ಕೊರೊನಾ ಬಂದಿದ್ದ ವ್ಯಕ್ತಿಗೆ ಬ್ಲಾಕ್ ಫಂಗಸ್, ಬೆಳ್ತಂಗಡಿಯಲ್ಲಿ ಮೊದಲ ಬಲಿ

2:29 PM, Friday, May 28th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

black fungusಬೆಳ್ತಂಗಡಿ: ಕೊರೊನಾದ ಬಳಿಕ ಕಣ್ಣು ಮತ್ತು ಕಿಡ್ನಿ ಸಮಸ್ಯೆ ಉಂಟಾಗಿ ಬ್ಲಾಕ್ ಫಂಗಸ್ ಗೆ ಬೆಳ್ತಂಗಡಿಯ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ.

ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿತ್ತು

ಕೊರೋನಾ ಚಿಕಿತ್ಸತೆಯ ಬಳಿಕ  ಬ್ಲ್ಯಾಕ್ ಫಂಗಸ್ ಗೋಚರಿಸಿದ್ದು ಕಣ್ಣಿನ ಆಪರೇಷನ್ ನಡೆಸಿದ್ದರು, ಬಳಿಕ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೇ 27ರಂದು ಮೃತಪಟ್ಟಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಬ್ಲಾಕ್ ಫಂಗಸ್ ಗೆ ಮೊದಲ ಬಲಿಯಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English