ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಮತ್ತು 7 ವರ್ಷದ ಆಡಳಿತದಲ್ಲಿ ಆದ ಕುತೂಹಲಕಾರಿ ಬದಲಾವಣೆಗಳು

10:44 PM, Sunday, May 30th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Naredra-Modiಮಂಗಳೂರು  : ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ 2ನೇ ಅವಧಿಯ ಮತ್ತು ಒಟ್ಟು 7 ವರ್ಷದ ಆಡಳಿತ ನಡೆಸಿದೆ. ಭಾನುವಾರ ದೇಶದ ನಾಗರಿಕರನ್ನು ಉದ್ದೇಶಿಸಿ ತಮ್ಮ 77ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು  7 ವರ್ಷ ಪೂರೈಸಿದ ಸಂತಸ ವ್ಯಕ್ತ ಪಡಿಸಿದರು

ಕೊರೋನಾದಂತಹ ಸಾಂಕ್ರಾಮಿಕ ಪಿಡುಗು ದೇಶದ ಜನರ ಜೀವನಕ್ಕೆ ತೀವ್ರ ಹಾನಿ ಮಾಡಿ, ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಿದೆ. ಭಾರತವು ಈ ಪಿಡುಗಿನ ವಿರುದ್ಧ ಮೇಲುಗೈ ಸಾಧಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಏಳು ವರ್ಷಗಳಲ್ಲಿ ಸಂಪೂರ್ಣ ಶಾಂತಿ ಮತ್ತು ಸೌಹಾರ್ದತೆಯಿಂದ ಹಲವು ಹಳೆಯ ಸಂಕಷ್ಟ, ಸವಾಲು-ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಈಶಾನ್ಯ ಭಾರತದಿಂದ ಕಾಶ್ಮೀರದವರೆಗೆ ಹೊಸ ಶಾಂತಿ ಮತ್ತು ಬೆಳವಣಿಗೆಯ ಆತ್ಮವಿಶ್ವಾಸ ಮೂಡಿದೆ, ನಮ್ಮ ವಿರುದ್ಧ ಪಿತೂರಿ ಮಾಡುವವರಿಗೆ ಭಾರತ ಸೂಕ್ತ ಉತ್ತರ ನೀಡಿದೆ ಎಂದರು.

kota Srinivas Poojary ಡಿಜಿಟಲ್ ವಹಿವಾಟುಗಳಲ್ಲಿ ಕಳೆದ 7 ವರ್ಷಗಳಲ್ಲಿ ದೇಶ ಜಗತ್ತಿಗೆ ಹೊಸ ದಿಕ್ಕನ್ನು ತೋರಿಸಿದೆ. ಇಂದು ಜಗತ್ತಿನ ಯಾವ ಸ್ಥಳದಲ್ಲಿ ಕುಳಿತುಕೊಂಡು ಬೇಕಾದರೂ ನೀವು ಸುಲಭವಾಗಿ ಡಿಜಿಟಲ್ ಮೂಲಕ ಪಾವತಿ ಮಾಡಬಹುದು. ಈ ಕೊರೋನಾ ಸಮಯದಲ್ಲಂತೂ ಡಿಜಿಟಲ್ ವಹಿವಾಟಿನ ಬಳಕೆ ಎಷ್ಟು ಪ್ರಯೋಜನಕಾರಿ ಎಂದರು.

ಕೇಂದ್ರ ಸರ್ಕಾರದ ಯೋಜನೆಗಳಿಗೆ ಮನೆ ನಿರ್ಮಿಸಿಕೊಂಡ ಹಲವು ಫಲಾನುಭವಿಗಳು ತಮ್ಮ ಮನೆ ಗೃಹ ಪ್ರವೇಶಕ್ಕೆ ಆಹ್ವಾನ ಪತ್ರಿಕೆಗಳನ್ನು ನನಗೆ ಕಳುಹಿಸುತ್ತಿದ್ದಾರೆ. ಅಲ್ಲದೆ ಹಲವು ಉಪಗ್ರಹಗಳನ್ನು ಉಡಾಯಿಸಿದೆ. ಹೊಸ ರಸ್ತೆಗಳನ್ನು ನಿರ್ಮಿಸಿ ದಾಖಲೆಗಳನ್ನು ಬರೆದಿದೆ ಎಂದರು.

