ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಭರ್ಜರಿ ಹಣ, ತಿಂಗಳ ಸಂಬಳ 6 ಲಕ್ಷ ರೂ. !

3:01 PM, Saturday, June 5th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Davanagereದಾವಣಗೆರೆ : ಇಲ್ಲಿನ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಭರ್ಜರಿ ಹಣ ಬಿದ್ದಿದೆ ಅದು  ಆರು ಲಕ್ಷ ರೂ. ಹೀಗೆ ಒಟ್ಟು 50 ಸದಸ್ಯರಿಗೆ ತಲಾ ಆರು ಲಕ್ಷದಂತೆ ಮೂರು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಹಾಕಿದ್ದಾರೆ.

ಮಹಾನಗರ ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳು ಆರು ಸಾವಿರ ರೂಪಾಯಿ ಹಾಕುವ ಬದಲಿಗೆ ಆರು ಲಕ್ಷ ರೂ. ಹಾಕಿ ಎಡವಟ್ಟು ಮಾಡಿದ್ದಾರೆ. ಪ್ರತಿ ತಿಂಗಳ ಪಾಲಿಕೆ ಸದಸ್ಯರಿಗೆ ಆರು ಸಾವಿರ ರೂಪಾಯಿ ಸಹಾಯ ಧನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಆದರೆ ಹಣಕಾಸು ವಿಭಾಗದ ಅಧಿಕಾರಿಗಳು ಆರು ಸಾವಿರ ಬದಲಿಗೆ ಸದಸ್ಯರಿಗೆ ತಲಾ ಆರು ಲಕ್ಷ ರೂ. ಹಣ ಹಾಕಿ ಪಾಲಿಕೆ ಹಣ ಖಾಲಿ ಮಾಡಿದ್ದರು.

ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾದ 45 ಸದಸ್ಯರು ಹಾಗೂ ನಾಮನಿರ್ದೇಶನರಾದ ಐದು ಸದಸ್ಯರು ಸೇರಿದಂತೆ ಒಟ್ಟು 50 ಸದಸ್ಯರಿದ್ದಾರೆ. ಪ್ರತಿಯೊಬ್ಬ ರಿಗೂ  ತಲಾ ಆರು ಲಕ್ಷದಂತೆ ಮೂರು ಕೋಟಿ ಹಣವನ್ನು ಪಾಲಿಕೆ ಅಧಿಕಾರಿಗಳು ಹಾಕಿದ್ದಾರೆ. ಮೇ 28 ರಂದು ಆರು ಲಕ್ಷ ರೂ. ಹಾಕಿದ್ದು, ಹೀಗೆ ಲಕ್ಷ ಲಕ್ಷ ಹಣ ಬಂದಿದ್ದು ನೋಡಿ ಸದಸ್ಯರು ಹಣ ನಗದೀಕರಿಸಿದ್ದಾರೆ.

ಈ ಬಗ್ಗೆ ಮಹಾನಗರ ಪಾಲಿಕೆ ಮೇಯರ್ ಎಸ್.ಟಿ.ವೀರೇಶ  ಈ ಪ್ರಮಾದವನ್ನು ಪರಿಶೀಲನೆ ಮಾಡಲಾಗಿದೆ. ಬ್ಯಾಂಕ್ ಸಿಬ್ಬಂದಿ ತಪ್ಪಿನಿಂದಾಗಿ ಇದು ಆಗಿದೆ. ಆದರೆ ಈಗ ಸರಿಯಾಗಿದೆ. ಕೆಲವರು ಹಣ ಬಳಸಿಕೊಂಡಿದ್ದಾರೆ. ಸಿಬ್ಬಂದಿ ತಪ್ಪಿನಿಂದ ತಮ್ಮ ಖಾತೆಗೆ ಹಣ ಬಂದಿದೆ. ಆ ಹಣವನ್ನು ಅವರು ವಾಪಸ್ ಸಹ ಪಡೆದಿದ್ದಾರೆ. ಆದರೆ ಐಟಿ ವಿವರ ನೀಡುವಾಗ ಇದು ತೊಂದರೆ ಆಗಲಿದೆ. ಇದಕ್ಕಾಗಿ ಬ್ಯಾಂಕಿನಿಂದ ಅಧಿಕೃತ ಪತ್ರ ಸಹ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English