ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ

9:39 PM, Saturday, May 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

CM ಬೆಂಗಳೂರು  : ಮಹತ್ವದ ಸುದ್ದಿಗೋಷ್ಟಿ ನಡೆಸಿದ ಸಿಎಂ ಯಡಿಯೂರಪ್ಪ ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ ನೀಡೋದಾಗಿ ಘೋಷಿಸಿದ್ದಾರೆ.

ಶನಿವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರೂ ಮೃತಪಟ್ಟ ಅನಾಥ ಮಕ್ಕಳಿಗೆ ಈ ಸಹಾಯ ಧನ ತಲುಪಲಿದೆ ಎಂದಿದ್ದಾರೆ.

ಈ ಅನಾಥ ಮಕ್ಕಳನ್ನು ನೋಡಿಕೊಳ್ಳುವ ಸಂಬಂಧಿಕರು ಇರದಿದ್ದಲ್ಲಿ ನೋಂದಾಯಿತ ಪಾಲನಾ ಸಂಸ್ಥೆಗಳಿಗೆ ದಾಖಲಿಸಲಾಗುವುದು. ಹಾಗೂ ಈ ಸಹಾಯಧನ ಈ ಸಂಸ್ಥೆಗಳಿಗೆ ತಲುಪಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English