ಇನ್ನು ಮುಂದೆ ಕರ್ನಾಟಕದಲ್ಲಿ ಬಸ್ಸುಗಳ ಮೇಲೆ ಕೆಎಸ್ಆರ್‌ಟಿಸಿ ಇರಲ್ಲ, ಅದು ಕೇರಳದ ಪಾಲಾಗಿದೆ

1:11 AM, Thursday, June 3rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

ksrtcBus. ಮಂಗಳೂರು  : ಕರ್ನಾಟಕ ಮತ್ತು ಕೇರಳ ಸರ್ಕಾರಿ ಬಸ್ಸುಗಳು ಕೆಎಸ್ಆರ್‌ಟಿಸಿ ಅಂತ ಕಡಿತ ಗೊಳಿಸಿದ ಇಂಗ್ಲಿಷ್ ಪದ ಬಳಸುತ್ತಿತ್ತು. ಆದರೆ ಆ  ಕೆಎಸ್ಆರ್‌ಟಿಸಿ  ಪದವನ್ನು ಕೇರಳ ಮಾತ್ರ ಪದ ಬಳಸಬೇಕು ಎಂದು ಕೇಂದ್ರ ವ್ಯಾಪಾರ ಗುರುತು ನೋಂದಾವಣಿ(ಟ್ರೇಡ್ ಮಾರ್ಕ್ ರಿಜಿಸ್ಟಿ) ಅಂತಿಮ ತೀರ್ಪು ನೀಡಿದೆ.

ಕೇರಳ ಮಾತ್ರ ಇನ್ನು ಮುಂದೆ ತನ್ನ ಸಾರಿಗೆ ಸಂಸ್ಧೆಯನ್ನು ಕೆಎಸ್ಆರ್‌ಟಿಸಿ ಅಂತ ಬಳಸಬೇಕು. ಅಲ್ಲದೆ ಕರ್ನಾಟಕ ರಾಜ್ಯದ ಸಾರಿಗೆ ಬಸ್ ಮತ್ತು ಇತರ ಕಡೆ ನೋದಾಯಿಸಿದ್ದ, ಪ್ರಕಟನೆ ಬೋರ್ಡ್ ಎಲ್ಲ ಲೋಗೋ ಮತ್ತು ಚಿತ್ರಗಳನ್ನು ತೆಗೆಯ ಬೇಕು ಎಂದು ಹೇಳಿದೆ.

ಕರ್ನಾಟಕ ಮತ್ತು ಕೇರಳ ನಡುವೆ ಹಲವು ವರ್ಷಗಳಿಂದಲೂ ಕೆಎಸ್ಆರ್‌ಟಿಸಿ ಪದ ಬಳಕೆಯ ನಿಮಿತ್ತ  ಕಾನೂನು ಸಮರ ನಡೆಸುತ್ತಾ ಬಂದಿ ತ್ತು.

ಕೆಎಸ್ಆರ್‌ಟಿಸಿ  ಆನ್ ಲೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡುವವರಿಗೆ ಸಮಸ್ಯೆ ಉಂಟು ಮಾಡಿತ್ತು. ಹೀಗಾಗಿ ಕೇರಳ ಸರ್ಕಾರ ಆಕ್ಷೇಪವೆತ್ತಿತ್ತು.

ಕರ್ನಾಟಕ ಕೆಎಸ್ಆರ್‌ಟಿಸಿ ಟ್ರೇಡ್ ಮಾರ್ಕ್ ಅನ್ನು ತಾನು ಮಾತ್ರ ಬಳಸಲು ಅವಕಾಶ ನೀಡುವಂತೆ ಕೋರಿ 2014ರಲ್ಲಿ ಕೇಂದ್ರ ಟ್ರೇಡ್ ಮಾರ್ಕ್ ನೋದಂಣಿ ಪ್ರಾಧಿಕಾರದ ಮೆಟ್ಟಿಲೇರಿತ್ತು. ಕೇರಳ ಸಹ ಪ್ರತಿದೂರು  ನೀಡಿತ್ತು.

ಮೈಸೂರು ಸರ್ಕಾರಿ ರಸ್ತೆ ಸಾರಿಗೆ ಇಲಾಖೆ(ಎಂಜಿಆರ್‌ಟಿಡಿ) ಎಂದು 1948ರಲ್ಲಿ ಕರ್ನಾಟಕದಲ್ಲಿ ಬಸ್ ಸೇವೆ ಆರಂಭವಾದಾಗ ಅದನ್ನು ಕರೆಯಲಾಗಿತ್ತು. ಆದರೆ 1973ರ ನಂತರ ಮೈಸೂರು ಕರ್ನಾಟಕ ಅಂತ ನಾಮಕರಣವಾದ ಮೇಲೆ ಕೆಎಸ್ಆರ್‌ಟಿಸಿ ಪದ ಬಳಸಲು ಆರಂಭಿಸಿತ್ತು.

ಕೆಎಸ್ಆರ್‌ಟಿಸಿಗೂ ಮೊದಲು ಕೇರಳದಲ್ಲೂ ತಿರುವಾಂಕೂರು ರಾಜ್ಯ ಸಾರಿಗೆ ಇಲಾಖೆ(ಟಿಎಸ್ಟಿಡಿ) ಎಂದು ಕರೆಯಾಗುತ್ತಿತ್ತು. ಬಳಿಕ 1965 ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಕಾರ್ಪೋರೇಶನ್ ಆಗಿತ್ತು. ಇದನ್ನು ಮುಂದಿಟ್ಟುಕೊಂಡು ಕೇರಳ ವಾದ ಮಂಡಿಸಿ ಕೆಎಸ್ಆರ್‌ಟಿಸಿ ಪದವನ್ನು ತನ್ನದಾಗಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English