ರಾಣಿ ಚನ್ನಮ್ಮಾ ಪಾರ್ಟಿಯಿಂದ ವಿಕಲಚೇತನರಿಗೆ ಕೊರೋನಾ ಲಸಿಕಾ ಅಭಿಯಾನಕ್ಕೆ ಉಚಿತ ವಾಹನ

4:58 PM, Friday, June 4th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rani Chennamma
ಬೆಟಗೇರಿ : ಕೋವಿಡ್-19 ಕೊರೊನಾ 2ನೇ ಅಲೆಯಿಂದ ಈಡೀ ದೇಶವೇ ಸಂಕಷ್ಟಕ್ಕೆ ಒಳಗಾಗಿದೆ. ಕೊರೋನಾ ಸೋಲಿಸಲು ಸಾಮಾಜಿಕ ಅಂತರದೊಂದಿಗೆ, ಸ್ಯಾನಿಟೈಸರ್ ಹಾಗೂ ಮಾಸ್ಕ ಧರಿಸುವುದು ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಶಾಶ್ವತ ಪರಿಹಾರಕ್ಕೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದ್ದಾಗಿದ್ದು, ರಾಜ್ಯ ಸರಕಾರದಿಂದ 18 ವರ್ಷ ಮೇಲ್ಪಟವರಿಗೆ ವಿಕಲಚೇತನರು ಹಾಗೂ ಆರೈಕೆದಾರರಿಗೆ ಕೊವಿಡ್-19 ಲಸಿಕೆಯ ಪಡೆಯಲು ಆದ್ಯತಾ ಗುಂಪಾಗಿ ಗುರುತಿಸಲಾಗಿದ್ದು, ಗದಗ-ಬೆಟಗೇರಿ ಅವಳಿ ನಗರದಲ್ಲಿ ಇರುವ 18 ವರ್ಷ ಮೇಲ್ಪಟ್ಟ ವಿಕಲಚೇತನರಿಗೆ ಹಾಗೂ ಆರೈಕೆದಾರರಿಗೆ ದಿನಾಂಕ : 06.06.2021 ರವಿವಾರ ಬೆಳಗ್ಗೆ : 10 ರಿಂದ ಕೊರೋನಾ ಲಸಿಕಾ ಅಭಿಯಾನದ ಸ್ಥಳ ವಿಶ್ವ ಕಲ್ಯಾಣ ಸಂಸ್ಥೆಯ ದಿವ್ಯಾಂಗ ಚೇತನ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆ, ಬಿ.ಬಿ.ಹೊಂಬಳ ಕಟ್ಟಡ, ಕೊಳಿಕೇರಿ ಕ್ರಾಸ್,ಪೊಲೀಸ್ ಅಥಿತಿ ಗೃಹ ಎದುರಿಗೆ, ಕೆಇಬಿ ಹತ್ತಿರ, ಮುಳಗುಂದ ನಾಕಾ ರಸ್ತೆ, ಗದಗ. ಇಲ್ಲಿ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವ್ಯವಸ್ಥೆ ಮಾಡಲಾಗಿದೆ.

ರಾಣಿ ಚನ್ನಮ್ಮಾ ಪಾರ್ಟಿಯಿಂದ ವಿಕಲಚೇತನರಿಗೆ ಹಾಗೂ ಆರೈಕೆದಾರರಿಗೆ ಉಚಿತವಾಗಿ ವಾಹನಗಳಲ್ಲಿ ಕರೆದುಕೊಂಡು ಹೋಗಿ ಕೊರೋನಾ ಲಸಿಕೆಯನ್ನು ಹಾಕಿಸಿ, ವಾಪಸ್ ಮನೆಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಆರ್ಸಿಪಿಯ ಎಮ್.ಬಿ. ದೇಸಾಯಿ, ಜಗದೀಶ ಬಿದರೂರ, ಎಚ್.ಡಿ.ಮಂಜುನಾಥ, ಚಂದ್ರಶೇಖರ ಗದಗಿನ, ರಾಘವೇಂದ್ರ ಮೈ. ಅರಣಿ, ಈರಣ್ಣಾ ಕಾಂಬಳೆ, ವಿಶ್ವನಾಥ ಕುದುರಿ, ಶ್ರೀನಿವಾಸ ಕುದುರಿ, ಎಮ್.ಎಫ್.ಡೋಣಿ, ಬಸವರಾಜ ವಾರಿ ಹಾಗೂ ಎಮ್ಆರ್ಡಬ್ಲ್ಯ ಖಾಜಾಹುಸೇನ ಕಾತರಕಿ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹಾಗೂ ಉಚಿತ ವಾಹನ ಸೇವೆಗೆ ಸಂಪರ್ಕಿಸಿ: 9986104007 / 9741493007 / 9986802297/ 9844385566 / 8867556465 / 8884166088 / 7892348973.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English