ಜಿಲ್ಲೆಯಾದ್ಯಂತ ಎಲ್ಲ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ

8:46 PM, Wednesday, May 26th, 2021
Share
1 Star2 Stars3 Stars4 Stars5 Stars
(No Ratings Yet)
Loading...

Sundareshಗದಗ : ಜಿಲ್ಲೆಯಲ್ಲಿ ಕೋರೊನಾ ಸೋಂಕು ತಡೆಯಲು ಮೇ 27 ರ ಬೆಳಿಗ್ಗೆ 10 ಗಂಟೆಯಿAದ ಜೂನ 1 ರ ಬೆಳಿಗ್ಗೆ 6 ಗಂಟೆಯವರೆಗೆ ನಿರ್ದಿಷ್ಟ ಚಟುವಟಿಕೆ ಹಾಗೂ ಸೇವೆಗಳಿಗೆ ಅವಕಾಶ ನೀಡಿ, ಇನ್ನುಳಿದ ಎಲ್ಲ ಚಟುವಟಿಕೆ ಹಾಗೂ ಜನರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿ ಎಂ. ಸುಂದರೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾಧ್ಯಂತ ಕೋರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ಸಲುವಾಗಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವುದು ಹಾಗೂ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ಕೆಳಗಿನಂತೆ ಕೆಲವು ಅಗತ್ಯ ಸೇವೆಗಳಿಳಿಗೆ ಅವಕಾಶ ನೀಡಿ, ಇನ್ನುಳಿದಂತೆ ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಹೂ-ಹಣ್ಣು-ತರಕಾರಿಗಳ ವ್ಯಾಪಾರವನ್ನು ತಳ್ಳುವ ಗಾಡಿ ಅಥವಾ ಆಟೋ ರಿಕ್ಷಾಗಳ ಮೂಲಕ ಖರೀದಿದಾರರ ಮನೆಗಳ ಓಣಿಗಳಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಕ್ರಮವಹಿಸಿ ಮಾರಾಟ ಮಾಡಲು ಅನುಮತಿಸಿದೆ. ಎಲ್ಲ ದಿನಸಿ ಅಂಗಡಿಗಳ ವ್ಯಾಪಾರವನ್ನು ಮನೆಗೆ ಸರಬರಾಜು (ಹೊಂ ಡಿಲೇವರಿ) ಮುಖಾಂತರ ಮಾಡಲು ಅವಕಾಶ ನೀಡಿದೆ. ಹಾಲಿನ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ತೆರೆದು ವ್ಯವಹರಿಸಲು ಅವಕಾಶ. ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಪರಿಕರಗಳು, ಯಂತ್ರೋಪಕರಣಗಳು, ಬೀಜ ಮತ್ತು ರಸಗೊಬ್ಬರ ಮಾರಾಟಕ್ಕೆ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅನುಮತಿ ನೀಡಲಾಗಿದೆ. ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ರೀತಿಯ ಹೋಟೆಲ್‌ಗಳನ್ನು ಬಂದ್ ಮಾಡಬೇಕು. ವೈನ್ ಶಾಪ್, ಬಾರ್-ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ಇರುವುದಿಲ್ಲ. ಎಲ್ಲ ರೀತಿಯ ಮಾಂಸದ ಅಂಗಡಿಗಳನ್ನು ಮುಚ್ಚುವುದು. ಬ್ಯಾಂಕ್ ಮತ್ತು ಅಂಚೆ ಕಛೇರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸೇರದಂತೆ ಕನಿಷ್ಟ ಸಿಬ್ಬಂದಿಗಳೊಂದಿಗೆ ಸೇವೆಗಳನ್ನು ಕೈಗೊಳ್ಳಲು ಅನುಮತಿ. ಈ ಮೊದಲೇ ಅನುಮತಿ ಪಡೆದ ಮದುವೆ ಕಾರ್ಯಕ್ರಮಕ್ಕೆ ಅನುಮತಿಸಿದೆ. ಕೋವಿಡ್ ಮಾರ್ಗಸೂಚಿಯನ್ವಯ 05 ಜನಕ್ಕೆ ಮೀರದಂತೆ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿದ್ದಾರೆ.