ಕೊರೋನಾ ಮೊದಲ ಅಲೆ ಬಂದಾಗ ಸಂಪೂರ್ಣ ಧೈರ್ಯದಿಂದ ನಾವು ಅದರ ವಿರುದ್ಧ ಹೋರಾಡಿದ್ದೇವೆ. ಈ ಬಾರಿ ಕೂಡ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ವಿಜಯಿಯಾಗಲಿದೆ ಎಂದರು. ಯಶಸ್ಸು ಇರುವಲ್ಲಿ ಪ್ರಯೋಗಗಳು ಕೂಡ ಇರುತ್ತದೆ. ಯಶಸ್ಸಿಗೆ ಹಲವು ಅಡೆ-ತಡೆಗಳು ಎದುರಾಗಬಹುದು. ಈ ಏಳು ವರ್ಷಗಳಲ್ಲಿ ನಾವೆಲ್ಲರೂ ಒಟ್ಟಾಗಿ ಹಲವು ಸಂಕಷ್ಟ ಸಮಯಗಳನ್ನು ಎದುರಿಸಿದ್ದೇವೆ, ಆದರೆ ಪ್ರತಿ ಬಾರಿ ಕೂಡ ನಾವು ಮತ್ತಷ್ಟು ಗಟ್ಟಿಯಾಗಿ ಗೆದ್ದು ಹೊರಬಂದಿದ್ದೇವೆ.

S Angaraಜಲಜೀವನ ಮಿಷನ್ ನಡಿ ನಲ್ಲಿ ನೀರು ಗ್ರಾಮದುದ್ದಕ್ಕೂ ತಲುಪಿದೆ.  ಏಳು ವರ್ಷಗಳಲ್ಲಿ ಕೇವಲ 3.5 ಕೋಟಿ ಗ್ರಾಮೀಣ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು. ಕಳೆದ 21 ತಿಂಗಳಲ್ಲಿ 4.5 ಕೋಟಿ ಗ್ರಾಮೀಣ ಮನೆಗಳಿಗೆ ಶುದ್ಧ ನೀರಿನ ಸಂಪರ್ಕ ನೀಡಲಾಗಿದೆ ಎಂದರು. ಆಯುಷ್ಮಾನ್ ಭಾರತ್ ಯೋಜನೆಯಿಂದ ಹೊಸ ನಂಬಿಕೆಯೊಂದು ದೇಶದ ಜನರಲ್ಲಿ ಬಂದಿದೆ, ಅದೆಂದರೆ ಆಸ್ಪತ್ರೆಯಿಂದ ಬಡ ರೋಗಿಯೊಬ್ಬ ಗುಣಮುಖನಾಗಿ ಬಂದರೆ ಹೊಸ ಜೀವನ ಸಿಕ್ಕಿದೆ ಎಂದು ಭಾವಿಸುತ್ತಾರೆ, ದೇಶ ಅವರ ಜೊತೆಗಿದೆ ಎಂದು ಬಡವರು ಭಾವಿಸುತ್ತಾರೆ.

