ಖಾಸಗಿ ಆಸ್ಪತ್ರೆಯಲ್ಲಿ 9 ಬೆರಳುಳ್ಳ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

12:24 PM, Thursday, May 27th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

 9 finger babyವಿಜಯನಗರ : ಜಿಲ್ಲೆಯ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ  9 ಬೆರಳುಳ್ಳ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿ ಅಚ್ಚರಿ‌ ಮೂಡಿಸಿದ್ದಾಳೆ.

ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20ನೇ ಕೇಸ್, ಒಂಬತ್ತು ಬೆರಳುಳ್ಳ ಮಗು ಜನನವಾಗುವುದು ತೀರಾ ವಿರಳ ಎಂದು ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ ಕೆಲ‌ ಸಮಯದವರೆಗೂ ನೋಡಿ ಬಳಿಕ ಕುಟುಂಬಸ್ಥರು ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ.

ವೈದ್ಯರು ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಿದ್ದು,ಮಗುವನ್ನು ಹೊರಗೆ ತೆಗೆದಿದ್ದಾರೆ.

ಗಂಡು ಮಗುವಿನ ಎಡಗಾಲಿಗೆ ಒಂಬತ್ತು (9) ಬೆರಳುಗಳಿವೆ. ಆದರೆ, ಬಲಗಾಲಿಗೆ ಐದು ಬೆರಳುಗಳಿವೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ತಾಯಿ ಹೊಸಪೇಟೆ ತಾಲೂಕಿನ‌ ನಿವಾಸಿಗಳಾಗಿದ್ದಾರೆ.

ಗರ್ಭಿಣಿಯಾಗಿದ್ದಾಗ ಸ್ಕ್ಯಾನ್ ಮಾಡಿದಾಗ ಹೃದಯ ಬಡಿತ, ತಲೆ ಭಾಗ, ಕೈ ಕಾಲುಗಳ ಬೆಳವಣಿಗೆ ಬಗ್ಗೆ ಕಾಣಿಸುತ್ತವೆ. ಆದರೆ ಬೆರಳುಗಳ ಬಗ್ಗೆ ಕಾಣುವುದಿಲ್ಲ, ಜನನವಾದ ಬಳಿಕ ಗೊತ್ತಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English