ಬಿಜೆಪಿ ಮೂರು ಪಕ್ಷದ ಸರ್ಕಾರ ಎಂದು ಯೋಗೇಶ್ವರ್ ಹೇಳಿಕೆ ನೀಡುವುದು ಸರಿಯಲ್ಲ: ಕೆ.ಎಸ್.ಈಶ್ವರಪ್ಪ

8:09 PM, Friday, May 28th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

eshwarappaಶಿವಮೊಗ್ಗ: ಬಿಜೆಪಿ ಮೂರು ಪಕ್ಷದ ಸರ್ಕಾರ ಎಂದು ಸಿ.ಪಿ.ಯೋಗೇಶ್ವರ್  ಹೇಳಿಕೆ ನೀಡುವುದು ಸರಿಯಲ್ಲ. ಹೋದ ಕಡೆಯಲ್ಲೆಲ್ಲಾ ಮಾಧ್ಯಮವರು ಕೇಳುತ್ತಾರೆ. ಸರ್ಕಾರದಲ್ಲಿ ಇರಲು ಮನಸ್ಸಿಲ್ಲದಿದ್ದರೆ ಸಂಪುಟದಿಂದ ಹೊರ ಹೋಗಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.

ಯಾವುದೇ ಸಮಸ್ಯೆಗಳಿದ್ದರೆ ನಾಲ್ಕು ಗೋಡೆಯ ಮಧ್ಯೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲಿ. ಅದು ಬಿಟ್ಟು ದೆಹಲಿಗೆ ಹೋಗುವುದು, ಸಿಎಂ ವಿರುದ್ಧ ದೂರು ಹೇಳುವುದು ಸರಿಯಲ್ಲ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಅವರಿಗೆ ಅಗತ್ಯ ಸ್ಥಾನಮಾನ ನೀಡಿದೆ. ಯೋಗೀಶ್ವರ್ ನನ್ನ ಒಳ್ಳೆಯ ಸ್ನೇಹಿತ. ಆದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.

ಈ ಬೆಳವಣಿಗೆಯಿಂದ ನಮಗೆ ಮುಜುಗರವಾಗುತ್ತಿದೆ. ಬಿಜೆಪಿಯಲ್ಲಿ ಅಶಿಸ್ತಿನ ಬೆಳವಣಿಗೆಯನ್ನು ಸಹಿಸುವುದಿಲ್ಲ ಎಂದರು.

ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ವರಿಷ್ಠರು ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಸಿಎಂ ಬದಲಾವಣೆಗೆ ತಮ್ಮ ವಿರೋಧದ ಬಗ್ಗೆ ಈಶ್ವರಪ್ಪ ಮತ್ತೊಮ್ಮೆ ಸ್ಪಷ್ಟ ಪಡಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English