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಲ್ಲಿ ವಿದ್ಯುತ್ ಸಂಪರ್ಕ ಹಳ್ಳಿ ಹಳ್ಳಿಗೆ ತಲುಪಿದೆ. ಇಂದು ವಿದ್ಯುತ್ ಬೆಳಕಿನಲ್ಲಿ ಅನೇಕ ಮಕ್ಕಳು ಓದುತ್ತಿದ್ದಾರೆ. ಫ್ಯಾನ್ ಕೆಳಗೆ ಕುಳಿತುಕೊಳ್ಳುತ್ತಾರೆ. ದೇಶದ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ ಭಾರತ ದಿಟ್ಟವಾಗಿ ಪ್ರತಿಕ್ರಿಯೆ ನೀಡುತ್ತಿದೆ ಎಂದರೆ ನಮ್ಮಲ್ಲಿರುವ ಆತ್ಮವಿಶ್ವಾಸ ಬೆಳೆದಿದೆ ಎಂದಲ್ಲವೇ ಎಂದು ಪ್ರಧಾನಿ ಕೇಳಿದ್ದಾರೆ.

ಇಂದು ಮೇ 30, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 7 ವರ್ಷಗಳನ್ನು ಪೂರೈಸಿದೆ. ಇದೇ ಹೊತ್ತಿಗೆ ಮನ್ ಕಿ ಬಾತ್ ನಲ್ಲಿ ಮಾತನಾಡುತ್ತಿದ್ದೇನೆ. ಇಷ್ಟು ವರ್ಷಗಳಲ್ಲಿ ದೇಶ ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದೊಂದಿಗೆ ನಡೆದುಕೊಂಡು ಮುಂದೆ ಸಾಗುತ್ತಿದೆ ಎಂದರು.

Bharath Shetty Y

ಮುಖ್ಯಾಂಶಗಳು

ನೋಟು ನಿಷೇಧ 
2016ರ ನವೆಂಬರ್‌ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪುಹಣ ನಿಯಂತ್ರಣ, ಭಯೋತ್ಪಾದನೆಗೆ ಹಣಕಾಸ ಪೂರೈಕೆಗೆ ಪ್ರಹಾರ ಇತ್ಯಾದಿ ಕಾರಣಗಳ ಹೆಸರಲ್ಲಿ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸುವ ಐತಿಹಾಸಿಕ ಕ್ರಮ ಕೈಗೊಂಡರು. ಅದರ ಬೆನ್ನಲ್ಲೇ 2,000 ರೂ. ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸಿದರು.

ಸಂವಿಧಾನದ 370ನೇ ವಿಧಿ ಹಾಗೂ 35 (ಎ) ಪರಿಚ್ಛೇದಗಳನ್ನು ರದ್ದು
2019 ರಲ್ಲಿ ಮೋದಿ ಸರಕಾರ  ತಾನು ಹಿಂದೆ ನೀಡಿದ್ದ ವಾಗ್ಧಾನವೊಂ ದನ್ನು ಅಧಿಕಾರಕ್ಕೆ ಬಂದ 100 ದಿನಗಳೊಳಗಾಗಿ ಪೂರೈಸಿತು. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ಕಲಂ ಅನ್ನು ಹಿಂಪಡೆದಿದ್ದಲ್ಲದೆ, ಆ ರಾಜ್ಯವನ್ನು ಲಡಾಖ್‌ ಹಾಗೂ ಜಮ್ಮು- ಕಾಶ್ಮೀರ ಎಂಬ ಎರಡು ಕೇಂದ್ರಾ ಡಳಿತ ಪ್ರದೇಶಗಳನ್ನಾಗಿಸ ಲಾಯಿತು. ಆಗ, ಎದುರಾದ ಅಂತರಾಷ್ಟ್ರೀಯ ಒತ್ತಡ ನಿಭಾಯಿಸುವ ಜತೆಯಲ್ಲಿ ದೇಶದಲ್ಲಿ ಹಿಂಸಾಚಾರಗಳು ನಡೆಯದಂತೆ ಎಚ್ಚರಿಕೆ ವಹಿಸಲಾಯಿತು.

