ಅಕ್ಕನ ಮಗಳನ್ನು ಮದುವೆಯಾಗಿ ಕೆಎಎಸ್​ ಅಧಿಕಾರಿಯನ್ನಾಗಿ ಮಾಡಿದ ವ್ಯಕ್ತಿ ಕೊರೊನಾಗೆ ಬಲಿ

1:58 PM, Thursday, May 27th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

seenaಶಿವಮೊಗ್ಗ:  ಹೆಂಡತಿಯನ್ನ ಚೆನ್ನಾಗಿ ಓದಿಸಿ ಕೆಎಎಸ್ ಅಧಿಕಾರಿ ಮಾಡಲು ಶ್ರಮ ವಹಿಸಿದ್ದ ವ್ಯಕ್ತಿ  ಮಹಾಮಾರಿ ಕರೊನಾಗೆ ಬಲಿಯಾಗಿದ್ದಾನೆ.

ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ಸೀನಾ ಅಲಿಯಾಸ್ ಕಡ್ಡಿ ಸೀನಾ ಮೃತ ದುರ್ದೈವಿ.

ಕಡ್ಡಿ ಸೀನಾ ತನ್ನ ಅಕ್ಕನ ಮಗಳು ಅಶ್ವಿನಿಯನ್ನು ಮದುವೆಯಾಗಿದ್ದ. ಆತ ಓದಿರಲಿಲ್ಲ ಅದಕ್ಕಾಗಿ ಹೆಂಡತಿಯಾದರೂ ಓದಿ ಕೆಎಎಸ್ ಅಧಿಕಾರಿ ಆಗಲಿ ಎಂದು ಬಯಸಿದ್ದ. ಹೀಗಾಗಿ ಹೆಂಡತಿಗೆ ಕೆಎಎಸ್ ಪೂರ್ವಬಾವಿ ತರಬೇತಿ ಕೊಡಿಸಿದ್ದ.

ಆತನ ಹೆಂಡತಿ ಅಶ್ವಿನಿ 2020 ರಲ್ಲಿ ಕೆಎಎಸ್ ಪಾಸ್ ಮಾಡಿ ಆರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಹಸೀಲ್ದಾರ್ ಹುದ್ದೆಗೇರಿದರು. ಆದರೆ ಇದೀಗ ಸೀನಾ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English