ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಹೂಹಾಕುವ ಕಲ್ಲು ಶಾಖೆ ಬಾಳೆಪುಣಿ, ಬಂಟ್ವಾಳ ತಾಲೂಕು ಇದರ ವತಿಯಿಂದ ಬಾಳೆಪುಣಿ ಪಂಚಾಯತ್ ವ್ಯಾಪ್ತಿಗೊಳಪಟ್ಟ 12 ಮಂದಿ ಆಶಾ ಕಾರ್ಯಕರ್ತೆಯರು ಮತ್ತು ಕಿರಿಯ ಆರೋಗ್ಯ ಸಹಾಯಕಿಯರಿಗೆ ಆಹಾರ ಕಿಟ್ ಮತ್ತು ಸಹಾಯಧನದ ವಿತರಣಾ ಕಾರ್ಯಕ್ರಮ ನಡೆಯಿತು.
ಮಹಾಮಾರಿ ಕೋರೊನದ ವಿರುದ್ಧ ನಿಯೋಜಿಸಲ್ಪಟ್ಟ ಪ್ರಜೆಗಳ ಮನೆ ಬಾಗಿಲಿಗೆ ಸಂದರ್ಶಿಸಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಮಾಜದ ಭಾಗ್ಯತಾರೆಗಳಾದ ಆಶಾ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಊರಿನ ಸಹೃದಯ ದಾನಿಗಳ ನೆರವಿನಿಂದ ಗೌರವಿಸಲಾಯಿತು
ಇಂದು ಬಾಳೆಪುಣಿ ಗ್ರಾಮದ ಹೂಹಾಕುವಕಲ್ಲು ಇಲ್ಲಿ ಕೋರೊನ ಮಾರ್ಗಸೂಚಿಯಂತೆ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಇಲೆಕ್ಟ್ರಿಕಲ್ಸ್ ನ ಅಧ್ಯಕ್ಷರಾದ ಸಂತೋಷ ಕುಮಾರ್ ರೈಯವರ ಉಪಸ್ಥಿತಿಯಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಮಹೇಶ್ ಚೌಟರ ಮಾರ್ಗದರ್ಶನದಲ್ಲಿ ಪಂ. ಸದಸ್ಯ ಭಾಸ್ಕರ್ ಯಸ್ ಕೋಟ್ಯಾನ್ ರವರ ಸಂಯೋಜಕತ್ವವದಲ್ಲಿ ಸೀಮಿತ ಸ್ವಯಂಸೇವಕರ ಉಪಸ್ಥಿಯಲ್ಲಿ ಮಾಜಿ ಸೈನಿಕರಾದ ರಾಮಕೃಷ್ಣ ಶಾಸ್ತಿ, ಕೆ. ಐ. ಕೇಶವ ಭಟ್ಟ್ ರವರು ಆಶಾ ಕಾರ್ಯಕರ್ತರನ್ನು ಗೌರವಿಸಿದರು.
ರವಿರಾಜ್ ಗಟ್ಟಿ, ಚಂದ್ರಹಾಸ್ ಕಣಂತೂರ್, ಶರ್ಮಿಳಾ ರವೀಂದ್ರ, ಪಂ. ಸದಸ್ಯ ಸುನೀಲ್ ಗಟ್ಟಿಯವರು ಮತ್ತು ಇತರ ಸ್ವಯಂಸೇವಕರು ಹಾಜರಿದ್ದರು.
Click this button or press Ctrl+G to toggle between Kannada and English