Suni Kumar Vರಾಮಮಂದಿರಕ್ಕೆ ನಾಂದಿ 
2019ರಲ್ಲಿ ರಾಮಮಂದಿರ ವಿವಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಆದೇಶ ಹೊರಬೀಳುವುದಕ್ಕೂ ಮುನ್ನ ದೇಶಾದ್ಯಂತ ಯಾವುದೇ ಮತೀಯ ಗಲಭೆಗಳು ನಡೆಯದಂತೆ ಸೂಕ್ತ ವೇದಿಕೆಯನ್ನು ಸೃಷ್ಟಿಸಲಾಯಿತು. ತೀರ್ಪು ಹೊರಬೀಳಲು ಕೆಲವು ದಿನಗಳ ಮುನ್ನವೇ ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌, ಕೇಂದ್ರ ಗೃಹ ಸಚಿವ ಅಮಿತ್‌ ಮುಂತಾದವರು ಪರಿಸ್ಥಿತಿ ಯ ಸೂಕ್ಷ್ಮತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರು. ಮುಸ್ಲಿಮ ರಿಗೆ ಅನ್ಯಾಯವಾಗದಂತೆ ಭರವಸೆ ಕೊಟ್ಟರು. ಈ ಎಲ್ಲ ಕ್ರಮಗಳಿಂದ ಆ ಅಪಾಯ ಕಾರಿ ಪರಿಸ್ಥಿತಿಯನ್ನು ಜಾಣ್ಮೆಯಿಂದ ಸರಾಗವಾಗಿ ನಿಭಾಯಿಸಲಾಯಿತು.

ಚೀನೀ ವಸ್ತುಗಳಿಗೆ ಕಡಿವಾಣ 
ಗಡಿಯಲ್ಲಿ ಪದೇ ಪದೇ ಕ್ಯಾತೆ ತಗೆಯುವ ಚೀನಕ್ಕೆ ತಕ್ಕ ಪಾಠ ಕಲಿಸುವ ಸಲುವಾಗಿ, ಕೇಂದ್ರ ಸರಕಾರ ಹಲವಾರು ಕ್ರಮ ಕೈಗೊಂಡಿದೆ. ದೇಶ ದಲ್ಲಿ ಚಾಲ್ತಿಯಲ್ಲಿದ್ದ ಚೀನ ಮೂಲದ ಕಂಪೆನಿ ಗಳನ್ನು ಹೊಡೆದೋಡಿಸುವ ಆಗ್ರಹ ಜೋರಾಗಿದ್ದರಿಂದ ಚೀನ ಮೂಲದ 267 ಮೊಬೈಲ್‌ ಆ್ಯಪ್‌ ಗಳಿಗೆ  ನಿರ್ಬಂಧ ವಿಧಿಸಲಾಯಿತು. ಚೀನ ಹೂಡಿಕೆ ನಿರ್ಬಂಧಿಸುವ ಸಲುವಾಗಿ, ಭಾರತ ನೆರೆಯ ದೇಶಗಳಿಂದ ಬರುವ ಹೂಡಿಕೆಗಳು ಕೇಂದ್ರದ ಅನುಮತಿ ಪಡೆದ ನಂತರವಷ್ಟೇ ದೇಶದ ವಾಣಿಜ್ಯ ವಲಯ ಪ್ರವೇಶಿಸಬೇಕೆಂಬ ನಿಯಮ ಜಾರಿಗೊಳಿಸಲಾಯಿತು.

ಜಿಎಸ್‌ಟಿ ತೆರಿಗೆ
ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದಿ.1 ಜುಲೈ, 2017 ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು. ತೆರಿಗೆ ವಿವಾದಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ 2020-21ರ ಬಜೆಟ್‌ನಲ್ಲಿ ಘೋಷಿಸಲಾಗಿರುವ ಸೌಲಭ್ಯ. ಇದರಡಿ, 2020ರ ಮಾ. 31ರವರೆಗಿನ ತೆರಿಗೆ ವ್ಯಾಜ್ಯಗಳನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಿಕೊಳ್ಳಲು ಸುವರ್ಣಾವಕಾಶ.

