ಕೊರೋನಾ ಸೋಂಕು ಹೆಚ್ಚಳ : 20 ಮಂದಿ ಕೈದಿಗಳನ್ನು ಬಿಡುಗಡೆ ಮಾಡಿದ ಜಿಲ್ಲಾ ಕಾರಾಗೃಹ

7:30 PM, Friday, May 28th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

mandya-jailಮಂಡ್ಯ:  ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ ನಿರ್ದೇಶನ ಮೇರೆಗೆ ಜಿಲ್ಲಾ ಕಾರಾಗೃಹದಿಂದ 20 ಮಂದಿ ಕೈದಿಗಳನ್ನುಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿದ್ದ 20 ಮಂದಿಗೆ 45ದಿನಗಳ ಮಧ್ಯಂತರ ಜಾಮೀನು ದೊರಕಿದೆ.

ಕೊರೊನಾ ಸೋಂಕು ನಿಮಿತ್ತ ಕೊಲೆ, ದರೋಡೆ, ಸಣ್ಣಪುಟ್ಟಪ್ರಕರಣಗಳು ಸೇರಿದಂತೆ 7 ವರ್ಷ ಮೇಲ್ಮಟ್ಟ ಶಿಕ್ಷೆಯಾಗುವ ಬಂಧಿತರನ್ನು ಹೊರತುಪಡಿಸಿ 7 ವರ್ಷದೊಳಗಿನ ಕಾರಾಗೃಹ ಶಿಕ್ಷೆಯಾಗುವ ನ್ಯಾಯಾಂಗ ಬಂಧಿತರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರಿಂಕೋರ್ಟ್‌ಹಾಗೂ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಆಮೇರೆಗೆ ಬಂಧಿತರು ಜಿಲ್ಲಾ ಕಾನೂನುಸೇವೆಗಳ ಪ್ರಾ ಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಪ್ರಾ ಧಿಕಾರದ ಸಮಿತಿ ಅರ್ಜಿ ಪರಿಶೀಲಿಸಿಜಾಮೀನು ಮಂಜೂರು ಮಾಡುತ್ತದೆ.

ಸದ್ಯ ಮಂಡ್ಯಕಾರಾಗೃಹದಲ್ಲಿ 5 ಮಂದಿ ಅಪರಾಧಿಗಳು, 248 ಮಂದಿ ಪುರುಷರು 15 ಮಹಿಳೆಯರು ಸೇರಿದಂತೆ 263 ಬಂಧಿತರಿದ್ದಾರೆ. ಇದರಲ್ಲಿಈಗಾಗಲೇ 20 ಮಂದಿ ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಇನ್ನ ಕೆಲವರು ನ್ಯಾಯಾಂಗ ನಿಯಮಾವಳಿ ಪೂರೈಸಿ ಬಿಡುಗಡೆಯಾಗುವ ಹೊಸ್ತಿಲಲ್ಲಿದ್ದಾರೆ.

 

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English