ವಿ ಹೆಚ್ ಪಿ ಮುಖಂಡನ ವಿರುದ್ಧ ಅವಹೇಳನ : ನಾಲ್ವರ ಬಂಧನ

5:31 PM, Wednesday, June 2nd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

sharan caseಮಂಗಳೂರು :  ವಾಟ್ಸ್ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಹಾಗೂ ದುರ್ಗಾವಾಹಿನಿ ಸಂಘಟನೆಯ ಬಗ್ಗೆ ಅವಹೇಳನಕಾರಿ ಸಂದೇಶವನ್ನು ರವಾನಿಸಿರುವ ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಸುಳ್ಯ ಕಸಬಾ ತಾಲೂಕಿನ ಭವಾನಿ ಶಂಕರ್ (32), ಬಜಾಲ್‌ನ ನೌಶಾದ್ (27), ಕಾವೂರಿನ ರವಿ ಅಲಿಯಾಸ್ ಟಿಕ್ಕಿ ರವಿ (38), ಹಾಗೂ ಮೂಡಬಿದ್ರೆಯ ಜಯಕುಮಾರ್ (33) ಎಂದು ಗುರುತಿಸಲಾಗಿದೆ.

ಬಂಧಿತರು ತಮಗೆ ಬಂದಿದ್ದ ಸಂದೇಶವನ್ನು ಇತರ ಗ್ರೂಪ್ ಹಾಗೂ ಸ್ನೇಹಿತರಿಗೆ ಪಾರ್ವಾಡ್ ಮಾಡಿದ್ದಾರೆ. ಈ ಸಂದೇಶದ ಮೂಲ, ಸತ್ಯಾಸತ್ಯತೆ ಹಾಗೂ ಇತರರು ಪ್ರಕರಣದಲ್ಲಿ ಭಾಗಿಯಾಗಿರುವ ಕುರಿತಂತೆ ತನಿಖೆ ನಡೆಯತ್ತಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English