vedavyas Kamathಕೃಷಿ ವಲಯಕ್ಕೆ ಚೇತನ
ಈ ವಲಯ ದೇಶದ ಬೆನ್ನೆಲುಬು ಎಂಬುದನ್ನು ಅರಿತಿರುವ ಕೇಂದ್ರ ಸರಕಾರ, 2024ರ ಹೊತ್ತಿಗೆ ರೈತರ ಆದಾಯವನ್ನು
ದ್ವಿಗುಣಗೊಳಿಸುವ ತನ್ನ ಹಿಂದಿನ ಗುರಿ ಈಡೇರಿಸುವಲ್ಲಿ ಬದ್ಧವಾಗಿದೆ. ಆ ನಿಟ್ಟಿನಲ್ಲಿ 2021ರ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಇದರಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಕೃಷಿ ಮಾರುಕಟ್ಟೆ ಉತ್ಪನ್ನ ಸಮಿತಿಗಳಲ್ಲೇ (ಎಪಿಎಂಸಿ) ಮಾರುವುದು ಕಡ್ಡಾಯವೇನಿಲ್ಲ. ದೇಶದ ಯಾವ ಮೂಲೆಗಾದರೂ ತಮ್ಮ ಬೆಳೆ ಕೊಂಡೊಯ್ದು ಮಾರಾಟ ಮಾಡಬಹುದು. ಅದಕ್ಕೆ ಬೇಕಾದ ಮೂಲ ಸೌಕರ್ಯ ನೀಡುವ ನಿಟ್ಟಿನಲ್ಲಿ ಕೃಷಿ ಕಾಯ್ದೆಯಲ್ಲಿ ಕ್ರಮ ಕೈಗೊಳ್ಳ ಲಾಗಿದೆ. 2019ರಲ್ಲೇ ರೈತರಿಗೆ ಮಾಸಿಕ 3,000 ರೂ. ಪಿಂಚಣಿ ನೀಡುವ ಪ್ರಧಾನ ಮಂತ್ರಿ ಕಿಸಾನ್‌ ಮಾನ್‌-ಧನ್‌ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಬ್ಯಾಂಕ್‌ ಗಳ ವಿಲೀನ
ವಿಲೀನ ಪ್ರಮುಖ ಬ್ಯಾಂಕ್‌ ಗಳ ವಿಲೀನದಿಂದ ಆ ಕ್ಷೇತ್ರದ ಅಸ್ಥಿರತೆ ನಿವಾರಿಸ ಲಾಗಿದೆ. ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌, ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ ಪಿಎನ್‌ಬಿಗೆ, ಸಿಂಡಿಕೇಟ್‌ ಬ್ಯಾಂಕ್‌, ಕೆನರಾಬ್ಯಾಂಕ್‌ಗೆ, ಆಂಧ್ರ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡವು.

Sudarshan Mಕೈಗಾರಿಕಾ ವಲಯ
ದೇಶವನ್ನು ಮೊಬೈಲ್‌, ಟ್ಯಾಬ್‌, ಎಲ್‌ಇಡಿ ಪರದೆ ಹಾಗೂ ಹಾರ್ಡ್‌ ವೇರ್‌ ಉತ್ಪಾದನೆಯ ಸ್ಪರ್ಗವನ್ನಾಗಿಸುವ ಉದ್ದೇಶ ದಿಂದ ಈ ವಲಯಗಳಿಗೆ ಉತ್ಪಾದನ ಆಧಾರಿತ ಪ್ರೋತ್ಸಾಹ ಧನ ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗಿದೆ. ನಷ್ಟದ ಕೈಗಾರಿಕೆಗ‌ಳ ಪುನಶ್ಚೇತನಕ್ಕಾಗಿ ಬಂಡವಾಳ ಹಿಂತೆಗೆತ ಮೊತ್ತವನ್ನು ಹೆಚ್ಚಸಲಾಗಿದೆ.

