ಮಂಗಳೂರು :ಭಾನುವಾರ ನಗರದ ಸಾಹಿತ್ಯ ಸದನದಲ್ಲಿ ನಡೆದ ಕರಾವಳಿ ಲೇಖಕಿಯರ-ವಾಚಕಿಯರ ಬೆಳ್ಳಿ ಹಬ್ಬದ ಸಮಾರೋಪಾ ಸಮಾರಂಭವನ್ನು ಖ್ಯಾತ ಲೇಖಕಿ ವೈದೇಹಿಯವರು ಉದ್ಘಾಟಿಸಿ ಮಾತನಾಡಿದರು, ಪ್ರಸ್ತುತ ನಮ್ಮ ಸುತ್ತಮುತ್ತಲ ಘಟನೆಗಳನ್ನು ಗಮನಿಸಿದಾಗ ಹೆಣ್ಣಿಗೆ ಹೆಣ್ಣಿನ ದೇಹವೇ ಶತ್ರು ಎಂಬಂಥಹ ಮಾತುಗಳು ಕೇಳಿಬರುತ್ತಿವೆ, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಗಮನಿಸಿದಾಗ ಆಕೆ ಅಪಾಯದಲ್ಲಿರುವಾಗ ಆಕೆಗೆ ನೆರವಾಗುವ ತಂತ್ರಜ್ಞಾನವೊಂದು ಸೃಷ್ಟಿಯಾಗಬಾರದೆ ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.
ಆಧುನಿಕ ಯುಗದಲ್ಲಿ ಮಹಿಳೆಯನ್ನು ತುಚ್ಛವಾಗಿ ಕಾಣುವ ಪರಿಪಾಠ ಹೆಚ್ಚುತ್ತಿದ್ದು ದಿನನಿತ್ಯದ ಘಟನೆಗಳನ್ನು ಗಮನಿಸುವಾಗ ನೆಮ್ಮದಿ ದೂರವಾಗುತ್ತದೆ. ನಮ್ಮಲ್ಲಿ ಬಹುಪಾಲು ಮಹಿಳೆಯರು ದಿನನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆಗೊಳಗಾಗುತ್ತಿದ್ದಾರೆ. ಆದ್ದರಿಂದ ಮಹಿಳೆಯರು ತಮ್ಮಲ್ಲಿ ಆತ್ಮಶಕ್ತಿ ಬೆಳೆಸಿಕೊಂಡು ಸಂಘಟಿತರಾಗಿ ತಮ್ಮ ಮೇಲಾಗುವ ಶೋಷಣೆಯ ವಿರುದ್ದ ಸೆಟೆದು ನಿಲ್ಲಬೇಕು ಆಗ ಮಾತ್ರ ಮಹಿಳೆಗೆ ನಿರ್ಭಯವಾಗಿ ಬದುಕುವ ವಾತಾವರಣ ಸೃಷ್ಟಿಯಾಗಬಲ್ಲುದು. ಮಹಿಳೆಯರ ಮೇಲಾಗುವ ದೌರ್ಜನ್ಯದ ವಿರುದ್ಧ ನಡೆಯುವ ಪ್ರತಿಭಟನೆಯ ತೀವ್ರತೆ ಹೆಚ್ಚಾಗದ ಕಾರಣ ಎಲ್ಲಾ ರೀತಿಯ ದೌರ್ಜನ್ಯ ಸಮಾಜದ ಅರಿವಿಗೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಪ್ರತಿಭಟಿಸಬೇಕಾದ ಅಗತ್ಯವಿದೆ. ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ ಮಹಿಳೆಯ ಹಾಗೂ ಸಮಾಜದ ರಕ್ಷಣೆಗೆ ಉಪಾಯೋಗವಾಗುವಂತಹ ಸಾಧನಗಳು ಇನ್ನೂ ಸಂಶೋಧಿಸಲ್ಪಟ್ಟಿಲ್ಲ, ಮಹಿಳೆ ದೌರ್ಜನ್ಯದಿಂದ ಸ್ವರಕ್ಷಿಸಿಕೊಳ್ಳುವ ಸಾಧನದ ಆವಿಷ್ಕಾರದ ಅಗತ್ಯತೆ ಈ ದಿನಗಳಲ್ಲಿ ಇದೆ ಎಂದು ಹೇಳಿದರು.
ಸಮಾರಂಭದ ಅಥಿತಿಯಾಗಿ ಆಗಮಿಸಿದ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ.ಎಚ್.ನಾಗವೇಣಿ, ಎಲ್ಲಾ ಕ್ಷೇತ್ರಗಳಲ್ಲಿದ್ದಂತೆ ಸಾಹಿತ್ಯ ಕ್ಷೇತ್ರದಲ್ಲೂ ಲೇಖಕಿಯರು ಬಳಸುವ ಭಾಷೆಯ ಮೇಲೆ ನೈತಿಕತೆ ಚೌಕಟ್ಟನ್ನು ಹೇರಿರುವ ಈ ಸಮಾಜವು ಲೇಖಕನಿಗೆ ಇದರಿಂದ ವಿನಾಯತಿ ನೀಡಿದೆ. ಇದು ಎಸ್ಟರ ಮಟ್ಟಿಗೆ ಸರಿ ತಾರತಮ್ಯ ಸಾಹಿತ್ಯ ಕ್ಷೇತ್ರವನ್ನು ಬಿಟ್ಟಿಲ್ಲ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಕರಾವಳಿ ಲೇಖಕಿಯರ- ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಸಬೀಹಾ ಭೂಮಿಗೌಡ ಸಂಘದ ಉಪಾಧ್ಯಕ್ಷೆ ಜಾನಕಿ ಎಂ.ಬ್ರಹ್ಮಾವರ, ಕಾರ್ಯದರ್ಶಿ ಡಾ.ಶೈಲಾ ಯು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English