ನವದೆಹಲಿ: ಮೋದಿ ಸರ್ಕಾರ ಕೋವಿಡ್-19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎರಡನೇ ವರ್ಷ ಪೂರ್ಣಗೊಳಿಸುತ್ತಿರುವ ನಡುವೆ ಮೇ.29 ರಂದು ಮಹತ್ವದ ಘೋಷಣೆ ಪ್ರಕಟಿಸಿದೆ.
ಮಕ್ಕಳು 18 ವರ್ಷದವರಾಗುತ್ತಿದ್ದಂತೆಯೇ 10 ಲಕ್ಷ ಹಣ ದೊರೆಯಲಿದ್ದು ಶಿಕ್ಷಣವೂ ದೊರೆಯಲಿದೆ. ಕೋವಿಡ್-19 ನಿಂದ ಅನಾಥರಾದ ಮಕ್ಕಳಿಗಾಗಿ ಯೋಜನೆ ರೂಪಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಮಕ್ಕಳಿಗಾಗಿ ಪಿಎಂ-ಕೇರ್ಸ್ ಯೋಜನೆಯಡಿ ನೆರವು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಯೋಜನೆಯ ಬಗ್ಗೆ ಪ್ರಧಾನಿಗಳ ಕಚೇರಿ (ಪಿಎಂಒ) ಈ ಬಗ್ಗೆ ಹೇಳಿಕೆ ನೀಡಿದ್ದು, ಅನಾಥ ಮಕ್ಕಳ ಹೆಸರಿನಲ್ಲಿ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಲಾಗುತ್ತದೆ. ವಿಶೇಷ ಯೋಜನೆಯಡಿ 10 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಮಕ್ಕಳಿಗೆ 18 ವರ್ಷಗಳಾದಾಗ ನೀಡಲಾಗುತ್ತದೆ. ತಿಂಗಳ ಮಾಸಿಕ ಆರ್ಥಿಕ ಸಹಾಯ ಅಥವಾ ಉನ್ನತ ವಿದ್ಯಾಭ್ಯಾಸಕ್ಕಾಗಿ ನೀಡಲಾಗುತ್ತದೆ ಎಂದು ಹೇಳಿದೆ.
Click this button or press Ctrl+G to toggle between Kannada and English