ನನ್ನ ಒಂದು ಹೇಳಿಕೆಯಿಂದ ಖಳನಾಯಕನಾಗಿ ಬಿಟ್ಟೆ : ಸಿ ಪಿ ಯೋಗೇಶ್ವರ್

9:51 PM, Tuesday, June 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

cp Yogeshwaಮೈಸೂರು :  ಎಸ್ಕಾರ್ಟ್ ಇಲ್ಲದೆ‌‌  ಸಚಿವ ಸಿ ಪಿ ಯೋಗೇಶ್ವರ್ ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಸುತ್ತೂರು ಮಠಕ್ಕೆ ದಿಢೀರ್ ಬೇಟಿ ನೀಡಿದ್ದಾರೆ.

ಸುತ್ತೂರು ಮಠದ ಶ್ರೀ ಗಳೊಂದಿಗೆ ಕೆಲ ಕಾಲ ಮಾತನಾಡಿ ನಂತರ ಮಾಧ್ಯದಮರಿಗೆ ಪ್ರತಿಕ್ರಿಯಿಸಿದ ಯೋಗೇಶ್ವರ್,  ಸ್ವಾಮೀಜಿಗಳ ಮುಂದೆ ನನ್ನ  ನೋವಾನ್ನು ಹೇಳಿಕೊಂಡರೆ‌‌ ಹಗುರವಾಗುತ್ತದೆ ಎಂದು ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

ಕಳೆದ‌ ಮೂರು ದಿನಗಳಿಂದ ಮಾಧ್ಯಮಗಳು ಹಾಗೂ ಪಕ್ಷದ ನನ್ನ ಸ್ನೇಹಿತರು ನನ್ನನ್ನು ಖಳನಾಯಕನ್ನಾಗಿ ಬಿಂಬಿಸುತ್ತಿದ್ದಾರೆ. ಇದು ಮನಸ್ಸಿಗೆ ಬಹಳ ನೋವಾಗಿದೆ ಎಂದಿದ್ದಾರೆ.

ನನ್ನನ್ನು ಖಳನಾಯನನ್ನಾಗಿ ಮಾಡಲು ಯತ್ನ ನಡೆದಿದೆ. ಇದರ ಹಿಂದೆ ಯಾರದ್ದೋ ಪ್ರಚೋದನೆ ಇರಬಹುದು. ವೈಯುಕ್ತಿಕವಾಗಿ ನಾನು‌ ನೀಡಿದ ಒಂದು ಹೇಳಿಕೆಯಿಂದ ಇಷ್ಟೆಲ್ಲಾ ಚರ್ಚೆ ನಡೆದಿದೆ. ಇದರಿಂದ ನಾನು ಬಹಳ ನೊಂದಿದ್ದೇನೆ ಎಂದು ನೋವನ್ನು ವ್ಯಕ್ತ ಪಡಿಸಿಕೊಂಡಿದ್ದಾರೆ.

ಸಿನಿಮಾದಲ್ಲೂ ನಾಯಕ, ರಾಜಕೀಯದ‌ಲ್ಲೂ ನಾನು‌ ನಾಯಕನಾಗಿದ್ದೇನೆ ಎಂದರು.

ಕೋವಿಡ್ ‌ ಹಿನ್ನೆಲೆಯಲ್ಲಿ ನಾನು ಎಸ್ಕಾರ್ಟ್ ಬಳಸುತ್ತಿಲ್ಲ. ಎಸ್ಕಾರ್ಟ್ ಇಲ್ಲದೆ ಓಡಾಡಿದರು ನಾನು ಸಚಿವನೆ. ಪೊಲೀಸರಿಗೆ ತೊಂದರೆಯಾಗಬಾರದು ಎಂಬುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.

ಸಚಿವ ಸಿ ಪಿ ಯೋಗೆಶ್ವರ್ ಭೇಟಿಗೂ ಮುಂಚೆಯಷ್ಟೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯಿಂದಲೂ ಸುತ್ತೂರು ಶ್ರೀಗಳ ಭೇಟಿ ಮಾಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English