ಬೆಂಗಳೂರು : ಅಪರ ಕ್ರಿಯೆ ನಂತರ ಕ್ಷೇತ್ರ ದರ್ಶನ ಮಾಡುವುದು ವಾಡಿಕೆ ಹಿನ್ನೆಲೆಯಲ್ಲಿ ಇಂದು ಕಂದಾಯ ಸಚಿವ ಆರ್ ಅಶೋಕ ನಗರದ ಪುರಾತನ ಕೋಟೆ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ದರ್ಶನ ಪಡೆದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ,”ನಿನ್ನೆ ಕಾರ್ಯ ಮಾಡಿದ ನಂತರ ಎಲ್ಲ ಸತ್ ಸಂಪ್ರದಾಯಗಳನ್ನ ಪಾಲಿಸಿದ್ದೇನೆ. ಅದೇ ರೀತಿ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದೇನೆ. ಕೋವಿಡ್ ನಿಯಮಾವಳಿಯ ಹಿನ್ನೆಲೆಯಲ್ಲಿ ಹೊರಗಿನಿಂದಲೇ ದರ್ಶನ ಪಡೆದಿದ್ದೇನೆ. ನಿನ್ನೆ 566 ಜನರ ಅಸ್ಥಿ ವಿಸರ್ಜನೆಯಾಗಿದೆ. ಈಗಾಗಲೇ ಸರ್ಕಾರ ಆದೇಶ ಮಾಡಿದೆ, ಅಸ್ಥಿ ವಿಸರ್ಜನೆಗೆ ಹೋಗುವವರನ್ನ ಯಾರೂ ತಡೆಯುವಂತಿಲ್ಲ. ಹೀಗಾಗಿ ಸಾರ್ವಜನಿಕರು ಈ ಕಾರ್ಯವನ್ನ ನಿಲ್ಲಿಸ ಕೂಡದು. ಒಂದು ವೇಳೆ ಅಸ್ಥಿಯನ್ನ ಕುಟುಂಬಸ್ಥರು ತೆಗೆದುಕೊಂಡು ಹೋಗದಿದ್ದರೆ ಜಿಲ್ಲಾಡಳಿತವೇ ಆ ಕಾರ್ಯವನ್ನ ಮಾಡಲಿದೆ. ನಾವು ಕನ್ನಡಿಗರು ಸೌಜನ್ಯಕ್ಕೆ ಹೆಸರಾದವರು. ಹೀಗಾಗಿ ಬೇರೆ ರಾಜ್ಯಗಳ ಸ್ಥಿತಿ ಇಲ್ಲಿ ಕಾಣುವುದಕ್ಕೆ ಸಾಧ್ಯವಿಲ್ಲ. ಎಲ್ಲರಿಗೂ ಗೌರವಯುತ ಹಾಗೂ ಸಾಂಪ್ರದಾಯಿಕ ವಿಧಿ ವಿಧಾನಗಳನ್ನ ಪೂರೈಸಲಾಗಿದೆ.
ಈ ಕಾರ್ಯ ಮಾಡಿಸಿದ ಭಗವಂತನಿಗೆ ನನ್ನ ನಮನಗಳನ್ನ ಸಲ್ಲಿಸುತ್ತೇನೆ”, ಎಂದು ಹೇಳಿದರು.
Click this button or press Ctrl+G to toggle between Kannada and English