ಹುಬ್ಬಳ್ಳಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇವತ್ತು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿ ಗೆ ಆಗಮಿಸಿದ್ದರು. ಮೂರು ತಿಂಗಳು ಕಳೆದ ಮೇಲೆ ಸಿದ್ದರಾಮಯ್ಯ ಹುಬ್ಬಳ್ಳಿ ಗೆ ಆಗಮಿಸಿದ್ದರು. ತಾವು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಕ್ಕೆ ತೆರಳಲು ಇವತ್ತು ಹುಬ್ಬಳ್ಳಿ ಗೆ ಆಗಮಿಸಿದ್ದರು.. ರಸ್ತೆ ಮುಖಾಂತರ ಹುಬ್ಬಳ್ಳಿ ಗೆ ತೆರಳಿದರು..ಕೊರೊನಾ ಕೊವಿಡ19 ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಾಮಾಜಿಕ ಅಂತರ ಹಾಗೂ ಮಾಸ್ಕ ಹಾಕಿಕೊಳ್ಳುವಂತೆ ಸರಕಾರ ಆದೇಶ ನೀಡಿದೆ..ಆದರೆ ಸಿದ್ದರಾಮಯ್ಯನವರ ವಾಹನದಲ್ಲಿ ಮಾತ್ರ ಸಾಮಾಜಿಕ ಅಂತರ ಕಾಣಲಿಲ್ಲ.
ಹೌದು, ಮರ್ಜಡಿಸ್ ಬೆಂಜ್ ಕಾರ ನಲ್ಲಿ ಒಟ್ಟು 7 ಜನರು ಬದಾಮಿ ಪ್ರಯಾಣ ಬೆಳೆಸಿದರು. ಕರೊನಾ ರೂಲ್ಸ್ ಪಾಲಿಸಬೆಕಾದ ರಾಜಕೀಯ ನಾಯಕರೆ ಸಾಮಾಜಿಕ ಅಂತರ ವಿಲ್ಲದೇ ಒಂದೇ ಕಾರಿನಲ್ಲಿ 7 ಜನರು ಪ್ರಯಾಣ ಮಾಡಿದ್ದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ..
ಪ್ರತಿ ದಿನ ಹುಬ್ಬಳ್ಳಿ ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರಿನಲ್ಲಿ ಸಾಮಾಜಿಕ ಅಂತರ ವಿಲ್ಲದೇ ವಾಹನ ಚಾಲನೆ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗುತ್ತಿದೆ. ಆದರೆ ರಾಜಕೀಯ ಮುಖಂಡರ ವಾಹನಗಳಲ್ಲಿ ತಮಗೆ ಬೇಕಾದಷ್ಟು ಜನರನ್ನು ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ್ರೆ, ರಾಜಕಿಯರ ನಾಯಕರಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯ ಎಂಬಂತಾಗಿದೆ.
Click this button or press Ctrl+G to toggle between Kannada and English