ನಾವೂ ಕೊರೊನಾ ವಾರಿಯರ್ಸ್ ಅಲ್ಲವೆ? ಔಷಧಿ ವಿತರಕರ ಪ್ರಶ್ನೆ

5:13 PM, Friday, June 4th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

medical ಹುಬ್ಬಳ್ಳಿ: ಆರೋಗ್ಯದಲ್ಲಿ ಏರು ಪೇರು ಕಂಡುಬಂದ ತಕ್ಷಣ ಜನರು ಹೋಗುವುದು ಮೆಡಿಕಲ್ ಸ್ಟೋರ್ ಗಳತ್ತ, ಹೀಗಿರುವಾಗ ಇದೀಗ ಕೊರೋನಾ ಹಾವಳಿಯಲ್ಲಿ ಸೋಂಕಿತರೆ ಹೆಚ್ಚಿನ ಸಂಖ್ಯೆಯಲ್ಲಿ ಔಷಧ ಖರೀದಿಗೆ ಬರುತ್ತಾರೆ. ಈ ವೇಳೆ ಫಾರ್ಮಸಿಸ್ಟ್‌ಗಳು ಹಾಗೂ ಅಲ್ಲಿನ ಕೆಲಸಗಾರರು ಸೋಂಕಿತರ ನೇರ ಸಂಪರ್ಕಕ್ಕೆ ಸಿಲುಕುವಂತಾಗಿದ್ದು. ಈ ಕಠಿಣ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವುದೇ ಸವಾಲಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಸಣ್ಣಪುಟ್ಟ ಆರೋಗ್ಯ ಸಮಸ್ಯೆಯ ಜೊತೆಗೆ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದವರೂ ಔಷಧ ಖರೀದಿಗೆ ಮಳಿಗೆಗಳತ್ತ ಮೊದಲು ಧಾವಿಸುತ್ತಾರೆ. ಔಷಧ ಮಾರಾಟದ ವೇಳೆ ಅಂಗಡಿ ಯಲ್ಲಿರುವವರಿಗೂ ಸೋಂಕು ಹರಡಬಹುದು. ಈ ಸ್ಥಿತಿಯಲ್ಲೇ ನಾವು ಕೆಲಸ ಮಾಡುವುದು ಅನಿವಾರ್ಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English