ಲಾಕ್‌ಡೌನ್‌ ಜೂ.30 ರವರೆಗೂ ವಿಸ್ತರಿಸಬೇಕು : ಎಚ್‌.ಡಿ.ರೇವಣ್ಣ

10:38 PM, Tuesday, June 1st, 2021
Share
1 Star2 Stars3 Stars4 Stars5 Stars
(5 rating, 1 votes)
Loading...

HD Revannaಹಾಸನ: ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5 ಕ್ಕಿಂತ ಕೆಳಗೆ ಇಳಿಯುವರೆಗೂ ಅನ್‌ಲಾಕ್‌ ಮಾಡಕೂಡದು. ರಾಜ್ಯದಲ್ಲಿ ಲಾಕ್‌ಡೌನ್‌ ಜೂ.30 ರವರೆಗೂ ವಿಸ್ತರಿಸಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್‌.ಡಿ.ರೇವಣ್ಣ,  ಕೆಲವು ಸಚಿವರಿಗೆ ಕೊರೊನಾ ದುಷ್ಪರಿಣಾಮದ ವಾಸ್ತವವೇ ಗೊತ್ತಾಗುತ್ತಿಲ್ಲ. ಹಾಗಾಗಿ ಲಾಕ್‌ಡೌನ್‌ ತೆರವುಗೊಳಿಸಬೇಕು ಎಂದು ಹೇಳುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೆಲವು ಸಚಿವರಿಗೆ ಕಲೆಕ್ಷನ್‌ ಕಡಿಮೆಯಾಗಿರಬಹುದು. ಹಾಗಾಗಿ ಲಾಕ್‌ ಡೌನ್‌ ತೆರವಿಗೆ ಮುಂದಾಗಿರಬಹುದು ಎಂದು  ಲೇವಡಿ ಮಾಡಿದರು.

ರಾಜ್ಯದಲ್ಲಿ ಕೊರೊನಾದಿಂದ 25 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಪರೀಕ್ಷೆಗಳು ನಡೆಯಲಿ.ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೂ ಪರೀಕ್ಷೆ ನಡೆಸುವುದು ಬೇಡ. ಜುಲೈ ಅಂತ್ಯದವರೆಗ ಪರೀಕ್ಷೆ ಮುಂದೂಡಲಿ ಎಂದು ಆಗ್ರಹಿಸಿದರು.

ಹಾಸನ ಜಿಲ್ಲೆಯ ಜಿಲ್ಲೆಯಲ್ಲಿ 1.32 ಲಕ್ಷ ಜನರಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಆದರೆ 2ನೇ ಡೋಸ್‌ ಲಸಿಕೆಯನ್ನುಕೇವಲ 4,500 ಜನರಿಗೆ ಮಾತ್ರ ನೀಡಲಾಗಿದೆ. ಮೊದಲ ಡೋಸ್‌ ಪಡೆದವರು 2ನೇ ಡೋಸ್‌ಗಾಗಿ ಪರದಾಡುತ್ತಿದ್ದಾರೆ ಎಂದರು.

ಜಿಲ್ಲೆಗೆ ಕುಡಿಯುವ ನೀರು ಬಿಡಲೂ ತಾರತಮ್ಯ ಮಾಡುತ್ತಿದೆ. ಶ್ರೀ ರಾಮದೇವರ ಅಣೆಕಟ್ಟು ಅಚ್ಚುಕಟ್ಟು ಪ್ರದೇಶದಲ್ಲಿ ವರ್ಷಕ್ಕೆ 2 ಬೆಳೆಯಲಾಗುತ್ತಿತ್ತು. ಈಗ ವರ್ಷಕ್ಕೆ ಒಂದೇ ಬೆಳೆ ನಿಗದಿಪಡಿಸಲಾಗಿದೆ. ಈ ಸರ್ಕಾರ ಕಳೆದ 2ವರ್ಷಗಳಿಂದಲೂ ಹಾಸನ ಜಿಲ್ಲೆಗೆ ಅನ್ಯಾಯ ಮಾಡುತ್ತಲೇ ಬರುತ್ತಿದೆ ಎಂದು ಆರೋಪ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English