ಬೆಂಗಳೂರು: ಭೂಕಬಳಿಕೆ ಆರೋಪಕ್ಕೆ ಬಗ್ಗೆ ಉಪ್ಪಿ ಸ್ಪಷ್ಟನೆ: ಡೌಟಿದ್ರೆ ಬಂದು ಪರಿಶೀಲಿಸಿ

9:27 PM, Wednesday, May 26th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Upendaraಬೆಂಗಳೂರು: ಲಾಕ್ ಡೌನ್ ವೇಳೆ ಚಲನಚಿತ್ರ ಕಾರ್ಮಿಕರು ಹಾಗೂ ಬಡ ಕಲಾವಿದರ ನೆರವಿಗೆ ನಿಂತಿರುವ ನಟ ಉಪೇಂದ್ರ ಸದ್ಯ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಕೇಳಿಬಂದಿತ್ತು. ನಟ ಉಪೇಂದ್ರ ಕೃಷಿ ಭೂಮಿ ಒತ್ತುವರಿ ಮಾಡಿದ ರುಪ್ಪೀಸ್ ಎಂಬ ಹೆಸರಿನ ರೆಸಾರ್ಟ್ ಮಾಲೀಕರಾಗಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಉಪೇಂದ್ರ, ದಯವಿಟ್ಟು ಆರೋಪ ಮಾಡುವ ಮುನ್ನ ದಾಖಲೆಗಳನ್ನು ಪರಿಶೀಲಿಸಿ ಎಂದಿದ್ದಾರೆ. ಸುಮಾರು 14 ವರ್ಷಗಳ ಹಿಂದೆ ವಿಲೇಜ್ ಎಂಬ ಹೆಸರಿನ ರೆಸಾರ್ಟ್ ಇದಾಗಿತ್ತು. ಸರ್ಕಾರದಿಂದಲೇ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ರೆಸಾರ್ಟ್ ಖರೀದಿಸಿ ರುಪ್ಪೀಸ್ ರೆಸಾರ್ಟ್ ಎಂಬ ಹೆಸರಿಟ್ಟಿದ್ದೇವೆ. ಈ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಬಹುದು ಅಥವಾ ನೇರವಾಗಿ ರೆಸಾರ್ಟ್ ಗೆ ಭೇಟಿಕೊಟ್ಟು ತಿಳಿಯಬುಹುದು ಎಂದು ನಟ ಉಪೇಂದ್ರ ಪ್ರಶ್ನೆ ಮಾಡಿದ್ದಾರೆ.

ಲೀಡರ್ ಆಗಬೇಕೆಂಬ ಉದ್ದೇಶ ನನ್ನದಲ್ಲ. ಎಲ್ಲವನ್ನೂ ವಿರೋಧಿಸುತ್ತ ಕೂರದೇ ನಾವು ಪ್ರಜ್ಞಾವಂತರಾಗಬೇಕಿದೆ. ಬ್ಯುಸಿನೆಸ್ ಆಧಾರಿತ ಪೊಲಿಟಿಕ್ಸ್ ತೊಲಗಬೇಕು. ಅದಕ್ಕಾಗಿ ವಿಚಾರವೇ ಲೀಡರ್ ಆಗಬೇಕು ಎಂದು ತಮ್ಮ ಮೇಲಿನ ಆಕ್ಷೇಪಗಳಿಗೆ ಉಪೇಂದ್ರ ಉತ್ತರಿಸಿದ್ದಾರೆ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English