ಮೂಲಸೌಕರ್ಯ
ಹೊಸ ಹೆದ್ದಾರಿಗಳ ನಿರ್ಮಾಣದಂಥ ಯೋಜನೆಗಳಲ್ಲಿ ಶೇ. 88ರಷ್ಟು ಪ್ರಗತಿ ಸಾಧಿಸಿದೆ. ಇದಲ್ಲದೆ, ವಿಶ್ವದ ಅತಿ ಎತ್ತರದ ಚೆನಾಬ್‌ ರೈಲ್ವೆ ಸೇತುವೆ, ಹಿಮಾಚಲ ಪ್ರದೇಶದ ಲೇಹ್‌ ಹಾಗೂ ಮನಾಲಿಯನ್ನು ಸಂಪರ್ಕಿಸುವ ಹೆದ್ದಾರಿಯ ನಡುವೆ ನಿರ್ಮಿಸಲಾಗಿರುವ ಅಟಲ್‌ ಸುರಂಗ ಮಾರ್ಗ ಕಟ್ಟಿ ಭಾರತದ ತಾಕತ್ತನ್ನು ಪರಿಚಯಿಸಲಾಗಿದೆ.

ವೈಜ್ಞಾನಿಕ ಕ್ಷೇತ್ರ
ಇಸ್ರೋ ಖಾಸಗಿ ಸಹಭಾಗಿತ್ವದ ಅವಕಾಶ ಕಲ್ಪಿಸುವ ಮೂಲಕ ಆ ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಇಸ್ರೋಗೆ ಆದಾಯ ಹೆಚ್ಚಾಗಿ, ಅದರ ಮೇಲಿನ ಹೊರೆಯೂ ಕಡಿಮೆಯಾಗಲಿದೆ. 2022ರಲ್ಲಿ ಉದ್ದೇಶಿತ ಮಾನವ ಸಹಿತ ಗಗನಯಾನ ಕೈಗೊಳ್ಳಲು ಫ್ರಾನ್ಸ್‌, ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

Rajesh Naik Uಯುಎಪಿಎ
ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದ ಕೇಂದ್ರ ಸರಕಾರ, ತಿದ್ದುಪಡಿಗೊಂಡ ಕಾಯ್ದೆಯ ಅನುಷ್ಠಾನಕ್ಕಾಗಿ ಸರ್ಕಾರಿ ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಕಲ್ಪಿಸಿತು. ಇದರ ವಿರುದ್ಧ ವಿಪಕ್ಷಗಳು ಭಾರೀ ಆಕ್ಷೇಪ ವ್ಯಕ್ತಪಡಿಸಿದವು. ಆದರೆ, ಉಗ್ರವಾದವನ್ನು ಮಟ್ಟಹಾಕಲು ಇದು ಅತ್ಯಂತ ಮಹತ್ವದ ಹೆಜ್ಜೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದನ್ನು ಸಮರ್ಥಿಸಿಕೊಂಡರು. ಯಾವುದೇ ವ್ಯಕ್ತಿಯು ಉಗ್ರವಾದ ಚಟುವಟಿಕೆಯಲ್ಲಿ ನಿರತನಾಗಿದ್ದಾನೆಂಬ ಗುಮಾನಿಯ ಮೇಲೆ ಆ ವ್ಯಕ್ತಿಯನ್ನು ಬಂಧಿಸುವ ಹಾಗೂ ಆತನ ಆಸ್ತಿಯನ್ನು ವಶಕ್ಕೆ ಪಡೆಯುವ ಅವಕಾಶ ಈ ತಿದ್ದುಪಡಿಯಲ್ಲಿದೆ.

