ಕರ್ನಾಟಕ ವಿವಿಯಲ್ಲಿ ಉದ್ಯೋಗಾವಕಾಶ

5:00 PM, Thursday, June 3rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Dharvad VVಧಾರವಾಡ : ಕರ್ನಾಟಕ ವಿಶ್ವ ವಿದ್ಯಾಲಯ ವಿವಿಧ ಹುದ್ದೆಗಳ ಭರ್ತಿಗೆ ಕಳೆದ ತಿಂಗಳು ನೋಟಿಫಿಕೇಶನ್ ಬಿಡುಗಡೆ ಮಾಡಿತ್ತು. ಸದರಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಕೊನೆ ಎರಡು ದಿನ ಬಾಕಿ ಇದೆ. ವಿವಿಯ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಇನ್ನೂ ಅರ್ಜಿ ಸಲ್ಲಿಸದಿದ್ದಲ್ಲಿ, ಬೇಗೆ ಬೇಗ ಅರ್ಜಿ ಸಲ್ಲಿಸಿ.

ಕರ್ನಾಟಕ ವಿವಿಯು ಈ ಕೆಳಗೆ ತಿಳಿಸಲಾದ ಹುದ್ದೆಗಳನ್ನು ತಾತ್ಕಾಲಿಕವಾಗಿ ಸಂಚಿತ ವೇತನ ಆಧಾರದಲ್ಲಿ ನೇಮಕ ಮಾಡಲಾಗುತ್ತದೆ.

ಹುದ್ದೆಗಳ ವಿವರ:
ಸಹಾಯಕ ನಿರ್ದೇಶಕರು: 1 ಹುದ್ದೆ- ವೇತನ 24,540 ರೂ.
ಕಾರ್ಯಾಗಾರ ಅಧಿಕಾರಿಗಳು/ ವ್ಯವಸ್ಥಾಪಕರು: 1 ಹುದ್ದೆ. ವೇತನ- 25,860 ರೂ.
ಕಿರಿಯ ಇಂಜಿನಿಯರ್ (ಸಿವಿಲ್): 2 ಹುದ್ದೆ- 24,540 ರೂ.
ವರ್ಕ್‌ ಸೂಪರ್‌ವೈಸರ್: 2 ಹುದ್ದೆ- ವೇತನ 22,740 ರೂ.
ಇಲೆಕ್ಟ್ರೀಷಿಯನ್: 3 ಹುದ್ದೆ- ವೇತನ 12,840 ರೂ.
ಕಾರ್ಪೆಂಟರ್ (ಬಡಿಗ): 1 ಹುದ್ದೆ- ವೇತನ 12,840 ರೂ.
ಟರ್ನರ್: 1 ಹುದ್ದೆ- ವೇತನ 11,160 ರೂ.
ಫಿಟ್ಟರ್: 1 ಹುದ್ದೆ- ವೇತನ 11,160 ರೂ.
ಸಹಾಯಕ ತೋಟಗಾರಿಕೆ ಅಧಿಕಾರಿಗಳು: 1 ಹುದ್ದೆ- ವೇತನ 20,070 ರೂ.
ಸಹಾಯಕ (ಕಾನೂನು ಕೋಶ): 1 ಹುದ್ದೆ- ವೇತನ 18,210 ರೂ.
ಪ್ಲೇಸ್‌ಮೆಂಟ್ ಅಧಿಕಾರಿ: 1 ಹುದ್ದೆ- ವೇತನ 25,000 ರೂ.

ಶೈಕ್ಷಣಿಕ ಅರ್ಹತೆಗಳು: ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಪಿಯುಸಿ/ ಪದವಿ / ಸ್ನಾತಕೋತ್ತರ ಪದವಿ ಉತ್ತೀರ್ಣರಾಗಿರಬೇಕು. ಹಾಗೂ ವಿವಿ ನಿಗದಿಪಡಿಸಿದ ಕಾರ್ಯಾನುಭವಗಳನ್ನು ಹೊಂದಿರಬೇಕು.

ವಯೋಮಿತಿ ಅರ್ಹತೆಗಳು ಏನು?
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ/ ಎಸ್‌ಟಿ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ನಿಗದಿತ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳಿಗೆ ವಿಶ್ವವಿದ್ಯಾಲಯದ ವತಿಯಿಂದ ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ವಿವಿಯ ವೆಬ್‌ಸೈಟ್‌ www.kud.ac.in ಗೆ ಭೇಟಿ ನೀಡಬೇಕು. ಲಭ್ಯ ಇರುವ ನೋಟಿಫಿಕೇಶನ್‌ ಕಾಲಂನಿಂದ ಅರ್ಜಿ ಡೌನ್‌ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ 05-06-2021 ರೊಳಗೆ ಅಥವಾ ಲಾಕ್ಡೌನ್‌ ಇದ್ದಲ್ಲಿ ನಂತರದಲ್ಲಿಯೂ ಲಾಕ್‌ಡೌನ್‌ ಅವಧಿ ಮುಗಿದ ದಿನಾಂಕದಿಂದ 10 ಕರ್ತವ್ಯದ ದಿನಗಳೊಳಗಾಗಿ ಕಚೇರಿ ವೇಳೆಯಲ್ಲಿ ವಿಶ್ವವಿದ್ಯಾಲಯದ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯುರೋ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English