ಹಳ್ಳಿಗಳಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಲು ಸಿದ್ಧತೆ: ಜಿಪಂ ಸಿಇಓ ಡಾ. ಸುಶೀಲಾ

6:53 PM, Thursday, May 27th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

isolation center ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 144 ಗ್ರಾಮ ಪಂಚಾಯಿತಿ ಇವೆ. ಅದರಲ್ಲಿ 14 ಕೋವಿಡ್ ಕೇರ್ ಸೆಂಟರ್ ಜೊತೆಗೆ, 34 ಐಸೋಲೇಷನ್ ಕೇಂದ್ರಗಳು ಆರಂಭ ಮಾಡಲಾಗಿದೆ. ಆದ್ರೆ ಇದುವರೆಗೆ ಯಾವುದೇ ಕೊರೊನಾ ಮುಕ್ತ ಗ್ರಾಮವೆಂದು ಡಿಕ್ಲೇರ್ ಮಾಡಿಲ್ಲ, ಎಂದು ಜಿಲ್ಲಾ ಪಚಾಯಿತಿ ಸಿಇಓ ಡಾ. ಸುಶೀಲಾ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಬೆಡ್ ಗಳು ಖಾಲಿ ಇವೆ. ಆದ್ರೆ ತಾಲೂಕು ಕೇಂದ್ರಕ್ಕೆ ಬರಲು ಸೋಂಕಿತರ ಹಿಂದೇಟು ಹಾಕುತ್ತಿದ್ದಾರೆ. ಅಂಥವರಿಗೆ ಹಳ್ಳಿಯಲ್ಲಿಯೇ ಐಸೋಲೇಷನ್ ಗೆ ವ್ಯವಸ್ಥೆ ಮಾಡಿ, ಅಲ್ಲಿಯೇ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುವುದು ಎಂದರು. ಹೋಬಳಿ ಮತ್ತು ಪಂಚಾಯಿತಿ ಮಟ್ಟದಲ್ಲಿ 20 ಕೋವಿಡ್ ಕೇಂದ್ರಗಳನ್ನು ಸ್ಥಾಪನೆ ಮಾಡಿದೆ. ಧಾರವಾಡ ಜಿಲ್ಲೆಯಲ್ಲಿ 7000 ಕೇಸ್ ಗಳು ಬಂದಿದ್ದು, ಈ ಪೈಕಿ ಶೇ 23 ರಷ್ಟು ಪ್ರಕರಣಗಳು ಗ್ರಾಮೀಣ ಪ್ರದೇಶಕ್ಕೆ ಸೇರಿವೆ. ಪ್ರತಿ ದಿನ ಮೂರು ಸಾವಿರಕ್ಕೂ ಅಧಿಕ ಟೆಸ್ಟ್ ಮಾಡಲಾಗುತ್ತಿದೆ ಎಂದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯೂರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English