ಮಾಸ್ಕ್‌ ಧರಿಸದಕ್ಕೆ ಫೊಟೊ ತೆಗೆದ ಪಿಡಿಒ ಕಪಾಳಕ್ಕೊಡೆದ ನಾಲ್ವರು ಆರೋಪಿಗಳ ಬಂಧನ

1:32 PM, Thursday, May 27th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rajendra Shettyಮಂಗಳೂರು : ಕೊರೋನಾ ನಿಯಮಗಳನ್ನು ಪಾಲಿಸದೆ ಮಾಸ್ಕ್‌ ಧರಿಸದ ಕಾರಣಕ್ಕಾಗಿ ಫೊಟೊ ತೆಗೆದ  ಮಲ್ಲೂರು ಗ್ರಾಮ ಪಂಚಾಯತ್ ಪಿಡಿಒ ಕೆನ್ನೆಗೆ ಹೊಡೆದು ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪರಂಗಿಪೇಟೆಯ ಮಹಮ್ಮದ್‌ ಇದಾಯತುಲ್ಲಾ(25), ಅಹ್ಮದ್‌ ಬಶೀರ್(‌30), ಕುತ್ತಾರ್‌ನ ಅಬೂಬಕರ್‌ ಸಿದ್ದಿಕ್‌(26) ಹಾಗೂ ಪರಂಗಿಪೇಟೆ ಪುದುವಿನ ಅಬ್ದುಲ್‌ ಸಿದ್ದಿಕ್‌(33) ಬಂಧಿತರು.

ಇವರಲ್ಲಿ ಇದಾಯತುಲ್ಲಾ ಹಾಗೂ ಬಶೀರ್‌ ವಿರುದ್ಧ ವಿವಿಧ ಪ್ರಕರಣಗಳು ಹಿಂದೆಯೂ ದಾಖಲಾಗಿವೆ.

ಮೇ 25 ರಂದು ಮಲ್ಲೂರು ರಸ್ತೆಯಲ್ಲಿ ಈ ನಾಲ್ವರು ಮಾಸ್ಕ್‌ ಧರಿಸದೆ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದ ಪಿಡಿಒ ರಾಜೇಂದ್ರ ಶೆಟ್ಟಿ ದಾಖಲೆಗಾಗಿ ಮೊಬೈಲ್‌ನಲ್ಲಿ ಫೊಟೊ ತೆಗೆದಿದ್ದರು. ಆಗ ಆರೋಪಿಗಳು ಪಿಡಿಒರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದರು. ಗ್ರಾ.ಪಂ ಕಚೇರಿ ಸಿಬ್ಬಂದಿ, ಅಧ್ಯಕ್ಷರು ಸ್ಥಳಕ್ಕೆ ಆಗಮಿಸಿದಾಗ  ಆರೋಪಿಗಳು KA 19 MJ 9737 ಮತ್ತು ಸ್ಕೂಟರ್ KA 19 EW 6783 ರಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.

ತಲೆಮರೆಸಿಕೊಂಡ ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಮನ್ಸೂರ್‌ ಆಲಿ ಎಂಬನನ್ನು ಬಂಧಿಸಬೇಕಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English