ರಾಜ್ಯದಲ್ಲಿ 90 ಸಾವಿರಕ್ಕೂ ಹೆಚ್ಚು ಗ್ರಾ.ಪಂ ಸದಸ್ಯರಿರುವುದರಿಂದ ಸ್ಪಲ್ಪ ವಿಳಂಬವಾಗುತ್ತದೆ. ನಾಳೆ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದ ಗಮನಸೆಳೆಯಲಾಗುವುದು” ಎಂದರು.

ಉಡುಪಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಈಗಾಗಲೇ ಅನುಮತಿ ಕೊಟ್ಟ ವಿವಾಹಗಳ ಪೈಕಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಜನ ಹೆಚ್ಚು ಜಾಗೃತೆಯಿಂದ ಇರಬೇಕು” ಎಂದರು.

ಪ್ರಕೃತಿ ವಿಕೋಪದ ಸಂದರ್ಭ ಮನೆಗೆ ನೀರು ನುಗ್ಗಿದರೆ ಐದು ಸಾವಿರ ನೀಡಲಾಗಿದೆ. ಪೂರ್ತಿ ಮನೆಹಾನಿಯಾದರೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಕೊಡಲು ಹೇಳಲಾಗಿದೆ. ತಕ್ಷಣ ವರದಿ ಕೊಟ್ಟರೆ ಒಂದು ಲಕ್ಷ ನೀಡಿ, ನಂತರ ಹಂತ ಹಂತವಾಗಿ ನಾಲ್ಕು ಲಕ್ಷ ನೀಡಲಾಗುವುದು” ಎಂದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English