ಮಂಡ್ಯ : ಹನೂರು ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿಒಂದೇ ದಿನ ಮಕ್ಕಳು ಸೇರಿ 7 ಮಂದಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದೆ.
ವ್ಯಕ್ತಿಯೊಬ್ಬರಿಗೆ ಬೆಳಿಗ್ಗೆ ಅಂಗಡಿಗೆ ಹೋಗುವಾಗ ಏಕಾಏಕಿ ದಾಳಿ ನಡೆಸಿ ಬೀದಿನಾಯಿ ಗಾಯಗೊಳಿಸಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಸಿಗದೆ ಖಾಸಗಿ ಆಸ್ಪತ್ರೆಯಲ್ಲಿ ಅವರು ರೂ 350 ನೀಡಿ ಚುಚ್ಚುಮದ್ದು ಹಾಕಿಸಿಕೊಂಡಿದ್ದರು.
ಮಕ್ಕಳು ಸೇರಿ ಗ್ರಾಮದ ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ಮೂವರು ಹಾಗೂ ಮುಸ್ಲಿಂ ಬಡಾವಣೆಯಲ್ಲಿ ನಾಲ್ಕು ಜನರ ಮೇಲೆ ದಾಳಿ ಮಾಡಿವೆ.
ಒಂದೇ ದಿನ 7 ಮಂದಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದರೂ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿಲ್ಲ, ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ಹೋಗುವುದೇ ಕಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಜನರು ಬೇಕಾಬಿಟ್ಟಿ ಪದಾರ್ಥಗಳನ್ನು ಬೀದಿಗೆ ಎಸೆಯುದರಿಂದ ಕ್ರಮ ಕೈಗೊಳ್ಳದೆ ಇರುವುದರಿಂದ ನಾಯಿಗಳು ದಾಳಿ ಮಾಡಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English