ಶಿಕ್ಷಕರ ಬೋಧನೆ, ಉತ್ತಮ ನಡತೆ ವಿದ್ಯಾರ್ಥಿಗಳ ಜೀವನದ ದಾರಿದೀಪ

9:00 PM, Saturday, May 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Boodishwaraಗದಗ : ಶಿಕ್ಷಕರ ಬೋಧನೆ ಹಾಗೂ ಉತ್ತಮ ನಡತೆ ವಿದ್ಯಾರ್ಥಿಗಳಿಗೆ ದಾರಿದೀಪವಾಗುತ್ತದೆ ಎಂದು ಹೊಸಳ್ಳಿಮಠದ ಶ್ರೀ ಬೂದೀಶ್ವರ ಮಹಾಸ್ವಾಮಿಗಳು ನುಡಿದರು.

ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಶುಕ್ರವಾರದಂದು ಹಮ್ಮಿಕೊಳ್ಳಲಾದ ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬುವ ವರ್ಚುವಲ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಶಿಕ್ಷಕ ಕರ್ಮಯೋಗಿ ವಿಷಯ ಕುರಿತು ಉಪನ್ಯಾಸ ನೀಡುತ್ತಾ ವಸಂತ ಋತು ಎಂದರೆ ಹೊಸದು. ಹಳೆಯದನ್ನು ಕಳೆದುಕೊಂಡು ಹೊಸದನ್ನು ಪಡೆದುಕೊಳ್ಳುವುದಾಗಿದೆ. ಮನುಷ್ಯನು ಸೇರಿದಂತೆ ಭೂಮಿಯ ಮೇಲೆ ಒಟ್ಟು 14 ಲಕ್ಷ ಜೀವರಾಶಿಗಳಿವೆ. ಜೀವನದಲ್ಲಿ ಬದುಕು ಸುಖದಿಂದ ಕೂಡಿರಬೇಕೆಂದು ಎಂದು ಎಲ್ಲರೂ ಆಸೆ ಪಡುತ್ತಾರೆ. ಜೀವನದಲ್ಲಿ ಹುಟ್ಟು, ಬದುಕು, ಸಾವುಗಳನ್ನು ಅರಿತು ಬದುಕಿನಲ್ಲಿ ಸಕಾರಾತ್ಮಕ ಯೋಚನೆಗಳನ್ನು ಬೆಳೆಸಿಕೊಂಡು ಪರರ ಒಳಿತಿಗಾಗಿ ಶ್ರಮಿಸುವುದರ ಮೂಲಕ ಬದುಕನ್ನು ಸಾರ್ಥಕಗೊಳಿಸಬೇಕು ಎಂದು ನುಡಿದರು.

