ಮೆಡಿಕಲ್‌ ಶಾಪಿಗೆ ನುಗ್ಗಿ ಮಹಿಳೆಯ ಮಾನಭಂಗಕ್ಕೆ ಯತ್ನ: ವ್ಯಕ್ತಿಯ ಬಂಧನ

12:18 AM, Wednesday, June 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rape Attemptಈಶ್ವರಮಂಗಲ: ಯಾರು ಇಲ್ಲದೆ ಇರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಔಷಧ ಖರೀದಿಗೆಂದು ಈಶ್ವರಮಂಗಲದ ಮೆಡಿಕಲ್‌ಗೆ ಬಂದು ಅಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆ ಸುಳ್ಯ ಸಮೀಪದ ಈಶ್ವರಮಂಗಲದಲ್ಲಿ ನಡೆದಿದೆ.

ಈಶ್ವರಮಂಗಲ ಕುಕ್ಕಾಜೆ ನಿವಾಸಿ ಇಬ್ರಾಹಿಂ ಕುಕ್ಕಾಜೆ (60) ಎಂಬಾತ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಮೆಡಿಕಲ್‌ನಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿದ ಇಬ್ರಾಹಿಂ ಒಳನುಗ್ಗಿ ಮಾನಭಂಗಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆ ಕಿರುಚಿದ್ದರು. ತಕ್ಷಣ ಸುತ್ತಮುತ್ತಲಿದ್ದ ಮಂದಿ ಜಮಾಯಿಸಿ ಆತನನ್ನು ಹಿಡಿದು ಈಶ್ವರಮಂಗಲ ಹೊರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಹಿಳೆ ನೀಡಿದ ದೂರಿನಂತೆ ಸಂಪ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಯನ್ನು ಪೊಲೀಸರು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English