ಬೆಂಗಳೂರು : ಕೋವಿಡ್ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ಇಂದು ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ ಅವರ ನೇತೃತ್ವದ ಮೈ ಸೇವಾ ತಂಡವು ರಾಜ್ಯದ 16 ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡುವ ಕಾರ್ಯಕ್ಕೆ ಕಂದಾಯ ಸಚಿವ ಆರ್ ಅಶೋಕ, ಬಿ ವೈ ವಿಜಯೇಂದ್ರ, ಸಂಸದರಾದ ಪಿ ಸಿ ಮೋಹನ್, ಮುನಿಸ್ವಾಮಿ, ಶಾಸಕರಾದ ಪ್ರೀತಮ್ ಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ ಅಶೋಕ,”ಗ್ರಾಮೀಣ ಪ್ರದೇಶದಲ್ಲಿನ ಸೋಂಕಿತರು ಸಕಾಲದಲ್ಲಿ ಆಸ್ಪತ್ರೆಗೆ ತಲುಪುವುದಕ್ಕೆ ನೆರವಾಗುವ ನಿಟ್ಟಿನಲ್ಲಿ ಬಿ ವೈ ವಿಜಯೇಂದ್ರ ಅವರ ನೇತೃತ್ವದ ಮೈಸೇವಾ ತಂಡದ ಕಳಕಳಿಯ ಫಲವಾಗಿ 16 ಆ್ಯಂಬುಲೆನ್ಸ್ ಗಳನ್ನ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನ ಒದಗಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಜನ ನಗರಗಳಿಂದ ಹಳ್ಳಿಗಳಿಗೆ ವಲಸೆ ಹೋಗಿದ್ದಾರೆ. ಈ ಕಾರಣಕ್ಕೆ ಆ ಭಾಗದಲ್ಲಿ ಸೋಂಕು ವ್ಯಾಪಕವಾಗಿದ್ದು, ಸಕಾಲದಲ್ಲಿ ನೆರವು ಸಿಗುವುದು ಕಷ್ಟವಾಗುತ್ತಿದೆ. ಹೀಗಾಗಿ ಈ ಆ್ಯಂಬುಲೆನ್ಸ್ ಗಳು ಗ್ರಾಮೀಣ ಭಾಗದಲ್ಲಿನ ಸೋಂಕಿತರನ್ನ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಅವರಿಗೆ ಚಿಕಿತ್ಸೆ ದೊರಕಿಸುವ ಕಾರ್ಯ ಮಾಡುತ್ತವೆ”, ಎಂದರು.
“ಹಳ್ಳಿಯ ಜನರಿಗೆ ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಮೈ ಸೇವಾ ಕೈಗೊಂಡಿರುವ ಈ ಕಾರ್ಯವು ಎಲ್ಲರಿಗೂ ಮಾದರಿಯಾಗಿದ್ದು, ಅವರ ಈ ವಿಶಿಷ್ಟ ಪ್ರಯತ್ನ ಶ್ಲಾಘನೀಯವಾಗಿದೆ. ಸಧ್ಯದಲ್ಲೇ ಈ ಸೇವೆಗಳು ಗ್ರಾಮೀಣ ಭಾಗದಲ್ಲಿ ದೊರೆಯಲಿದ್ದು, ಸೋಂಕಿತರ ಜೀವ ರಕ್ಷಣೆಯಲ್ಲಿ ಇವು ಮಹತ್ತರ ಪಾತ್ರವಹಿಸಲಿವೆ”, ಎಂದು ತಿಳಿಸಿದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯುರೋ.
Click this button or press Ctrl+G to toggle between Kannada and English