ಶಿಕ್ಷಕ ವೃತ್ತಿಯು ಅತ್ಯಂತ ಶ್ರೇಷ್ಠವಾದದ್ದು ಶಿಕ್ಷಕರ ನಡೆ-ನುಡಿಯನ್ನು ವಿದ್ಯಾರ್ಥಿಗಳು ಶಿಕ್ಷಕರನ್ನು ಅನುಸರಿಸುವುದರಿಂದ ಶಿಕ್ಷಕನ ನಡೆ-ನುಡಿ ಉತ್ತಮವಾಗಿರಬೇಕು. ಶಿಕ್ಷಕರಿಗೆ ಮಕ್ಕಳ ಚಟುವಟಿಕೆಗಳ ಕುರಿತು ಗಮನವಿರಬೇಕು. ಮನುಷ್ಯ ಚರಿತ್ರೆಯ ಜೊತೆಗೆ ಒಳ್ಳೆಯ ಚಾರಿತ್ರ್ಯ, ನೈತಿಕತೆಯನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು. ಕಣ್ಣು ನೋಡಿದ್ದನ್ನು ಬಯಸುತ್ತದೆ. ಕಾಮ, ಕ್ರೋಧ, ಮದ, ಮತ್ಸರಗಳನ್ನು ಹತೋಟಿಯಲ್ಲಿಡುವ ಮೂಲಕ ಆಧ್ಯಾತ್ಮ ಸಿದ್ಧಿಯನ್ನು ಗಳಿಸಬೇಕು ಎಂದರು. ಬದುಕು ಉನ್ನತೀಕರಣ ಆಗಬೇಕಾದರೆ ಆಧ್ಯಾತ್ಮವೆಂಬ ಮೂಲ ತಳಹದಿಯ ಮೇಲೆ ನಂಬಿಕೆ ಇರಬೇಕು. ನಂಬಿಕೆ, ವಿಶ್ವಾಸ ಎಂಬುವುದು ನಮ್ಮ ಮೂಲ ಧರ್ಮವಾಗಿರುವುದರಿಂದ ಶಿಕ್ಷಕರಿಗೆ ತಾವು ಮಾಡುವ ಪ್ರತಿ ಕೆಲಸದಲ್ಲಿ ದೃಢವಾದ ನಂಬಿಕೆ ಇರಬೇಕು. ನಂಬಿಕೆ ವಿಶ್ವಾಸಕ್ಕೆ ತಕ್ಕ ಹಾಗೆ ಅನೇಕ ದೃಷ್ಟಾಂತಗಳನ್ನು ನೀಡಿದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ. ಮನುಷ್ಯ ಕೆಟ್ಟ ಚಟಗಳಿಂದ ಮುಕ್ತನಾಗಿರಬೇಕು. ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾದರೆ ಶಿಸ್ತುಬದ್ಧವಾದ ದಿನಚರಿಯನ್ನು ಹಾಕಿಕೊಳ್ಳಬೇಕು. ದೈಹಿಕ ಸಂಪತ್ತು ಶಿಸ್ತುಬದ್ಧವಾದ ದಿನಚರಿಯಿಂದ ಬರುತ್ತದೆ. ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಉತ್ತಮ ವ್ಯಕ್ತಿತ್ವವು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಸದೃಢವಾದ ಮನೋಬಲಗಳನ್ನು ಬೆಳೆಸಿಕೊಳ್ಳವುದರ ಮೂಲಕ ಸಮಾಜಕ್ಕೆ ದಾರಿದೀಪವಾಗಬೇಕು. ಕರೋನಾ ಹಿನ್ನೆಲೆಯಲ್ಲಿ ಎಲ್ಲರೂ ಜಾಗೃತರಾಗಿ ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಎಂ.ಬಸವಲಿಂಗಪ್ಪ ಮಾತನಾಡಿ ಶಿಕ್ಷಕರು ತನು, ಮನ, ಧನದಿಂದ ಕಾರ್ಯವನ್ನು ನಿರ್ವಹಿಸಬೇಕು ಮೊದಲು ತನಗೆ ತಾನು ಬೋಧಿಸಿಕೊಂಡು ನಂತರ ಇತರರಿಗೆ ಬೋಧಿಸಬೇಕು. ಶಿಕ್ಷಕರನ್ನು ವಿದ್ಯಾರ್ಥಿಗಳು ಅನುಸರಿಸುವುದರಿಂದ ಶಿಕ್ಷಕರ ನಡೆ-ನಡಿಯು ಮಕ್ಕಳಿಗೆ ಆದರ್ಶಪ್ರಾಯವಾಗಿರಬೇಕೆಂದು ತಿಳಿಸಿದರು.

ಮಕ್ಕಳು ನಾಟಕ ಪ್ರದರ್ಶನದ ಮೂಲಕ ಹಸಿದವರಿಗೆ ಅನ್ನ ನೀಡಬೇಕು. ಅವಶ್ಯಕತೆ ಇರುವವರಿಗೆ ಸಹಾಯ ಮಾಡಬೇಕು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಸರಿಯಾದ ಮಾರ್ಗದರ್ಶನ ನೀಡಬೇಕೆಂದರು. ಎಸ್.ಎಸ್.ಗೌಡರ ಪ್ರಾರ್ಥಿಸಿದರು. ಎಂ.ಎ.ಯರಗುಡಿ ಸ್ವಾಗತಿಸಿದರು ಜಿ.ಎಲ್.ಬಾರಾಟಕ್ಕೆ ವಂದಿಸಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English