ಸಮುದ್ರದಲ್ಲಿ ಎಂಜಿನ್ ಕೆಟ್ಟು ನಿಂತ ಬೋಟ್, 10 ಮೀನುಗಾರರನ್ನು ರಕ್ಷಿಸಿದ ಕರಾವಳಿ ಕಾವಲು ಪಡೆ

6:42 PM, Thursday, May 27th, 2021
Share
1 Star2 Stars3 Stars4 Stars5 Stars
(No Ratings Yet)
Loading...

Tamilnadu-boatಮಂಗಳೂರು : ತಮಿಳುನಾಡಿನ ಲಾರ್ಡ್ ಆಫ್ ದಿ ಓಷಿಯನ್ ಹೆಸರಿನ ಬೋಟ್  ಎಂಜಿನ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು, ಸಮುದ್ರದಲ್ಲಿ ಸಿಲುಕಿತ್ತು, ಬೋಟಿನಲ್ಲಿದ್ದ ತಮಿಳುನಾಡಿನ 10 ಮೀನುಗಾರರನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.

ತೌಕ್ತೇ ಚಂಡಮಾರುತದಿಂದಾಗಿ ಮೇ 14 ರಂದು ಪೋರ ಬಂದರ್‌ನಲ್ಲಿ ಲಾರ್ಡ್ ಆಫ್ ದಿ ಓಷಿಯನ್ ಬೋಟ್ (ಐಎನ್‌ಡಿ-ಟಿಎನ್ -15-ಎಂಎಂ -5338) ಆಶ್ರಯ ಪಡೆದಿತ್ತು. ಬಳಿಕ ಮೇ 19 ರಂದು ಬಂದರಿನಿಂದ ಹೊರಟಿತ್ತು . ಆದರೆ ಮಂಗಳೂರು ಬಳಿ ಎಂಜಿನ್ ವೈಫಲ್ಯದಿಂದಾಗಿ ಸಮುದ್ರ ಮದ್ಯೆ ಸಿಲುಕಿತ್ತು.

ಮಂಗಳೂರು ಸಮೀಪ ಕಡಲ ತೀರದಿಂದ 20 ನಾಟಿಕಲ್‌ ಮೈಲಿ ದೂರದಲ್ಲಿದ್ದ ಬೋಟ್ ನ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ, ಮಂಗಳೂರು ಬಂದರಿನಿಂದ ರಕ್ಷಣಾ ಕಾರ್ಯಾಚರಣೆಗಾಗಿ ಐಸಿಜಿ ರಾಜದೂತ್‌ ಹಡಗನ್ನು ಸ್ಥಳಕ್ಕೆ ಕಳುಹಿಸಿತ್ತು. ರಾಜದೂತ್‌ ಹಡಗಿನ ಮೂಲಕ ಸಮುದ್ರದಲ್ಲಿ ಸಿಲುಕಿದ್ದ ಬೋಟ್‌ ಹಾಗೂ ಅದರಲ್ಲಿದ್ದ 10 ಜನ ಮೀನುಗಾರರನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದೆ.

ಸದ್ಯ ಮೀನುಗಾರರನ್ನು ಹಾಗೂ ಬೋಟ್ ಅನ್ನು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English