ಈ ಆದೇಶವು ಕೋವಿಡ್-19 ಕಾರ್ಯನಿರತ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಸರ್ಕಾರಿ ವಾಹನಗಳ ಓಡಾಟಕ್ಕೆ ಅನ್ವಯಿಸುವುದಿಲ್ಲ. ಈ ಆದೇಶವನ್ನು ಸಬಂಧಿಸಿದ ಎಲ್ಲ ಇಲಾಖಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಲಸಿಕೆ ನೀಡಿಕೆ :
18 ವರ್ಷದಿಂದ 44 ವರ್ಷದ ಪಲಾನುಭವಿಗಳಿಗೆ ಆಧ್ಯತೆ ಮೇರೆಗೆ ರಾಜ್ಯ ಗುರುತಿಸಿರುವ ಕೋರೊನಾ ಮುಂಚೂಣಿ ಕಾರ್ಯಕರ್ತರಿಗೆ ಗದಗ ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆ ನೀಡಲಾಗುತ್ತಿದೆ. ಈ ಕೆಳಕಂಡ ಮುಂಚೂಣಿ ಕಾರ್ಯಕರ್ತರು ಲಸಿಕಾಕರಣಕ್ಕೆ ಅರ್ಹರಾಗಿರುತ್ತಾರೆ ಹಾಗೂ ಲಸಿಕಾಕರಣಕ್ಕೆ ಅರ್ಹ ಇರುವ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆಗೆ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನು ನೋಡಲ್ ಅಧಿಕಾರಿ ಎಂದು ನೇಮಕ ಮಾಡಲಾಗಿದೆ. ಅರ್ಹರು ಲಸಿಕೆ ಪಡೆಯಲು ಕಡ್ಡಾಯವಾಗಿ ಧೃಡಿಕರಣ ಪತ್ರ ಹಾಜರುಪಡಿಸುವ ಮೂಲಕ ಲಸಿಕೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಈ ಕೆಳಕಂಡ ಎಲ್ಲರು ಲಸಿಕೆ ಪಡೆಯಲು ಅರ್ಹರಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀಡುವ ದೃಡೀಕರಣ ಪತ್ರದೊಂದಿಗೆ ಲಸಿಕಾ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಅಂಗವೈಕಲ್ಯ ಹೊಂದಿರುವ (ಮಾನಸಿಕ ಅಸ್ವಸ್ಥತೆ ಸೇರಿದಂತೆ) ಫಲಾನುಭವಿಗಳು ಮತ್ತು ಒಬ್ಬ ಆರೈಕೆದಾರರು. (ವಿಕಲಚೇತನರ ಅಭಿವೃದ್ಧಿ ಇಲಾಖೆ), ಖೈದಿಗಳು (ಕಾರಾಗೃಹ ಅಧಿಕ್ಷಕರು), ಚಿತಾಗಾರ/ ಸ್ಮಶಾನಾ / ರುದ್ರಭೂಮಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ವಸಹಾಯಕರು (ತಾಲುಕಾ ಪಂಚಾಯತಿ / ನಗರ ಸಭೆ/ಪಟ್ಟಣ ಪಂಚಾಯಿತಿ / ಗ್ರಾಮ ಪಂಚಾಯಿತಿ ಅಧಿಕಾರಿಗಳು), ಆರೋಗ್ಯ ಕಾರ್ಯಕರ್ತರು ನಿಕಟ ಕುಟುಂಬಸ್ಥರು (ವೈದ್ಯಾಧಿಕಾರಿಗಳು/ತಾಲೂಕ ಆರೋಗ್ಯ ಅಧಿಕಾರಿಗಳು/ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು), ಕೋವಿಡ್-19 ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು (ತಾಹಸಿಲ್ಧಾರ್/ತಾಲೂಕ ಕಾರ್ಯನಿರ್ವಾಹಕ ಅಧಿಕಾರಿಗಳು/ತಾಲೂಕ ಆರೋಗ್ಯ ಅಧಿಕಾರಿಗಳು/ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು), ಸರ್ಕಾರಿ ಸಾರಿಗೆ ಸಿಬ್ಬಂದಿ (ಕೆ.ಎಸ್.ಆರ್.ಟಿ.ಸಿ), ಅಟೋ ಮತ್ತು ಕ್ಯಾಬ್ ಚಾಲಕರು (ಆರ್ ಟಿ ಓ), ವಿದ್ಯುತ್ ಮತ್ತು ನೀರು ಸರಬರಾಜು (ಹೆಸ್ಕಾಂ ಮತ್ತು ಜಲಮಂಡಳಿ), ಅಂಚೆ ಇಲಾಖೆ ಸಿಬ್ಬಂದಿ (ಅಂಚೆ ಇಲಾಖೆ), ಬೀದಿ ಬದಿಯ ವ್ಯಾಪಾರಿಗಳು (ಕಾರ್ಪೋರೇಷನ್/ನಗರ ಸಭೆ/ ಪಟ್ಟಣ ಪಂಚಾಯಿತಿ/ಗ್ರಾಮ ಪಂಚಾಯಿತಿ ಅಧಿಕಾರಿಗಳು), ಭದ್ರತೆ ಮತ್ತು ಕಚೇರಿಗಳ ಹೌಸ್‌ಕೀಪಿಂಗ್ ಸಿಬ್ಬಂದಿಗಳು (ಸಂಬಂಧಪಟ್ಟ ಏಜನ್ಸಿ ಮುಖ್ಯಸ್ಥರು), ನ್ಯಾಯಾಂಗ ಅಧಿಕಾರಿಗಳು (ನ್ಯಾಯಾಂಗ ಇಲಾಖೆ), ಮಕ್ಕಳ ಸಂರಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಾದ್ಯಮದವರು (ವಾರ್ತಾ ಇಲಾಖೆ), ಆಯಿಲ್ ಇಂಡಸ್ಟಿç ಮತ್ತು ಗ್ಯಾಸ್ ಸರಬರಾಜು ಮಾಡುವವರು (ಪೆಟ್ರೋಲ್ ಬಂಕ್, ಕರ್ಮಚಾರಿ ಒಳಗೊಂಡಂತೆ) (ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ), ಅಧಿಕೃತ ಗುರುತಿನ ಚೀಟಿ ಹೊಂದದಿರುವ ಫಲಾನುಭವಿಗಳು (ಉದಾಹರಣೆಗೆ: ವೃದ್ದಾಶ್ರಮ ವಾಸಿಗಳು, ನಿರ್ಗತಕರು), ಭಾರತೀಯ ಆಹಾರ ನಿಗಮ ಸಿಬ್ಬಂದಿಗಳು (ಆಹಾರ ಮತ್ತು ನಾಗರೀಕ ಪೂರೈಕೆ ಅಧಿಕಾರಿಗಳು), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ) ಕೆಲಸಗಾರರು (ಎ.ಪಿ.ಎಂ.ಸಿ ಅಧಿಕಾರಿಗಳು)

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English