ಪೌರತ್ವ ಕಾಯ್ದೆ
ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶಗಳಲ್ಲಿರುವ ಮುಸ್ಲಿಮೇತರ ಸಮುದಾಯಗಳಿಗೆ ಭಾರತದ ಪೌರತ್ವ ನೀಡುವ ಉದ್ದೇಶದಿಂದ ರಾಷ್ಟ್ರೀಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಇದು ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಮಾಡಿದ್ದ ವಾಗ್ಧಾನ. ಇದರಿಂದ ದೇಶದಲ್ಲಿ ಗಲಭೆಗಳು ಎದ್ದವು. ವಿಪಕ್ಷಗಳು ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದವು. ಅದಾಗಲೇ ವಿವಾದವೆಬ್ಬಿಸಿದ್ದ ರಾಷ್ಟ್ರೀಯ ನಾಗರಿಕರ ನೋಂದಾವಣಿ (ಎನ್‌ಆರ್‌ಸಿ) ವಿಚಾರದೊಂದಿಗೆ ಪೌರತ್ವ ಕಾಯ್ದೆಯನ್ನು ಥಳಕು ಹಾಕಲಾಯಿತು. ಆದರೆ, ಇದ್ಯಾವುದಕ್ಕೂ ಜಗ್ಗದ ಸರಕಾರ ದೃಢಮನಸ್ಸಿನಿಂದ ಇದನ್ನು ಜಾರಿಗೊಳಿಸಿತು.

ಶಿಕ್ಷಣ ಕ್ಷೇತ್ರ
2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ದೇಶದ ವಿದ್ಯಾಭ್ಯಾಸ ಕ್ಷೇತ್ರಕ್ಕೆ ಹೊಸ ಕಾಯಕಲ್ಪ ನೀಡಲು ಹಾಗೂ ಆಧುನಿಕ ಕಾಲಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ನೀಡಲು ಒತ್ತು ನೀಡಲಾಗಿದೆ. ಈವರೆಗಿನ 10+ 2 ಶಿಕ್ಷಣ ಪದ್ಧತಿಯನ್ನು ( ಬದಲಿಸಿ, 5+3+3+4 ಎಂದು (ಮಕ್ಕಳ ಅಂಗನವಾಗಿ, ಪ್ರೀ ನರ್ಸರಿ, ನರ್ಸರಿ, 1 ಹಾಗೂ 2ನೇ ತರಗತಿಯ 5 ವರ್ಷ ಅಡಿಪಾಯ ಶಿಕ್ಷಣ+ ಮೂರರಿಂದ 5ನೇ ತರಗತಿವರೆಗೆ ಪೂರ್ವಭಾವಿ ಶಿಕ್ಷಣ + 6ರಿಂದ 8ನೇ ತರಗತಿವರೆಗೆ ಮಾಧ್ಯಮಿಕ ಶಿಕ್ಷಣ + 8ರಿಂದ 12ನೇ ತರಗತಿವರೆಗೆ ಪ್ರೌಢಶಿಕ್ಷಣವೆಂದು ಹೆಸರಿಸಲಾಗಿದೆ.

Mattaru Rathnakara Hegdeರಕ್ಷಣ ವಲಯ
ರಕ್ಷಣ ವಲಯದಲ್ಲಿ ಇದ್ದ ವಿದೇಶಿ ಹೂಡಿಕೆಯ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಹೆಚ್ಚಿಸುವ ಮೂಲಕ ಡಸಾಲ್ಟ್ ಏವಿಯೇಷನ್‌ನಂಥ ದೈತ್ಯ ಯುದ್ಧ ಸಲಕರಣೆಗಳನ್ನು ತಯಾರಿಸುವ ಕಂಪೆನಿಗಳು ಭಾರತದಲ್ಲಿ ಬಂಡವಾಳ ಹೂಡಲು ಅವಕಾಶ ಕಲ್ಪಿಸಲಾಗಿದೆ. ರಕ್ಷಣ ಸಲಕರಣೆಗಳ ವಿಚಾರದಲ್ಲಿ ಭಾರತ ವನ್ನು ಸ್ವಾವಲಂಬಿಯಾಗಿಸುವುದು ಇದರ ಮೂಲ ಉದ್ದೇಶ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English