ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಬ್ಲ್ಯಾಕ್‍ಮೇಲ್ , ಇಬ್ಬರು ಆರೋಪಿಗಳಿಗೆ ಜಾಮೀನು ನೀಡಬೇಡಿ : ಎಸ್‍ಐಟಿ

11:05 AM, Thursday, June 3rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Nareshಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಲ್ಯಾಕ್‍ಮೇಲ್  ಮಾಡಿದ ಇಬ್ಬರು ಪತ್ರಕರ್ತರಿಗೆ ಆರೋಪಿಗಳಿಗೆ ಜಾಮೀನು ನೀಡಬಾರದು ಎಂದು  ಎಂದು ಎಸ್‍ಐಟಿ ಆಕ್ಷೇಪಣೆ ಸಲ್ಲಿಸಿದೆ.

ಉತ್ತರ ಕರ್ನಾಟಕದ ಯುವತಿಯೊಬ್ಬಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದ ರಮೇಶ್ ಜಾರಕಿಹೊಳಿಯವರ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಕಾರ್ಯಕರ್ತ ಪೊಲೀಸರಿಗೆ ನೀಡಿದ್ದರು. ರಮೇಶ್ ಜಾರಕಿಹೊಳಿ ಆ ಯುವತಿಯನ್ನು ಹೆದರಿಸಿ, ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು, ಈ ವಿಷಯವನ್ನು ಯಾರಿಗೂ ಹೇಳದಂತೆ ಆಕೆಗೆ ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ, ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಲಾಗಿತ್ತು.

ಪ್ರಕರಣದ ಶಂಕಿತರಾಗಿದ್ದ ಪತ್ರಕರ್ತರಾಗಿದ್ದ ನರೇಶ್ ಮತ್ತು ಶ್ರವಣ್ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಪೊಲೀಸರು ಈ ಇಬ್ಬರನ್ನು ಬಂಧಿಸಲು ವಿಶೇಷ ತಂಡ ರಚಿಸಿ ದಾಳಿ ಮಾಡಿದ್ದರು. ಪೊಲೀಸರ ಕೈಗೆ ಸಿಗದೇ ನಾಪತ್ತೆಯಾಗಿದ್ದ ಇಬ್ಬರು ಈಗ ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ.

ಅವರು ವಿಡಿಯೋ ರಿಲೀಸ್ ಆದ ದಿನವೇ ತಲೆ ಮರೆಸಿಕೊಂಡಿದ್ದಾರೆ. ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ. ದೂರುದಾರರಿಗೆ ಬೆದರಿಕೆ ಹಾಕಿದ್ದಕ್ಕೆ ಸಾಕ್ಷ್ಯಗಳಿದ್ದು, ಹೊರರಾಜ್ಯದಲ್ಲಿ ಯುವತಿಯ ಜೊತೆಯಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳಿವೆ. ಸಾಕ್ಷ್ಯಗಳ ಪ್ರಕಾರ ಕೆಲವೊಂದು ವೀಡಿಯೋ ತುಣುಕುಗಳನ್ನು ದೂರುದಾರರಿಗೆ ನೀಡಿದ್ದಾರೆ. ಆರೋಪಿಗಳು ಯುವತಿಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಆಕ್ಷೇಪಣೆ ಸಲ್ಲಿಕೆಯಲ್ಲಿ ಎಸ್‍ಐಟಿ ಹೇಳಿದೆ.

ಆರೋಪಿಗಳ ವಿಚಾರಣೆ ಮಾಡಲು ಇನ್ನೂ ಸಾಧ್ಯವಾಗಿಲ್ಲ.  ಆರೋಪಿಗಳು ಕೆಲವೊಂದು ಕಡೆ ಆಸ್ತಿ ಖರೀದಿಗೆ ಪ್ರಯತ್ನಿಸಿದ್ದಾರೆ ಎಂಬ ದೂರು ಇದೆ. ಜಾಮೀನು ಸಿಕ್ಕರೆ ವಿಚಾರಣೆಗೆ ಸರಿಯಾಗಿ ಸಹಕಾರ ನೀಡುವುದಿಲ್ಲ ಅನ್ನೋ ಅನುಮಾನ ಇದೆ. ಆರೋಪಿಗಳ ಚಟುವಟಿಕೆ ಬಗ್ಗೆ 17 ಸಾಕ್ಷ್ಯಗಳಿವೆ. 17 ಸಾಕ್ಷ್ಯಗಳ ಬಗ್ಗೆ ಸಿಆರ್ ಪಿಸಿ 164 ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಜೊತೆ ಯುವತಿ ನೇರ ಸಂಪರ್ಕ ಹೊಂದಿದ್ದಾರೆ ಎಂದು ತಿಳಿದು ಬಂದಿದೆ .

ಆರೋಪಿಗಳ ವಿರುದ್ಧ  17 ಜನರ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲು ಮಾಡಲಾಗಿದೆ. ಆರೋಪಿಗಳ ವಿರುದ್ಧ 17 ಜನ ಸಾಕ್ಷ್ಯ ನುಡಿದಿದ್ದಾರೆ. ಪ್ರಭಾವ ಬಳಸಿ ತಪ್ಪಿಸಿಕೊಳ್ಳುವ ಸಾಧ್ಯತೆ  ಇದೆ. ಆರೋಪಿಗಳ ವಿರುದ್ಧ ಕೆಲವೊಂದು ಹಳೆಯ ಆರೋಪಗಳಿವೆ. ಜಾಮೀನು ನೀಡಬೇಡಿ ಎಂದು ನ್ಯಾಯಾಲಯ ಮುಂದೆ ಎಸ್‍ಐಟಿ ಮನವಿ ಮಾಡಿಕೊಂಡಿದೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English